21/3/15

ಗೊಂದಲ

ಅವಳು ಪದೇ ಪದೇ ಕ್ಯಾಂಡಿಕ್ರಷ್ request ಕಳಿಸುತ್ತಿದ್ದಾಗಲೇ ಅವಳಿಗೆ ನನ್ನ ಮೇಲೆ ಕ್ರಷ್ ಇದೆ ಎಂದು ಗೊತ್ತಾಗಿತ್ತು. Candycrush ನನ್ನ ನೆಚ್ಚಿನ ಗೇಮ್ ಏನೂ ಅಲ್ಲ, ಆದರೂ ಅವಳಿಗಾಗಿ ಆಡಿದೆ .ಹಾಗೇ ಆಡ್ತಾ ಆಡ್ತಾ ಒಂದು ಇನ್ನೂರೋ, ಮುನ್ನೂರೋ ಲೆವೆಲ್ ಕಂಪ್ಲೀಟ್ ಸಹ ಮಾಡಿಬಿಟ್ಟೆ. ಅವಳು ಮೇಲಿಂದ ಮೇಲೆ ಲೈಫ್ ಕೊಡು ಎಂದು ಮೇಸೆಜ್ ಮಾಡುತ್ತಿದ್ದಳು. ಲೈಫ್ ಕೊಟ್ಟು ಬಿಡ್ಲಾ? ಈ ಮೊಬೈಲು, ಹುಡುಗಿ ಇಂತ ವಿಷಯದಲ್ಲಿ ಕಾದಷ್ಟೂ ಒಳ್ಳೆ ಮಾಡೆಲ್ ಸಿಗುತ್ತೆ. ಹತ್ತು ಜನರಲ್ಲಿ ಒಬ್ಬಳನ್ನೇ ಸೆಲೆಕ್ಟ್ ಮಾಡಿದ್ರೆ ಇನ್ನು ಒಂಬತ್ತು ಜನ ಮಿಸ್ ಆಗಿ ಬಿಡ್ತಾರೆ ಅಂತ ಯೋಚನೆ ಮಾಡ್ತಾ ಇದ್ದೆ. ಅಷ್ಟರಲ್ಲೇ ಅವಳು "completed candycrush game, starting the new game on karate " ಅಂತ status ಹಾಕಿದ್ಲು. ಯಾಕೋ ಮತ್ತೆ ಅವಳನ್ನು ಕಾಂಟ್ಯಾಕ್ಟ್ ಮಾಡೋ ಧೈರ್ಯ ಮಾಡಲಿಲ್ಲ .