19/12/15

E=mc² (ಭಾಗ -೧)

ರಿಚರ್ಡ್ ಫೆಯ್ಮನ್ ಅವರ ಒಂದು ಪ್ರಸಿದ್ಧ ಹೇಳಿಕೆ ಇದೆ " Only proved thing in quantum mechanics is nobody knows nothing  " . ಎಲ್ಲೋ ಒಂದು ಕಡೆ ಅವರ ಮಾತು ನಿಜವೆನಿಸುತ್ತದೆ . ನನಗೆ ಪಿಯುಸಿಯ ದಿನಗಳಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್ ಬಗ್ಗೆ ತಿಳಿದುಕೊಳ್ಳುವ ಹವ್ಯಾಸ ಶುರುವಾಯಿತು . ಆದರೆ ನನಗೆ ಹಲವಾರು  ಪ್ರಶ್ನೆಗಳು ಕಾಡುತ್ತಿತ್ತು , ಉತ್ತರಿಸುವ ಸಮರ್ಥ ವ್ಯಕ್ತಿ ಅಥವಾ ನನ್ನ ದಾಹ ತೀರಿಸುವ ಯಾವುದೇ ಪುಸ್ತಕಗಳು ಸಿಗುತ್ತಿರಲಿಲ್ಲ . ಉಪನ್ಯಾಸಕರು ಹೇಳಿಕೊಡುತ್ತಿದ್ದರೆನೋ , ಆದರೆ ನನಗೆ ಕೇಳಲು ಸಂಕೋಚವಾಗುತಿತ್ತು . ಕ್ಲಾಸಿನಲ್ಲಿ ಯಾವುದೇ ಒಂದು ಥಿಯರಿ ಇದ್ದರೆ ಅದರ ಮ್ಯಾಥಮೆಟಿಕಲ್ ಭಾಗವನ್ನಷ್ಟೇ ನಮಗೆ ಹೇಳಿಕೊಡುತ್ತಿದರು , ಅದರ ಹಿಂದಿನ ಫಿಲಾಸಫಿಕಲ್ ಅಥವಾ ಹಿಸ್ಟೋರಿಕ್ ಭಾಗಗಳು ನಮಗೆ ತಿಳಿಯುತ್ತಿರಲಿಲ್ಲ . ಪರೀಕ್ಷೆ ಮುಗಿದ ಮೇಲೂ ಪುಸ್ತಕ ಹಿಡಿದುಕೊಳ್ಳುವ ಒಂದು ಹುಳವೂ ನನಗೆ ಸಿಕ್ಕಿರಲಿಲ್ಲ . ಮೈಸೂರಿನಲ್ಲಿ ನನ್ನಂತಹ ಸಮಾನ ಮನಸ್ಕ ಗೆಳೆಯರ ಬಳಗ ದೊರೆಯಿತು . ಕಾಲೇಜಿನಲ್ಲಿ ನಮ್ಮದೇ ಒಂದು ಸಂಘಟನೆ ಕಟ್ಟಿಕೊಂಡು ನಮ್ಮ ಜ್ಞಾನದ ದಾಹ ತೀರಿಸಿಕೊಳ್ಳುವ ಪ್ರಯತ್ನ ಮಾಡತೊಡಗಿದೆವು . ನಮ್ಮ ಮಧ್ಯೆಯೇ ಚರ್ಚೆ , ಬೇರೆ ಬೇರೆ ವಿಜ್ಞಾನಿಗಳನ್ನು ನಮ್ಮ ಕಾಲೇಜಿಗೆ ಕರೆಸಿ ಅವರ ಉಪನ್ಯಾಸ ಕೇಳುವ ಚಟ ಹತ್ತಿಕೊಂಡಿತು . ಕೇವಲ ಸಿಲಬಸ್ ಇದ್ದಷ್ಟು ಓದಿ ಟಾಪ್ ಅಲ್ಲಿ ಪಾಸಾಗುವ ವಿಧ್ಯಾರ್ಥಿಗಳ ಗುಂಪಿನಿಂದ ಬೇರ್ಪಟ್ಟು ನಮ್ಮ ಕೆಲಸ ಶುರುವಾಯಿತು .
ನಾನು ಮೂಲತಃ ಸಾಹಿತ್ಯ ಕ್ಷೇತ್ರದವನಲ್ಲ , ನಾನು ಓದಿದ , ಕೇಳಿ ತಿಳಿದು ಕೊಂಡ ಕೆಲವು ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಈ ಸರಣಿಯಲ್ಲಿ ಬರೆಯುತ್ತೇನೆ . ನನಗೆ ಗೊತ್ತಿರುವುದು ತುಂಬಾ ಕಡಿಮೆ , ಏನಾದರೂ ತಪ್ಪಿದ್ದಲ್ಲಿ , ಮನ್ನಿಸಿ ,  ತಿಳಿಸಿ . ಕಲಿಯುವಿಕೆ ಹುಟ್ಟಿನಿಂದ ಶುರುವಾಗಿದ್ದು ಸಾಯುವ ತನಕವೂ ಇರುತ್ತದೆ . ಕಲಿಯಲು ನಾನು ಸಿಧ್ಧ .
ವೈಜ್ಞಾನಿಕ ಬರಹಗಳು ಅತೀ ಕ್ಲಿಷ್ಟ . ಎಲ್ಲಿಂದ ಶುರು ಮಾಡುವುದು ಎಂದೇ ತಿಳಿಯುವುದಿಲ್ಲ . Father of modern physics ಎಂದು ಕರೆಯುವ Albert Einstein ಅವರಿಂದ ಶುರುಮಾಡಿದರೆ ನ್ಯಾಯ ಸಿಕ್ಕೀತು .
Einstein ಅವರಿಗೆ ಡಿಸ್ಲೆಕ್ಸಿಯಾ ಇತ್ತು ಎಂಬುದು Taare zameen par ಸಿನೆಮಾದಿಂದ ಎಲ್ಲರಿಗೂ ತಿಳಿದಿದೆ . ಆದರೆ ಅವರ ವ್ಯಕ್ತಿತ್ವ ಕೆದಕಿದಷ್ಟೂ ನಿಗೂಢ .
ವೇದಿಕೆಯ ಮೇಲೆ ಗಂಟೆಗಟ್ಟಲೆ ನಿರ್ಭಯವಾಗಿ ಮಾತನಾಡುತ್ತಿದ್ದ   Einstein ತಮ್ಮ ಬಾಲ್ಯದಲ್ಲಿ ಒಂದು ಅಕ್ಷರವನ್ನು ಹೊರಡಿಸಲೂ ಹೆಣಗಾಡುತ್ತಿದ್ದರು ಎಂದರೆ ನಂಬುತ್ತೀರಾ ? . ನಾವೆಲ್ಲಾ ವಿಜ್ಞಾನಿಗಳು ಎಂದ ತಕ್ಷಣ ಅವರು ಜೀನಿಯಸ್ , ವೆಲ್ settled ಎಂದೆಲ್ಲಾ ಯೋಚಿಸುತ್ತೇವೆ , ಆದರೆ ಅದೆಲ್ಲಾ ನಮ್ಮ ಭ್ರಮೆಯಷ್ಟೇ .
ಹೌದು ನಿಸ್ಸಂಶಯವಾಗಿ Einstein ಅವರು ಜಗತ್ತು ಕಂಡ ಸರ್ವ ಶ್ರೇಷ್ಠ ವಿಜ್ಞಾನಿ . ಆದರೆ ಅವರಿಗೆ ಶಾಲೆಯಲ್ಲಿ ಕರೆಯುತ್ತಿದ್ದದ್ದು Dull Albert ಎಂದು .
Einstein ಅವರು 14th March ,1879 ರಲ್ಲಿ ಉಲ್ಮ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು . ತಂದೆ ಹರ್ಮನ್ ,ತಾಯಿ ಪೌಲಿನ್ . ಅವರ ತಂದೆ ಬಲ್ಬ್ ತಯಾರಿಸುವ ಸಣ್ಣ ಉದ್ಯಮ ಮಾಡುತ್ತಿದರು . 1880ರಲ್ಲಿ ಅವರ ಕುಟುಂಬ ಮ್ಯುನಿಕ್ ಗೆ ಸ್ಥಳಾಂತರಗೊಂಡಿತು . ಹರ್ಮನ್ ಅವರು ಡೈರೆಕ್ಟ್ ಕರೆಂಟ್ ಇಂದ ಚಲಾವಣೆಗೊಳ್ಳುವ ಬಲ್ಬ್ ತಯಾರಿಸುತ್ತಿದರು , ಆದರೆ alternating ಕರೆಂಟ್ ಪ್ರಸಿದ್ಧಿ ಪಡೆಯ ತೊಡಗಿತು . Alternating current ಗೆ ಸಾಕಷ್ಟು ಉಪಯೋಗಗಳಿವೆ , ಡೈರೆಕ್ಟ್ ಕರೆಂಟ್ ಗೆ ಹೋಲಿಸಿದರೆ alternating ಕರೆಂಟ್ ನ ಉತ್ಪಾದನೆ ಹಾಗೂ transportation ಎರಡೂ ಸುಲಭ .
ಆದ್ದರಿಂದ ಹರ್ಮನ್ ಅವರ ಉದ್ಯಮ ಕುಂಟಿತಗೊಳ್ಳುತ್ತಾ ಹೋಯಿತು . Einstein ಹುಟ್ಟಿದ ಏಳು ವರ್ಷಗಳ ತನಕ ಮಾತೇ ಕಲಿಯಲಿಲ್ಲ , ಕಲಿತ ಮೇಲೂ ಹುಚ್ಚನಂತೆ ಹೇಳಿದ ಶಬ್ದವನ್ನೇ ಮತ್ತೆ ಹೇಳಿಕೊಳ್ಳುತ್ತಾ ಆಟವಾಡುತ್ತಿದ್ದ . ಎಲ್ಲರೂ ಅವನಿಗೆ ಬುದ್ಧಿಯೇ ಸರಿಯಿಲ್ಲ ಎಂದು ನಿರ್ಧರಿಸಿಯಾಗಿತ್ತು . ಪವಾಡವೆನ್ನುವಂತೆ Einstein ಮಾತು ಕಲಿತರು . ಯಾವಾಗಲೂ ತಂದೆಯ workshop ನಲ್ಲಿ ಆಟವಾಡುತ್ತಿದರು . ಕಂಪಾಸ್ ಹಾಗೂ ಮ್ಯಾಗ್ನೆಟ್ ಅವರ ನೆಚ್ಚಿನ ಮಿತ್ರ . ಯಾವಾಗಲೂ ಅದರೊಟ್ಟಿಗೆ ಆಡುತ್ತಿದರು .
War of electricity ಯಲ್ಲಿ AC ಗೆದ್ದಿತು . ಹರ್ಮನ್ ಅವರು ಇಟಲಿಯ ಮಿಲಾನ್ ಗೆ ವಲಸೆ ಹೋದರು ಆದರೆ Einstein ಮ್ಯುನಿಕ್ ನ Luitpod Gymnasium ಯಲ್ಲಿಯೇ ಉಳಿದರು . ಅವರ ತಂದೆಗೆ ಮಗ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಲಿ ಎಂಬ ಅಭಿಲಾಷೆಯಿತ್ತು . ಆದರೆ Einstein ಶಿಕ್ಷಣ ಪದ್ಧತಿ ಹಾಗೂ ಭೋಧನಾ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ , ಶಾಲೆಯ ಆಡಳಿತ ಮಂಡಳಿಯ ವೈರತ್ವ ಕಟ್ಟಿಕೊಂಡರು .
ಒಮ್ಮೆ ಇತಿಹಾಸ ಶಿಕ್ಷಕರು ಯುಧ್ಧ ನಡೆದ ತಾರೀಖು ಕೇಳಿದರು , ಅದಕ್ಕೆ Einstein ಖಾರವಾಗಿ 
" Why the hell should I memorize dates ? I am wondering why a man kills another man . I am searching the reason for wars . " ಎಂದು ಹೇಳಿದ್ದರಂತೆ . 
                                                                                                      ( ಮುಂದುವರೆಯುವುದು ........... )

16/12/15

ನನ್ನ ದೇಶ ನನ್ನ ಜನ -ಅಂತ್ಯ (ಕಾಪಾಡಿ....... ಕಾಪಾಡಿ )

ನಾಗ , ಮಂಜ ಹಾಗೂ ಮಲೆನಾಡಿನ ಕಾಡು  ಈ ಮೂರೂ ಸಹ ಅವನತಿಯ ಅಂಚಿನಲ್ಲಿದೆ . ನಾಗ , ಮಂಜ ಎಂದರೆ ಇಲ್ಲಿ ನಾನು ವ್ಯಕ್ತಿಯ ಬಗ್ಗೆ ಮಾತನಾಡುತ್ತಿಲ್ಲ , ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಿದ್ದೇನೆ . ನಾಗ ಗಿಡ ಮೂಲಿಕೆ ಔಷಧಿಯ ಭಂಡಾರ , ನನಗೇ ಗೊತ್ತಿಲ್ಲದ ಎಷ್ಟೋ ಗಿಡ ಮರಗಳ ಬಗ್ಗೆ ಅವನಿಗೆ ಗೊತ್ತಿತ್ತು . ಆದರೆ ಆತ ಅದನ್ನು ಯಾರಿಗೂ ಹೇಳಿ ಕೊಟ್ಟಿರಲಿಲ್ಲ . ನಮ್ಮ ಸಾಂಪ್ರದಾಯಿಕ ಔಷಧೀಯ ಪದ್ಧತಿ ನಶಿಸಿ ಹೋಗುತ್ತಿರುವುದಕ್ಕೆ ಇದೇ ಕಾರಣ . ನೀವೇನಾದರೂ ಪಂಡಿತರ ಬಳಿ ಔಷಧಿ ತೆಗೆದುಕೊಂಡಿದ್ದರೆ ನಿಮಗೆ ಈ ಮಾತು ಅರ್ಥವಾಗುತ್ತದೆ , ಅವರು ಔಷಧಿಯನ್ನು ಕುಟ್ಟಿಯೋ , ರುಬ್ಬಿಯೋ ಇಲ್ಲ ಎಲೆಯನ್ನು ಮುದುರಿ ಕೊಡುತ್ತಾರೆ . ಕೆಲವೊಮ್ಮೆ ವಾಸನೆ ತಿಳಿಯಬಾರದೆಂದು ಜೀರಿಗೆ ಸೇರಿಸಿ ಕೊಡುವುದೂ ಇದೆ .
ಅವರ ಕುಟುಂಬದವರಿಗೆ ಮಾತ್ರ ಆ ಔಷಧಿಯ ಬಗ್ಗೆ ಗೊತ್ತಿರುತ್ತದೆ . ಒಂದೊಮ್ಮೆ ಪಂಡಿತರಿಗೆ ಅಕಾಲಿಕ ಸಾವು ಬಂದರೆ ಆ ಔಷಧಿ ಅಲ್ಲಿಗೇ ನಶಿಸಿ ಹೋಗುತ್ತದೆ .
ನಾಗನ ಚೇಷ್ಟೆಯೇ ಅವನ ಪ್ರಾಣಕ್ಕೆ ಅಪಾಯ ತಂದಿಡುತ್ತದೆ ಎಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ . ಅಡಿಕೆ ಮರ ಹತ್ತಲು ಅವನಿಗೆ ಬರುತ್ತಿರಲಿಲ್ಲ , ಆದರೂ ಮೊಂಡು ಧೈರ್ಯದಿಂದ ಹತ್ತಿದ್ದನಂತೆ . ಸುಮಾರು ನಲವತ್ತು ಅಡಿ ಎತ್ತರದಿಂದ ಕೆಳಕ್ಕೆ ಬಿದ್ದನಂತೆ . ಅವನಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ . ಕೆಲವೇ ದಿನಗಳಲ್ಲಿ ಅವನು ಸತ್ತು ಹೋದ . ಅದಾಗುವ ಕೆಲ ತಿಂಗಳ ಹಿಂದೆ ನಮ್ಮ ಮನೆಯ ಅಂಗಳದಲ್ಲಿ ಅವನು ಮಾವಿನ ಮರ ನೆಟ್ಟು ಹೋಗಿದ್ದ . ಅದನ್ನು ನೋಡಿದಾಗಲೆಲ್ಲ ನನಗೆ ನಾಗನ ನೆನಪಾಗುತ್ತದೆ . ಆತ ನಮ್ಮ ಮನೆಯ ಆಳಾಗಿರಲಿಲ್ಲ , ಅವನಿಗೆ ಯಾವ ಕೆಲಸವನ್ನೂ ಮಾಡಲು ಬರುತ್ತಿರಲಿಲ್ಲ . ನಾವಿಬ್ಬರೂ ಸ್ನೇಹಿತರು ಎಂದರೆ ಸುಳ್ಳಲ್ಲ . ಅವನಿಗೆ ನಾನು ಸಂಬಳ ಕೊಡುತ್ತಿದ್ದದ್ದೂ ಕಡಿಮೆಯೇ .
ಮಂಜನ ಅಂತ್ಯ ಇನ್ನೂ ವಿಚಿತ್ರ ಅನಿಸುತ್ತದೆ . ಆಧುನಿಕತೆ ನಮ್ಮೂರಿಗೂ ಬಡಿದಿತ್ತು , ಜಾಗತೀಕರಣ ತನ್ನ ಕಬಂಧ ಬಾಹುಗಳನ್ನು ಚಾಚಿತ್ತು . ನಮ್ಮೂರಿನ ಯುವಕರು ತರ ತರದ ಸ್ಟೈಲ್ ಕೇಳತೊಡಗಿದರು , ಕ್ರಮೇಣ ಅವನಿಗೆ ಗ್ರಾಹಕರು ಕಡಿಮೆಯಾಗತೊಡಗಿದರು . ಊರೂರು ಸುತ್ತ ತೊಡಗಿದ , ಕುಡಿತ ಜಾಸ್ತಿಯಾಗತೊಡಗಿತು . ಕೊನೆಗೆ ಅರೆ ಹುಚ್ಚನಾಗಿ ಓಡಿ ಹೋದನಂತೆ .
ಇನ್ನು ಮಲೆನಾಡಿನ ಕಾಡು , ಅದು ' ನ ಭೂತೋ ನ ಭವಿಷ್ಯತಿ ' . ಕಾರಂತರ ' ಬೆಟ್ಟದ ಜೀವ ' ಕಾಲದಲ್ಲಿ ಕಾಡು ಮನುಷ್ಯನಿಗೆ ಸವಾಲಾಗಿ ಪರಿಣಮಿಸಿತ್ತು . ನಂತರ ಕುವೆಂಪುರವರ ಕಾನೂರು ಹೆಗ್ಗಡತಿ ಅಥವಾ ಮಲೆಗಳಲ್ಲಿ ಮದುಮಗಳು ಕಾಲದಲ್ಲಿ ಕಾಡು ನಮ್ಮೆಲ್ಲರ ಪೊರೆಯುವ ತಾಯಿಯಾಗಿ ಕಂಡುಬರುತ್ತಿತ್ತು . ಆದರೆ ನಮ್ಮ ಈಗೀನ ಕಾಲದಲ್ಲಿ ನಾವೇ ಕಾಡನ್ನು ಉಳಿಸಿಕೊಳ್ಳಬೇಕಾದ ಸ್ಥಿತಿ ಬಂದಿದೆ . ನಮ್ಮ ಬಜೆಟ್ನಲ್ಲಿ ದುಡ್ಡನ್ನು ಎತ್ತಿಟ್ಟು ಅಭಯಾರಣ್ಯಗಳನ್ನು ಸೃಷ್ಟಿಸಿ , ಕಾನೂನುಗಳನ್ನು ಮಾಡಿ ಕಾಡು ಉಳಿಸಿಕೊಳ್ಳುವ ವಿಪರ್ಯಾಸ ನಮ್ಮದು . ನಮ್ಮ ನಾಡು ಈಗ ಗಂಧದ ಗುಡಿ ಅಲ್ಲ , ಯಾವಾಗಲೋ ನಾವು ಗಂಧದ ಮರಗಳನ್ನು ತಿಂದು ತೇಗಿ ಮುಗಿದಿದೆ . ಒಂದೊಂದು ಮರ ಐದು - ಆರು ಲಕ್ಷ ಬೆಲೆಬಾಳುತ್ತದೆ ಎಂದಾದರೆ , ಲಕ್ಷ ಲಕ್ಷ ಹೆಕ್ಟೇರು ಇರುವ ನಮ್ಮ ಕಾಡಿನ ಮೌಲ್ಯ ನಿಮಗೆ ಅರ್ಥವಾಗಬಹುದು . ಯಾವಾಗ ನಾವು ಕಾಡನ್ನು ದುಡ್ಡಿನಿಂದ ಅಳೆಯಲು ಶುರುಮಾಡುತ್ತೀವೋ ಅಂದಿನಿಂದ ನಮ್ಮ ಅವನತಿ ಪ್ರಾರಂಭವಾಗುತ್ತದೆ . Forest is an unimaginable treasure . ಅದನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ .
ಮಲೆನಾಡಿನ ಸಂಸ್ಕೃತಿ ಕವಲು ದಾರಿಯಲ್ಲಿದೆ . ಮಲೆನಾಡಿಗರು ಭವಿಷ್ಯ ಅರಸಿ ಸಿಟಿಗಳತ್ತ ಮುಖಮಾಡುತ್ತಿದ್ದಾರೆ . ದಾರ್ಶನಿಕರು ಹುಟ್ಟಿದ ನಮ್ಮ ಮಲೆನಾಡು ಈಗ ಕೋಮು ವಾದದ , ಜಾತಿ ಕಲಹಗಳ ಗೂಡಾಗಿದೆ .
ನನ್ನ ದೇಶ ನನ್ನ ಜನ , ನಾನು ಹುಟ್ಟಿ ಬೆಳೆದ ಊರಿನ ಕಥೆ . ಇದು ತೇಜಸ್ವಿ ಅವರ ಕೃತಿಗಳ ಅನುಕರಣೆ ಅಲ್ಲ . ಅವರ ಬರಹಗಳ ಮುಂದೆ ನಾನು ಸೊನ್ನೆಗಿಂತಲೂ ಕಡಿಮೆ . ಕರ್ವಾಲೋ ಒಂದು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಬರೆದ ಅಧ್ಭುತ ಕೃತಿ , ಅದಕ್ಕೆ ಇದನ್ನು ಹೋಲಿಸಿದರೆ ಮೂರ್ಖತನವಾಗುತ್ತದೆ .
ನಾನು ಜಾಸ್ತಿ ಸುತ್ತಾಡುತ್ತಿದ್ದದ್ದು ನಮ್ಮ ಮನೆಯ ಆಳುಗಳ ಜೊತೆ . ಕೊನೆಗೌಡನ ಜೊತೆಗೆ ಊಟಕ್ಕೆ ಕೂತು ಬಿಡುತ್ತಿದ್ದೆ , ಗೊಬ್ಬರ ಹಾಕಲು ಬಂದವರ ಜೊತೆ ಗಂಟೆಗಟ್ಟಲೆ ಮಾತಾಡುತ್ತಿದ್ದೆ . ಅವರ ಜೊತೆಗೆ ಕಳೆದ ಕೆಲವು ಅಮೂಲ್ಯ ಹಾಸ್ಯ ಪ್ರಸಂಗಗಳ ಹೊತ್ತಿಗೆಯೇ ' ನನ್ನ ದೇಶ ನನ್ನ ಜನ ' .