ರಿಚರ್ಡ್ ಫೆಯ್ಮನ್ ಅವರ ಒಂದು ಪ್ರಸಿದ್ಧ ಹೇಳಿಕೆ ಇದೆ " Only proved thing in quantum mechanics is nobody knows nothing " . ಎಲ್ಲೋ ಒಂದು ಕಡೆ ಅವರ ಮಾತು ನಿಜವೆನಿಸುತ್ತದೆ . ನನಗೆ ಪಿಯುಸಿಯ ದಿನಗಳಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್ ಬಗ್ಗೆ ತಿಳಿದುಕೊಳ್ಳುವ ಹವ್ಯಾಸ ಶುರುವಾಯಿತು . ಆದರೆ ನನಗೆ ಹಲವಾರು ಪ್ರಶ್ನೆಗಳು ಕಾಡುತ್ತಿತ್ತು , ಉತ್ತರಿಸುವ ಸಮರ್ಥ ವ್ಯಕ್ತಿ ಅಥವಾ ನನ್ನ ದಾಹ ತೀರಿಸುವ ಯಾವುದೇ ಪುಸ್ತಕಗಳು ಸಿಗುತ್ತಿರಲಿಲ್ಲ . ಉಪನ್ಯಾಸಕರು ಹೇಳಿಕೊಡುತ್ತಿದ್ದರೆನೋ , ಆದರೆ ನನಗೆ ಕೇಳಲು ಸಂಕೋಚವಾಗುತಿತ್ತು . ಕ್ಲಾಸಿನಲ್ಲಿ ಯಾವುದೇ ಒಂದು ಥಿಯರಿ ಇದ್ದರೆ ಅದರ ಮ್ಯಾಥಮೆಟಿಕಲ್ ಭಾಗವನ್ನಷ್ಟೇ ನಮಗೆ ಹೇಳಿಕೊಡುತ್ತಿದರು , ಅದರ ಹಿಂದಿನ ಫಿಲಾಸಫಿಕಲ್ ಅಥವಾ ಹಿಸ್ಟೋರಿಕ್ ಭಾಗಗಳು ನಮಗೆ ತಿಳಿಯುತ್ತಿರಲಿಲ್ಲ . ಪರೀಕ್ಷೆ ಮುಗಿದ ಮೇಲೂ ಪುಸ್ತಕ ಹಿಡಿದುಕೊಳ್ಳುವ ಒಂದು ಹುಳವೂ ನನಗೆ ಸಿಕ್ಕಿರಲಿಲ್ಲ . ಮೈಸೂರಿನಲ್ಲಿ ನನ್ನಂತಹ ಸಮಾನ ಮನಸ್ಕ ಗೆಳೆಯರ ಬಳಗ ದೊರೆಯಿತು . ಕಾಲೇಜಿನಲ್ಲಿ ನಮ್ಮದೇ ಒಂದು ಸಂಘಟನೆ ಕಟ್ಟಿಕೊಂಡು ನಮ್ಮ ಜ್ಞಾನದ ದಾಹ ತೀರಿಸಿಕೊಳ್ಳುವ ಪ್ರಯತ್ನ ಮಾಡತೊಡಗಿದೆವು . ನಮ್ಮ ಮಧ್ಯೆಯೇ ಚರ್ಚೆ , ಬೇರೆ ಬೇರೆ ವಿಜ್ಞಾನಿಗಳನ್ನು ನಮ್ಮ ಕಾಲೇಜಿಗೆ ಕರೆಸಿ ಅವರ ಉಪನ್ಯಾಸ ಕೇಳುವ ಚಟ ಹತ್ತಿಕೊಂಡಿತು . ಕೇವಲ ಸಿಲಬಸ್ ಇದ್ದಷ್ಟು ಓದಿ ಟಾಪ್ ಅಲ್ಲಿ ಪಾಸಾಗುವ ವಿಧ್ಯಾರ್ಥಿಗಳ ಗುಂಪಿನಿಂದ ಬೇರ್ಪಟ್ಟು ನಮ್ಮ ಕೆಲಸ ಶುರುವಾಯಿತು .
ನಾನು ಮೂಲತಃ ಸಾಹಿತ್ಯ ಕ್ಷೇತ್ರದವನಲ್ಲ , ನಾನು ಓದಿದ , ಕೇಳಿ ತಿಳಿದು ಕೊಂಡ ಕೆಲವು ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ಈ ಸರಣಿಯಲ್ಲಿ ಬರೆಯುತ್ತೇನೆ . ನನಗೆ ಗೊತ್ತಿರುವುದು ತುಂಬಾ ಕಡಿಮೆ , ಏನಾದರೂ ತಪ್ಪಿದ್ದಲ್ಲಿ , ಮನ್ನಿಸಿ , ತಿಳಿಸಿ . ಕಲಿಯುವಿಕೆ ಹುಟ್ಟಿನಿಂದ ಶುರುವಾಗಿದ್ದು ಸಾಯುವ ತನಕವೂ ಇರುತ್ತದೆ . ಕಲಿಯಲು ನಾನು ಸಿಧ್ಧ .
ವೈಜ್ಞಾನಿಕ ಬರಹಗಳು ಅತೀ ಕ್ಲಿಷ್ಟ . ಎಲ್ಲಿಂದ ಶುರು ಮಾಡುವುದು ಎಂದೇ ತಿಳಿಯುವುದಿಲ್ಲ . Father of modern physics ಎಂದು ಕರೆಯುವ Albert Einstein ಅವರಿಂದ ಶುರುಮಾಡಿದರೆ ನ್ಯಾಯ ಸಿಕ್ಕೀತು .
Einstein ಅವರಿಗೆ ಡಿಸ್ಲೆಕ್ಸಿಯಾ ಇತ್ತು ಎಂಬುದು Taare zameen par ಸಿನೆಮಾದಿಂದ ಎಲ್ಲರಿಗೂ ತಿಳಿದಿದೆ . ಆದರೆ ಅವರ ವ್ಯಕ್ತಿತ್ವ ಕೆದಕಿದಷ್ಟೂ ನಿಗೂಢ .
ವೇದಿಕೆಯ ಮೇಲೆ ಗಂಟೆಗಟ್ಟಲೆ ನಿರ್ಭಯವಾಗಿ ಮಾತನಾಡುತ್ತಿದ್ದ Einstein ತಮ್ಮ ಬಾಲ್ಯದಲ್ಲಿ ಒಂದು ಅಕ್ಷರವನ್ನು ಹೊರಡಿಸಲೂ ಹೆಣಗಾಡುತ್ತಿದ್ದರು ಎಂದರೆ ನಂಬುತ್ತೀರಾ ? . ನಾವೆಲ್ಲಾ ವಿಜ್ಞಾನಿಗಳು ಎಂದ ತಕ್ಷಣ ಅವರು ಜೀನಿಯಸ್ , ವೆಲ್ settled ಎಂದೆಲ್ಲಾ ಯೋಚಿಸುತ್ತೇವೆ , ಆದರೆ ಅದೆಲ್ಲಾ ನಮ್ಮ ಭ್ರಮೆಯಷ್ಟೇ .
ಹೌದು ನಿಸ್ಸಂಶಯವಾಗಿ Einstein ಅವರು ಜಗತ್ತು ಕಂಡ ಸರ್ವ ಶ್ರೇಷ್ಠ ವಿಜ್ಞಾನಿ . ಆದರೆ ಅವರಿಗೆ ಶಾಲೆಯಲ್ಲಿ ಕರೆಯುತ್ತಿದ್ದದ್ದು Dull Albert ಎಂದು .
Einstein ಅವರು 14th March ,1879 ರಲ್ಲಿ ಉಲ್ಮ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು . ತಂದೆ ಹರ್ಮನ್ ,ತಾಯಿ ಪೌಲಿನ್ . ಅವರ ತಂದೆ ಬಲ್ಬ್ ತಯಾರಿಸುವ ಸಣ್ಣ ಉದ್ಯಮ ಮಾಡುತ್ತಿದರು . 1880ರಲ್ಲಿ ಅವರ ಕುಟುಂಬ ಮ್ಯುನಿಕ್ ಗೆ ಸ್ಥಳಾಂತರಗೊಂಡಿತು . ಹರ್ಮನ್ ಅವರು ಡೈರೆಕ್ಟ್ ಕರೆಂಟ್ ಇಂದ ಚಲಾವಣೆಗೊಳ್ಳುವ ಬಲ್ಬ್ ತಯಾರಿಸುತ್ತಿದರು , ಆದರೆ alternating ಕರೆಂಟ್ ಪ್ರಸಿದ್ಧಿ ಪಡೆಯ ತೊಡಗಿತು . Alternating current ಗೆ ಸಾಕಷ್ಟು ಉಪಯೋಗಗಳಿವೆ , ಡೈರೆಕ್ಟ್ ಕರೆಂಟ್ ಗೆ ಹೋಲಿಸಿದರೆ alternating ಕರೆಂಟ್ ನ ಉತ್ಪಾದನೆ ಹಾಗೂ transportation ಎರಡೂ ಸುಲಭ .
ಆದ್ದರಿಂದ ಹರ್ಮನ್ ಅವರ ಉದ್ಯಮ ಕುಂಟಿತಗೊಳ್ಳುತ್ತಾ ಹೋಯಿತು . Einstein ಹುಟ್ಟಿದ ಏಳು ವರ್ಷಗಳ ತನಕ ಮಾತೇ ಕಲಿಯಲಿಲ್ಲ , ಕಲಿತ ಮೇಲೂ ಹುಚ್ಚನಂತೆ ಹೇಳಿದ ಶಬ್ದವನ್ನೇ ಮತ್ತೆ ಹೇಳಿಕೊಳ್ಳುತ್ತಾ ಆಟವಾಡುತ್ತಿದ್ದ . ಎಲ್ಲರೂ ಅವನಿಗೆ ಬುದ್ಧಿಯೇ ಸರಿಯಿಲ್ಲ ಎಂದು ನಿರ್ಧರಿಸಿಯಾಗಿತ್ತು . ಪವಾಡವೆನ್ನುವಂತೆ Einstein ಮಾತು ಕಲಿತರು . ಯಾವಾಗಲೂ ತಂದೆಯ workshop ನಲ್ಲಿ ಆಟವಾಡುತ್ತಿದರು . ಕಂಪಾಸ್ ಹಾಗೂ ಮ್ಯಾಗ್ನೆಟ್ ಅವರ ನೆಚ್ಚಿನ ಮಿತ್ರ . ಯಾವಾಗಲೂ ಅದರೊಟ್ಟಿಗೆ ಆಡುತ್ತಿದರು .
War of electricity ಯಲ್ಲಿ AC ಗೆದ್ದಿತು . ಹರ್ಮನ್ ಅವರು ಇಟಲಿಯ ಮಿಲಾನ್ ಗೆ ವಲಸೆ ಹೋದರು ಆದರೆ Einstein ಮ್ಯುನಿಕ್ ನ Luitpod Gymnasium ಯಲ್ಲಿಯೇ ಉಳಿದರು . ಅವರ ತಂದೆಗೆ ಮಗ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಲಿ ಎಂಬ ಅಭಿಲಾಷೆಯಿತ್ತು . ಆದರೆ Einstein ಶಿಕ್ಷಣ ಪದ್ಧತಿ ಹಾಗೂ ಭೋಧನಾ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ , ಶಾಲೆಯ ಆಡಳಿತ ಮಂಡಳಿಯ ವೈರತ್ವ ಕಟ್ಟಿಕೊಂಡರು .
ಒಮ್ಮೆ ಇತಿಹಾಸ ಶಿಕ್ಷಕರು ಯುಧ್ಧ ನಡೆದ ತಾರೀಖು ಕೇಳಿದರು , ಅದಕ್ಕೆ Einstein ಖಾರವಾಗಿ
" Why the hell should I memorize dates ? I am wondering why a man kills another man . I am searching the reason for wars . " ಎಂದು ಹೇಳಿದ್ದರಂತೆ .
( ಮುಂದುವರೆಯುವುದು ........... )

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ