ನಾನು ಮೊದಲೇ ಹೇಳಿದ್ದೆ, ಈ ಚಳಿಗಾಲದಲ್ಲಿ ರಾತ್ರಿ ಓಡಾಡುವುದು ಕಷ್ಟ ಎಂದು. ನನ್ನ ಮಾತು ಇವರೆಲ್ಲಿ ಕೇಳಬೇಕು? ರಾತ್ರಿ ಊಟವಾದ ಕೂಡಲೇ ಬೈಕಿನಲ್ಲಿ ನನ್ನನ್ನೂ ಹೊರಡಿಸಿಬಿಟ್ಟರು. ನಾನು ಯಾವತ್ತೂ ಬೆಳಗು ಹರಿಸುವ ಯಕ್ಷಗಾನದ ಆಟ ನೋಡಿದವನಲ್ಲ. ಅದರಲ್ಲೂ ಶಿರಸಿ, ಸಿದ್ಧಾಪುರ ಕಡೆಯ ಆಟ ನೋಡಿದವನೇ ಅಲ್ಲ ಬಿಡಿ . ಏನೋ ಒಂದು ಕೆಟ್ಟ ಕುತೂಹಲ, ಹೊರಟೇಬಿಟ್ಟೆ. ನಾವು ಹೋದಾಗ ಒಂಭತ್ತು ಗಂಟೆಗೆ ಶುರುವಾಗುವ ಪ್ರಸಂಗ ಇನ್ನೂ ಮುಗಿದಿರಲಿಲ್ಲ. ಹನ್ನೆರಡು ಗಂಟೆಗೆ ಮುಗಿಯಬೇಕಾಗಿದ್ದ 'ಭೀಷ್ಮ ವಿಜಯ' ಒಂದೂವರೆಯಾದರೂ ಮುಗಿಯುತ್ತಿಲ್ಲ. ನಂತರವಾದರೂ ಎರಡನೇ ಪ್ರಸಂಗ ಶುರುವಾಗಬಹುದು ಎಂದು ಕಾದೆ. ಸಂಘಟಕರ ಭಾಷಣದ ಬಿರುಗಾಳಿಗೆ ನನಗೆ ಸಣ್ಣ ನಿದ್ದೆಯ ಜೊಂಪು. ಇನ್ನು ಅಲ್ಲಿ ಕುಳಿತು ಉಪಯೋಗವಿಲ್ಲ ಎಂಬುದು ನನಗೆ ಗೊತ್ತಾಗಿ ಹೋಯಿತು. ಸ್ನೇಹಿತರಿಗೆ ಹೇಳಿದರೆ ಅವರು ನನ್ನನ್ನು ಖಂಡಿತ ಬೆಳಗಿನವರೆಗೂ ಕೂರಿಸಿಬಿಡುತ್ತಾರೆ ಎಂಬುದು ಸ್ಪಷ್ಟ. ಯಾರಿಗೂ ಹೇಳದೇ ಎರಡು ಗಂಟೆಗೆ ಅಲ್ಲಿಂದ ಹೊರಟುಬಿಟ್ಟೆ.
ಹತ್ತೇ ನಿಮಿಷಕ್ಕೆ ಸಿಧ್ದಾಪುರ-ಶಿರಸಿ ರಸ್ತೆಗೆ ಬಂದಿದ್ದೆ. ವಾಜಗದ್ದೆಗೆ ತಿರುಗುವ ರಸ್ತೆಯಲ್ಲಿ ಒಂದು ಹುಡುಗಿ ನನ್ನ ಬೈಕಿಗೆ ಕೈ ಮಾಡಿದಳು. ಕೆಂಪು ಚೂಡಿದಾರ್, ಕೈಯಲ್ಲಿ ಅದೇ ಬಣ್ಣದ ಒಂದು ಬ್ಯಾಗು. ಮೊದಲಿಗೆ ಹೆದರಿಕೆ ಆಗಿದ್ದೇನೋ ನಿಜ. ಅವಳ ಕಾಲು ನೋಡಿದೆ. ಉಲ್ಟಾ ಏನೂ ಇರದೇ ನೆಟ್ಟಗೆ ಇತ್ತು. ಮೇಲಾಗಿ ಸುಂದರವಾಗಿದ್ದಳು ಕೂಡ. ಮತ್ತೇಕೆ ತಡ ಡಿಸ್ಕ್ ಬ್ರೇಕ್ ಒತ್ತಿ ಸಿನಿಮೀಯ ಸ್ಟೈಲ್‌ನಲ್ಲಿ ಗಾಡಿ ನಿಲ್ಲಿಸಿದೆ.
"ತಾಳಗುಪ್ಪ ಹೋಗ್ಬೇಕಿತ್ತು", ಅವಳೆಂದಳು. 'ಅಯ್ಯೋ ನಮ್ಮೂರ ಕಡೆಗೆ', 'ಮಗಾ ಲಾಡು ಬಂದು ಬಾಯಿಗೆ ಬಿತ್ತಾ', ಒಳಗಿಂದ ಹೊಡೆದುಕೊಂಡಿತು. ಹಂದಿ ಮುಸುಡಿಯವರ ಹೂಸುವಾಸನೆ ನೋಡಿದ್ದ ನನ್ನ ಬೈಕು ಮೊದಲ ಬಾರಿಗೆ ಡವ್ ಸೋಪಿನ ವಾಸನೆ ನೋಡುತ್ತಿತ್ತು.
ಸ್ವಲ್ಪ ದೂರ ಹೋಗುತ್ತಿದ್ದಂತೆ 'ಓ ಇನಿಯಾ.......' ಹಾಡು!! ನಾನು ಬೆಚ್ಚಿ ಹಿಂದೆ ನೋಡಿದರೆ ಆಕೆಯ ಮೊಬೈಲ್ ರಿಂಗ್ಟೋನ್ ಅದು. ಸ್ನೇಹಿತೆಯೋ, ಆಕೆಯ ಮನೆಯವರೋ ಫೋನು ಮಾಡಿದ್ದರು. ಆಕೆ ನನ್ನ ಗಾಡಿ ನಂಬರ್, ನನ್ನ ಊರು, ಕುಲ, ಗೋತ್ರ ಎಲ್ಲವನ್ನೂ ಕೇಳಿ ಆ ಕಡೆಯವರಿಗೆ ಅರುಹಿದಳು.
'ಓಹೋ! ಹುಡುಗಿ ಜಾಣೆ ಕೂಡ. ತನ್ನ ಸೇಫ್ಟಿಗೆ ಈ ರೀತಿ ಮಾಡಿದ್ದಾಳೆ ಅನಿಸಿತು. ಅವಳ ಜಾಣ್ಮೆಗೆ ತಲೆದೂಗಿದೆ. ಏಕೆ ಇವಳ ಜಾತಕ ತರಿಸಿ ಸಂಬಂಧ ಕುದುರಿಸಬಾರದು? ಯೋಚನೆ ಬಂದಿದ್ದು ಸುಳ್ಳಲ್ಲ. ಯೋಚನೆ ಮುಗಿಯುವುದರೊಳಗೆ 'ಧಡ್-ಧಡ್' ಎಂದು ಎರಡು ಹಂಪು ಹಾರಿಸಿಯಾಗಿತ್ತು.
ನಮ್ಮ ಪ್ರಯಾಣಕ್ಕೆ ಇಬ್ಬನಿ ಸಾಥ್ ಕೊಡುತ್ತಿತ್ತು. ಪೆಟ್ರೋಲ್ ಕಮ್ಮಿ ಇದ್ದ ಕಾರಣ ಹಾಕಿಸಿಕೊಳ್ಳಲು ತಾಳಗುಪ್ಪ ಬಂಕ್ ಒಳಗೆ ಹೋದೆ. ಹಿಂದಿನ ಸೀಟ್ ಖಾಲಿ!! ಆ ಚಳಿಯಲ್ಲೂ ನನ್ನ ಬಟ್ಟೆಗಳು ಬೆವರಿನಿಂದ ನೀರಾದವು. ಹೆಚ್ಚು ಕಮ್ಮಿಯಾದಂತೆ ನಾಳೆ ಪೊಲೀಸ್ ಹಿಡಿಯುವುದು ನನ್ನನ್ನು. ಊರಲ್ಲಿ ಹೋಗುವ ಮಾರಿಯನ್ನು ಕರೆದು ಲಿಫ್ಟ್ ಕೊಟ್ಟಿದ್ದೆ. ಕೊನೆಯ ಪ್ರಯತ್ನವೆಂಬಂತೆ ಬಂದ ದಾರಿಯಲ್ಲೇ ಹುಡುಕುತ್ತಾ ಹೋದೆ. ಆ ಹಂಪು ಇರುವ ತನಕವೂ ನೋಡಿ ಬಂದೆ. ಕೊನೇ ಪಕ್ಷ ಬ್ಯಾಗಾದರೂ ಕಾಣಬಹುದೇನೋ ಎಂದು ನೋಡಿದೆ. ಉಹೂಂ, ಎಲ್ಲೂ ಇಲ್ಲ. ಆಗುವುದು ಆಗಲಿ, ನಾಳೆ ನಾನೇ ಪೊಲೀಸ್ ಬಳಿ ಹೋಗಿ ಎಲ್ಲವನ್ನೂ ಹೇಳುತ್ತೇನೆ ಎಂದು ನಿರ್ಧರಿಸಿ ಮನೆ ಕಡೆ ಗಾಡಿ ತಿರುಗಿಸಿದೆ.
ನನ್ನ ಹೃದಯ ಬಾಯಿಗೆ ಬಂದದ್ದು ಅದೇ ಹುಡುಗಿ ತಾಳಗುಪ್ಪ ರೈಲ್ವೇ ಸ್ಟೇಷನ್ ಎದುರು ಕೈ ಮಾಡಿದಾಗ. ಅದೇ ಬಟ್ಟೆ, ಅದೇ ಬ್ಯಾಗು!!
ಈ ಬಾರಿ ನಿಲ್ಲಿಸದೆ ಇನ್ನೂ ಜೋರಾಗಿ ಓಡಿಸಿದೆ. ಅವಳಿಂದ ಒಂದೆರಡು ಮಾರು ದೂರ ಹೋಗಿಲ್ಲ, ಅಷ್ಟರಲ್ಲಿಯೇ ನನ್ನ ಬೈಕು ಗುರುಗುಟ್ಟುತ್ತಾ ನಿಂತುಹೋಗಿತ್ತು. ಎಷ್ಟೇ ಒದ್ದರೂ ಸ್ಟಾರ್ಟ್ ಆಗುತ್ತಿಲ್ಲ. ನೋಡುತ್ತೇನೆ ಆಕೆ ಹಿಮ್ಮುಖವಾಗಿಯೇ ನನ್ನ ಬಳಿ ಬರುತ್ತಿದ್ದಳು. ಗಾಯತ್ರೀ ಮಂತ್ರ ಹೇಳುತ್ತಾ ಜೋರಾಗಿ ಕಿಕ್ ಮಾಡಿದೆ. ಕಾಲು ಮಂಚಕ್ಕೆ ತಾಗಿ ಎಚ್ಚರವಾಯ್ತು!