ನೀವಾದರೂ ಅನು ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ ? . ಇಬ್ಬರು ನಿಮ್ಮನ್ನು ಸಮವಾಗಿ ಪ್ರೀತಿಸಿದರೆ ನೀವು ಯಾರನ್ನು ಆಯ್ದು ಕೊಳ್ಳುತ್ತೀರಿ ? . ಅಕ್ಷರಶಃ ಅನು ಅಡಕತ್ತರಿಯಲ್ಲಿ ಸಿಲುಕಿ ಕೊಂಡಿದ್ದಳು . ಭೂತಭವಿಷಧ್ತ್ವರ್ತಮಾನಗಳ ಪರಿವಿಯೇ ಇಲ್ಲದೇ ದಿನ ಕಳೆಯುವಳು . ಊಟ-ನಿದ್ದೆಗಳ ಕಡೆಗೆ ಗಮನವೇ ಇಲ್ಲ . ದಿನದ ಮುಕ್ಕಾಲು ಭಾಗ ಒಂಟಿಯಾಗಿ ಕಳೆಯುವಳು , ಗಂಟೆಗಟ್ಟಲೇ ಶೂನ್ಯವನ್ನು ದಿಟ್ಟಿಸುತ್ತಾ ನಿಂತುಬಿಡುವಳು . ಮತ್ತದೇ ಹಳೆಯ ಪ್ರಶ್ನೆ, "ಪ್ರೀತಿ ಎಂದರೇನು ?" . ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡುವಳು . ಇಲ್ಲ ,ಏನೂ ಇಲ್ಲ , ತನಗೆ ಯಾರೂ ಇಲ್ಲ , ಒಮ್ಮೆ ಯೋಚಿಸುವಳು . ಮರೆಯಲ್ಲಿ ಬಿಕ್ಕುವಳು . ಒಮ್ಮೆಗೆ ಸಾವಿನ ಯೋಚನೆ ಬರುವುದು ಸುಳ್ಳಲ್ಲ , ಆದರೆ ತಾನು ತನ್ನ ಜೊತೆಗೆ ವಿಶುವನ್ನೂ ಸಾವಿನ ಬಾವಿಗೆ ತಳ್ಳುತ್ತೇನೆ ಎಂದು ಯೋಚನೆ ಕೈ ಬಿಡುವಳು . ಅವಳಾದರೂ ಏನು ತಾನೇ ಮಾಡಿಯಾಳು ? .
ಜೀವನ ಯಾಂತ್ರಿಕವಾಗಿ ಸಾಗುತಿತ್ತು . ಆಕೆ ಓದಿದಳು , ಕೇವಲ ಪಾಸಾಗಲಿಲ್ಲ , ಮೊದಲಿಗಳಾದಳು . ಆದರೆ ಜೀವನ ? .
ಅದೊಮ್ಮೆ ಬೆಳಿಗ್ಗೆ ಆಕೆ ಕಾಲೇಜಿಗೆ ಹೊರಟಿದ್ದಳು . ಬಿಳಿಯ ಸಲ್ವಾರ್ ತೊಟ್ಟು ದೇವತೆಯಂತೆ ಕಾಣುತ್ತಿದಳು ಎಂದು ಹೇಳ ಬೇಕಿಲ್ಲ ತಾನೇ ? .
ಅದಾಗಲೇ ಆದಿ ವೈಟಿಂಗ್ ರೂಮಿನಲ್ಲಿ ಕುಳಿತು ಬಿಟ್ಟಿದ್ದ . ಅನು ಬೆಚ್ಚಿ ಹೋದಳು ,
" ಯಾಕೋ ನಿಮ್ಮನ್ನ ನೋಡ್ಬೇಕು ಅನುಸ್ತು ಅದ್ಕೆ ಬಂದೆ ".
ಅವನ ಉರಿಯುತ್ತಿದ್ದ ಕಣ್ಣುಗಳೇ ಹೇಳುತಿತ್ತು , ಅವನು ರಾತ್ರಿ ಒಂದು ಕ್ಷಣವೂ ಕಣ್ಣು ಮುಚ್ಚಿಲ್ಲ ಎಂದು . ಅನು ಕೇವಲ ತೋರ್ಪಡಿಕೆಗೆ ಎಂಬಂತೆ ಮಾತನಾಡಿಸಿ ಕಳುಹಿಸಿ ಬಿಟ್ಟಳು . ಆದರೆ ತಕ್ಷಣವೇ ಒಂದು ನಿರ್ಧಾರಕ್ಕೆ ಬಂದಿದ್ದಳು .
ಇದನ್ನೆಲ್ಲಾ ವಿಶುವಿಗೆ ಹೇಳಬೇಕು , ಅವನೇ ಇದಕ್ಕೆಲ್ಲಾ ಪರಿಹಾರ ನೀಡಬಲ್ಲ . ಆತ ದೇವರು , ದೇವರು ಮುನಿಸಿಕೊಳ್ಳುವುದಿಲ್ಲ ತನ್ನನ್ನು ಕ್ಷಮಿಸುತ್ತಾನೆ ಎಂದುಕೊಂಡೇ ಆಕೆ ಸುಧೀರ್ಘವಾದ ಮೇಲ್ ಟೈಪಿಸಿ ವಿಶುವಿಗೆ ಕಳುಹಿಸಿದಳು .
ಆದರೆ ವಿಶು ದೇವರಲ್ಲ ಅವನೂ ಎಲ್ಲರಂತೆ ಮನುಷ್ಯ . ಆತನಿಗೂ ನಿಮ್ಮಂತೆಯೇ ಒಂದು ಪುಟ್ಟ ಹೃದಯವಿದೆ . ಅದರಲ್ಲಿ ಕಾಮ , ಕ್ರೋಧ , ಮದ , ಮಾತ್ಸರ್ಯವಿಲ್ಲ ಕೇವಲ ನವಿರಾದ ಪ್ರೀತಿಯಿದೆ . ಆದರೆ ಹೆಬ್ಬಂಡೆಯಂತಹ ವಿಶುವಿಗೆ ಕೂಡ ಆಘಾತವಾಗಿತ್ತು . ಮೇಲ್ ಓದುತ್ತಾ ಓದುತ್ತಾ ಅವನ ಶಕ್ತಿ ಕುಂದಿ ಹೋಗುತಿತ್ತು . ಯಾವುದನ್ನು ಆತ ಕನಸಿನಲ್ಲಿಯೂ ಯೋಚಿಸಿರಲಿಲ್ಲವೋ ಅದು ವಾಸ್ತವವಾಗುತಿತ್ತು . ತಕ್ಷಣವೇ ಆತ ತಲೆ ಕೊಡವಿಕೊಂಡು ಎದ್ದ .
"ಸುಮ್ಮನೆ ಇರು ಅನು , ಈ ತರ ಎಲ್ಲ ತಮಾಷೆ ಮಾಡ್ಬಾರ್ದು " ಎಂದಷ್ಟೇ ಪ್ರತಿಕ್ರಿಯಿಸಿದ .
ಇತ್ತ ಅನು ತೀರಾ disturbed ಆಗಿ ಹೋದಳು . ತಾನು ಅವನನ್ನು ಬಿಟ್ಟು ಹೋಗುವುದನ್ನು ಆತ ಕಲ್ಪನೆ ಕೂಡ ಮಾಡಿಕೊಳ್ಳಲಾರ . ಮುಂದಿನ ಕಥೆ ಏನು ಎಂದು ತಿಳಿಯದೆ ಅನು ತಲೆ ಮೇಲೆ ಕೈ ಹೊತ್ತು ಕೂತಳು . 'ಲೇ' ಯ ಹಿಮ ಕರಗುತ್ತಿತ್ತು .....................................................
(ಮುಂದುವರೆಯುವುದು .........................)