ರಿಪೋರ್ಟು ಬರುವ ತನಕ ನಾನು ಸುಮ್ಮನೆ ಕೂರುವ ಹಾಗಿರಲಿಲ್ಲ . ತಡ ಮಾಡಿದಷ್ಟೂ ಕೊಲೆಗಾರ ಸಾಕ್ಷಿಗಳನ್ನು ನಾಶ ಮಾಡುತ್ತಾ ಹೋಗುತ್ತಾನೆ . ನನ್ನ ತಲೆ ಕೆಡಿಸಿದ್ದು ವಜ್ರದ ಹರಳು , ಅದನ್ನು ನೋಡಿದರೆ ಹೇಳಬಹುದು ಅದು ಆಫ್ರಿಕಾದ ಗಣಿಯಿಂದ ಬಂದದ್ದು . ಅಲ್ಲಿ ತೆಗೆದ ವಜ್ರಗಳನ್ನು ಪ್ರಪಂಚದ ತುಂಬೆಲ್ಲಾ ಕದ್ದು ಸಾಗಿಸುವ ದೊಡ್ಡ ಜಾಲವೇ ಇದೆ . ಇಸ್ರೇಲಿನ ಗುಪ್ತಚರದಳ ಇದರ ಜಾಲವನ್ನು ಪತ್ತೆ ಹಚ್ಚಿತ್ತು . ಆದರೆ ಭಾರತದಲ್ಲಿ ಇಂತಹ ವಜ್ರವನ್ನು ನಾನು ನೋಡಿದ್ದು ಇದೆ ಮೊದಲು . ಚಿರಾಗ್ ಏನಾದರೂ ಕ್ಯಾರಿಯರ್ ಆಗಿ ಕೆಲಸ ಮಾಡುತ್ತಿದನ ? . ವಜ್ರವನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಸಾಗಿಸುವವರಿಗೆ ಕ್ಯಾರಿಯರ್ ಎನ್ನುತ್ತೇವೆ . ಆ ರೀತಿ ಕ್ಯಾರಿಯರ್ ಆಗಿ ನಂತರ ಅವರಿಗೇ ಚಳ್ಳೆ ಹಣ್ಣು ತಿನ್ನಿಸಲು ಹೋಗಿ ಇವನ ಕೊಲೆ ನಡೆಯಿತೇ ? . ಆದರೆ ಅವರು ಇಷ್ಟೆಲ್ಲಾ ಸದ್ದಾಗುವಂತೆ ಕೊಲೆ ಮಾಡುವುದಿಲ್ಲ . ಅವರನ್ನು ನಾನು ಕೋಲ್ಡ್ ಬ್ಲಡೆಡ್ ಕಿಲ್ಲರ್ಸ್ ಎಂದು ಗುರುತಿಸುತ್ತೇನೆ . ಕೊಲ್ಲುವುದರಲ್ಲಿ ಅವರು ನಿಸ್ಸೀಮರು, ಒಂದೇ ಏಟಿಗೆ ಶಿವನ ಪಾದ ಸೇರಿಸುತ್ತಾರೆ . ಆದರೆ ಇಲ್ಲಿ ಆ ರೀತಿ ಕೊಲೆಯಾಗಿಲ್ಲ .
ಈಗೀನ ಸೋಶಿಯಲ್ ಮೀಡಿಯಾಗಳು ನಮಗೆ ಬಹಳಷ್ಟು ಸಹಕಾರಿ . ನಿಜವಾಗಿಯೂ ದ್ವೇಷಕ್ಕೆ ಕೊಲೆ ನಡೆದಿದ್ದರೆ ಕೊಲೆಗಾರ ಖಂಡಿತವಾಗಿ ಧಮ್ಕಿ ಹಾಕುವ ಮೆಸೇಜ್ ಮಾಡಿರುತ್ತಾನೆ . ಅದಕ್ಕಿಂತ ಹೆಚ್ಚು ನನಗೆ ಚಿರಾಗ್ ಹಾಗು ಆತನ ಜೊತೆ ಬಂದಿದ್ದ ಸ್ನೇಹ ಎಂಬ ಹುಡುಗಿಯ ಮಧ್ಯೆ ಇದ್ದ ಸಂಬಂಧ ಎಂತದ್ದು ಎಂದು ನೋಡಬೇಕಿತ್ತು . ಅವರಿಬ್ಬರೂ ಪ್ರೇಮಿಗಳಾಗಿದ್ದರೆ ಬೇರೆ ಬೇರೆ ರೂಮು ಹಾಕುತ್ತಿರಲಿಲ್ಲ . ನನ್ನ ಕಂಪ್ಯೂಟರ್ ತೆರೆದುಕೊಂಡು ಕುಳಿತೆ , ' ಕಾಲಿ ಲಿನಕ್ಸ್ ' ಓಪನ್ ಮಾಡಿದೆ . ಈಗ ಹ್ಯಾಕರ್ಸ್ ಬಳಸುವ ತಂತ್ರಾಂಶ ಕಾಲಿ ಲಿನಕ್ಸ್ . ಅದರಲ್ಲಿ ಆತನ ಫೇಸ್ಬುಕ್ , ವಾಟ್ಸ್ ಅಪ್ ಎಲ್ಲವನ್ನು ಹ್ಯಾಕ್ ಮಾಡಬೇಕು . ಫೇಸ್ಬುಕ್ ಹ್ಯಾಕ್ ಮಾಡಲು ಫಿಶಿಂಗ್ ಎಂಬ ತಂತ್ರ ಬಳಸಬಹುದು , ಅಂದರೆ ಫೇಸ್ಬುಕ್ ಲಾಗ್ ಇನ್ ಪೇಜಿನ ನಕಲು ಸೃಷ್ಟಿಸಿ ಕಳುಹಿಸಬೇಕು . ಆತ ಪಾಸ್ವರ್ಡ್ ಟೈಪಿಸಿದಾಗ ನನ್ನ ಸ್ಕ್ರೀನಿನ ಮೇಲೆ ಅದು ಗೋಚರಿಸುತ್ತದೆ . ಆದರೆ ಇಲ್ಲಿ ನನ್ನ ವಿಕ್ಟಿಮ್ ಸತ್ತು ಹೋಗಿದ್ದಾನೆ . ನನಗೆ ಉಳಿದದ್ದು ಬ್ರೂಟ್ ಫೋರ್ಸ್ ಅಟ್ಯಾಕ್ ಮಾತ್ರ , ಎಂದರೆ ಬೇರೆ ಬೇರೆ ಕಾಂಬಿನೇಶನ್ ಅನ್ನು ಪ್ರಯತ್ನಿಸುವುದು . ಬ್ರೂಟ್ ಫೋರ್ಸ್ ತಂತ್ರಾಂಶ ಗಣಿತದ ಪರ್ಮುಟೆಶನ್ ಕಾಂಬಿನೇಶನ್ ಮೇಲೆ ನಿಂತಿದೆ . ಕೆಲವೊಮ್ಮೆ ಪಾಸ್ವರ್ಡ್ ಕ್ರ್ಯಾಕ್ ಮಾಡಲು ತಿಂಗಳುಗಟ್ಟಲೆ ಹಿಡಿದದ್ದೂ ಇದೆ . ಆದರೆ ಇಲ್ಲಿ ನನಗೆ ಚಿರಾಗ್ ಬಗ್ಗೆ ಬಹಳಷ್ಟು ವಿಷಯ ಗೊತ್ತಿತ್ತು ಅದನ್ನೇ ಮೊದಲು ಪ್ರಯತ್ನಿಸಿದೆ . ಎರಡು ತಾಸಿನ ನಂತರ ಪಾಸ್ವರ್ಡ್ ದೊರಕಿತು , 'chiru@bel456' . ಆತನ ಫೇಸ್ಬುಕ್ ಖಾತೆ ತೆರೆದು ಆಕ್ಟಿವಿಟಿ ಲಾಗ್ ತೆಗೆದೆ . ಆತನ ಮೆಸೇಜ್ ಎಲ್ಲವನ್ನೂ ಓದಿದೆ . ಆತನಿಗೆ ಸ್ನೇಹ ಮೊದಲು ಸಿಕ್ಕಿದ್ದು ಫೇಸ್ಬುಕ್ ನಲ್ಲಿ . ಈತನೇ ಮೊದಲು ಮೆಸೇಜಿಸಿ ಆಕೆಯ ಮೊಬೈಲ್ ನಂಬರ್ ಸಂಪಾದಿಸಿದ್ದ . ಅದಕ್ಕಿಂತ ನನಗೆ ಮುಖ್ಯವಾಗಿ ಸಿಕ್ಕಿದ್ದು ' ಅಬ್ದುಲ್ ಖುರೇಷಿ ' ಎಂಬುವವನ ಪ್ರೊಫೈಲು , ಆತ ತನ್ನ ನಿಜವಾದ ಹೆಸರು ಇಟ್ಟುಕೊಳ್ಳುವುದಿಲ್ಲ ಅಮೀನಾ ಎಂಬ ಹೆಸರಿತ್ತು . ಆದರೆ ನಾನು ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಅಮೀನಾ ಎಂಬ ಪ್ರೊಫೈಲ್ ಹ್ಯಾಕ್ ಮಾಡಿದ್ದೆ ಹಾಗೂ ಖುರೆಷಿಯ ಎಲ್ಲಾ ಪ್ರೊಫೈಲ್ ಮಾಹಿತಿಯೂ ನನಗೆ ಗೊತ್ತಿದೆ . ಆತ ಲಿಬಿಯಾದಿಂದ ವಜ್ರಗಳನ್ನು ದುಬೈಗೆ ಹಡಗಿನ ಮೂಲಕ ತರುತ್ತಾನೆ ನಂತರ ದುಬೈಗೆ ಕ್ಯಾರಿಯರ್ ಕರೆಸಿಕೊಂಡು ಅವರ ಹೊಟ್ಟೆಯಲ್ಲಿ ವಜ್ರ ತುಂಬಿಸಿ ಡೆಲಿವರಿ ಮಾಡುತ್ತಾನೆ . ಚಿರಾಗ್ ಗೆ ಆತನ ಸಂಪರ್ಕ ಇದ್ದದ್ದು ನಿಜವಾಗಿತ್ತು . ಚಿರಾಗ್ ಒಬ್ಬ ಕ್ಯಾರಿಯರ್ . ಈ ರೀತಿ ಕ್ಯಾರಿಯರ್ ಕೆಲಸ ಮಾಡುವುದು ಬಹಳ ಅಪಾಯ ಹೊಟ್ಟೆಯಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ವಜ್ರ ಇದೆಯೆಂದರೆ ಹೊಟ್ಟೆಯನ್ನೇ ಸೀಳಿ ವಜ್ರ ತೆಗೆದುಕೊಂಡು ಹೋಗುತ್ತಾರೆ . ಅಥವಾ ಖುರೆಷಿಯೇ ಕೆಲವೊಮ್ಮೆ ಸಾಕ್ಷಿ ಸಿಗಬಾರದೆಂದು ಕೊಲೆ ಮಾಡಿಸುತ್ತಾನೆ . ಆದರೆ ಆ ಮಾಹಿತಿಗಳು ಫೇಸ್ಬುಕ್ನಲ್ಲಿ ಇರಲಿಲ್ಲ . ವಾಟ್ಸ್ ಅಪ್ ಹ್ಯಾಕ್ ಮಾಡಬೇಕಿತ್ತು , ಅದು ನನಗೆ ಬಹಳ ಸುಲಭದ ಕೆಲಸ . ವಾಟ್ಸ್ ಅಪ್ ಬಳಸುವುದು ' md5 algorithm' with hash tag . ಎರಡೇ ನಿಮಿಷದಲ್ಲಿ ಅವನ ಮೆಸೇಜ್ ಎಲ್ಲವನ್ನೂ ನನ್ನ ಕಂಪ್ಯೂಟರ್ ಇಳಿಸಿಕೊಂಡಿತ್ತು . ಅಲ್ಲಿಯೂ ಸಹ ಖುರೆಷಿಯ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ , ಆದರೆ ಚಿರಾಗ್ ಮತ್ತು ಸ್ನೇಹ ಇಬ್ಬರೂ ಗೊಂದಲಗೊಂಡಿದ್ದರು . ಚಿರಾಗ್ ಆಕೆಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ . ಆದರೆ ಇಬ್ಬರೂ ಯಾವುದೇ ರಿಲೇಶನ್ಶಿಪ್ ನಲ್ಲಿ ಇರಲಿಲ್ಲ . ಈತನೇ ಆಕೆಯನ್ನು ಪೀಡಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ . ಆಕೆ ಬಹಳ ಸಭ್ಯವಾಗೆ ವರ್ತಿಸಿದ್ದಳು , ಹನಿ ಟ್ರ್ಯಾಪಿಂಗ್ ಸಹ ಅಲ್ಲ . ಹಾಗಾದರೆ ಯಾಕೆ ಕೊಲೆ ನಡೆಯಿತು ? .
ಪೋಲಿಸು ಜೀಪು ನಮ್ಮ ಮನೆಯ ಮುಂದೆ ಬಂದಿತು ಅದನ್ನು ಹತ್ತಿ ಆಸ್ಪತ್ರೆಗೆ ನಡೆದೆ . ನನ್ನ ಊಹೆ ನಿಜವಾಗಿತ್ತು ಆದರೆ ರಿಪೋರ್ಟ್ ನೋಡಿ ನಾನೂ ಸಹ ಬೆಚ್ಚಿಬಿದ್ದೆ . ಆತನ ಹೊಟ್ಟೆಯಲ್ಲಿ ನಾಲ್ಕು ಕೋಟಿ ಬೆಲೆಬಾಳುವ ವಜ್ರ ಇತ್ತು ! . ಇಷ್ಟು ವಜ್ರ ಇಟ್ಟುಕೊಳ್ಳುವುದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ . ಆತ ನಡೆದಾಡುವ ಬ್ಯಾಂಕ್ , ದರೋಡೆಕೋರರ ಹಾಟ್ ಫೇವರೆಟ್ . ಆದರೆ ಕೊಲೆ ಆದ ಮೇಲೂ ವಜ್ರ ಹೊಟ್ಟೆಯಲ್ಲೇ ಇದೆ , ಅಂದರೆ ಇದು ದುಡ್ಡಿನ ಆಸೆಗೆ ನಡೆದ ಕೊಲೆ ಅಲ್ಲ ಎಂಬುದು ಸ್ಪಷ್ಟ .
ಆಸ್ಪತ್ರೆಯಿಂದ ಹೊರ ಬರುವ ಹೊತ್ತಿಗೆ ಪತ್ರಕರ್ತರ ದಂಡೇ ನೆರೆದಿತ್ತು . ನನ್ನ ಮೇಲೆ ಬಹಳಷ್ಟು ಪೊಲಿಟಿಕಲ್ ಪ್ರೆಷರ್ ಇತ್ತು . ನೂರಾರು ಪ್ರಶ್ನೆಗಳನ್ನು ನನ್ನ ಮೇಲೆ ಎಸೆದರು . ನಾನು ಯಾವುದಕ್ಕೂ ಪ್ರತಿಕ್ರಿಯಿಸದೇ ,
" ಬಹಳ ಇಂಪಾರ್ಟೆಂಟ್ ಲೀಡ್ ಸಿಕ್ಕಿದೆ ಇನ್ನು ಇಪ್ಪತ್ನಾಲ್ಕು ಗಂಟೆಯೊಳಗೆ ಕೊಲೆಗಾರನನ್ನು ಹಿಡಿಯುತ್ತೇನೆ " ಎಂದು ಹೇಳಿಕೆ ನೀಡಿದೆ . ಆಗ ನನಗೆ ನನ್ನ ಮೂರ್ಖ ಹೇಳಿಕೆ ಜೀವಕ್ಕೇ ಕುತ್ತು ತರುತ್ತದೆ ಎಂದು ತಿಳಿದಿರಲಿಲ್ಲ .
( ಮುಂದುವರೆಯುವುದು........ )

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ