ಮನವೆಂಬ ಸಾಗರದಲ್ಲಿ
ನೆನಪುಗಳೆಂಬ ಮೀನು ಹಿಡಿಯಲು
ಗಾಳ ಹಾಕಿ ಕೂತಿರುವ ಮೀನುಗಾರ ನಾನು
ಕೆಲವೊಮ್ಮೆ ರಾಶಿ ರಾಶಿ ಮೀನು
ಹೆಕ್ಕಿದಷ್ಟೂ , ಅಗಣಿತ
ಹಲವೊಮ್ಮೆ ಖಾಲಿ ಕೈ
ಕಾಣಲೂ ಇಲ್ಲ
ಬೇಡವೆಂದರೂ ನೀರಿನಿಂದ
ಮೇಲಕ್ಕೆ ಪುಳಕ್ಕನೆ ಹಾರಿ
ಮಾಯವಾಗುತ್ತವೆ
ಆಗಾಗ ಕುಳಿತಿರುತ್ತೇನೆ
ಇದನ್ನೇ ನೋಡಲೆಂದು
ಆದರೆ ಕಾಣುವುದೇ ಇಲ್ಲ
ಬೇಕಾದಾಗ ಎಂದೂ
ಮಾರುವುದಿಲ್ಲ ನಾನು
ಈ ಮೀನನೆಂದು
ಮಾರುಹೋಗುತ್ತೇನೆ
ಈ ಮೀನಿಗೆ ಎಂದೆಂದೂ
ನೆನಪುಗಳೆಂಬ ಮೀನು ಹಿಡಿಯಲು
ಗಾಳ ಹಾಕಿ ಕೂತಿರುವ ಮೀನುಗಾರ ನಾನು
ಕೆಲವೊಮ್ಮೆ ರಾಶಿ ರಾಶಿ ಮೀನು
ಹೆಕ್ಕಿದಷ್ಟೂ , ಅಗಣಿತ
ಹಲವೊಮ್ಮೆ ಖಾಲಿ ಕೈ
ಕಾಣಲೂ ಇಲ್ಲ
ಬೇಡವೆಂದರೂ ನೀರಿನಿಂದ
ಮೇಲಕ್ಕೆ ಪುಳಕ್ಕನೆ ಹಾರಿ
ಮಾಯವಾಗುತ್ತವೆ
ಆಗಾಗ ಕುಳಿತಿರುತ್ತೇನೆ
ಇದನ್ನೇ ನೋಡಲೆಂದು
ಆದರೆ ಕಾಣುವುದೇ ಇಲ್ಲ
ಬೇಕಾದಾಗ ಎಂದೂ
ಮಾರುವುದಿಲ್ಲ ನಾನು
ಈ ಮೀನನೆಂದು
ಮಾರುಹೋಗುತ್ತೇನೆ
ಈ ಮೀನಿಗೆ ಎಂದೆಂದೂ