(ಚಿ ರ ನಿದ್ರೆಗೆ ಜಾರಿದ ನನ್ನ ಸ್ನೇಹಿತನಿಗೆ)
ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ
ಸ್ನೇಹದ ಒರತೆ ಬರಿದಾಗುವಷ್ಟು ಸುರಿಯುವೆ ಸ್ನೇಹವನ್ನು ಆ ಸಂಜೆ
ನನ್ನ ಮನದ ಅರಮನೆಯಿಂದ ಬಿಡುಗಡೆ ನೀಡುತ್ತಿರುವೆ, ಎಂದಿಗೂ ನನ್ನ ಕಾಡದಿರು
ಎಂದೋ ಬಿದ್ದ ಕನಸಿನಲ್ಲಿ, ಧುತ್ತನೆ ಎದುರಾಗುವ ನೆನಪಿನಲ್ಲಿ
ನಿನ್ನ ಜೀವ ಹಿಡಿದಿಡಲು ನಾನು ಸಾವಿತ್ರಿ, ಅನುಸೂಯೆಯಲ್ಲ
ನೀನೆ ಒಮ್ಮೆ ಬಂದು ತಬ್ಬಿಬಿಡು,ಆವರಿಸಿಬಿಡು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ