11/9/15

ಹುಚ್ಗುದುರೆ ಭಾಗ -4

ರಾತ್ರೋ ರಾತ್ರಿ ಅನು ಮೈಸೂರಿಗೆ ಹೊರಟು ನಿಂತಿದ್ದಳು . ತನಗೆ ಏನಾಗುತ್ತಿದೆಯೆಂಬ ಕಲ್ಪನೆಯೂ ಅವಳಿಗೆ ಇರಲಿಲ್ಲ . ಜೀವದ  ಗೆಳೆಯನನ್ನು ಆಯ್ಕೆ ಮಾಡಿಕೊಳ್ಳಲೋ ? ಅಥವಾ ಜೀವ ಉಳಿಸಿದ ಗೆಳೆಯನನ್ನು ಆಯ್ದುಕೊಳ್ಳಲೋ ? .  ಆದರೆ ಆ ರೀತಿ ಒಬ್ಬರನ್ನೇ ಆರಿಸಿ ಕೊಂಡರೆ ಉಳಿದವನ ಗತಿ ಏನಾಗಬಹುದು ? . ತಾನು ಯಾರನ್ನು ಆರಿಸಿಕೊಂಡರೂ ಉಳಿದವನು ಸತ್ತಂತೆಯೇ ಸರಿ . ತಾನು ಯಾರ ಬಳಿ ಇದ್ದರೂ ತನ್ನ ಸಾವು ಖಚಿತ , ಇನ್ನೊಂದು ಜೀವಕ್ಕೆ ಮೋಸ ಮಾಡಿದ ಶಾಪದಲ್ಲಿ ಬೆಂದು ಹೋಗುವುದು ಖಂಡಿತ .
ಈ ಪ್ರೀತಿ ಜಗತ್ತಿನಲ್ಲಿ ಯಾರನ್ನೂ ಬಿಟ್ಟಿಲ್ಲವೇನೋ ? . ಇನ್ನೇನು ಎಲ್ಲ ಮುಗಿದು ಸರಿಯಾಯಿತು ಎನ್ನುವಷ್ಟರಲ್ಲಿ , ಮತ್ತೆ ಮನೆಯ ಮುಂದೆ ತಟ್ಟೆ ಹಿಡಿದು ಬರುವ ಭಿಕ್ಷುಕನಂತೆ ಮತ್ತೆ ಪ್ರತ್ಯಕ್ಷವಾಗುತ್ತದೆ . ಇಷ್ಟಕ್ಕೂ ಪ್ರೀತಿ ಎಂದರೇನು ? . ಯಾವುದೋ ವ್ಯಕ್ತಿ ನಮ್ಮೆದುರು ಬಂದಾಗ oxytocin ಉತ್ಪತ್ತಿಯಾಗುವ ಕೇವಲ ಜೈವಿಕ ಕ್ರಿಯೆಯೇ ? . ಕೇವಲ ಹಾರ್ಮೋನುಗಳ ವ್ಯತ್ಯಾಸವೇ ಪ್ರೀತಿಯೇ ? ಹಾಗಾದರೆ ಅನಾಸಿನ್ ಮಾತ್ರೆ ಇಂದ ಹಿಡಿದು ಫ್ಯಾನಿಗೆ ನೇತು ಹಾಕಿಕೊಳ್ಳುವಷ್ಟರ ಮಟ್ಟಿಗೆ ಈ ಪ್ರೀತಿ ಏಕೆ ನಮ್ಮನ್ನು ಕಾಡುತ್ತದೆ ? .ಏನೇನೋ ಯೋಚಿಸುತ್ತಿದ್ದಳು ಅನು .
ಬಸ್ ನಿಂದ ಇಳಿದು ನಡೆದೇ ಬಂದು ಬಿಟ್ಟಿದ್ದಳು . ಮತ್ತದೇ ಪ್ರಶ್ನೆ ಹೊತ್ತು ಬಂದಿದ್ದಳು ' ಯಾರನ್ನು ಆಯ್ದುಕೊಳ್ಳಲಿ ?' .
ಮಗು ತಾಯಿಯ ಬಳಿ ಬಂದಂತೆ ವಿಶುನ ಹತ್ತಿರ ಬಂದಿದ್ದಳು .
"ಬಾ ಅನು " ಅವನದು ಅದೇ ಧೃಡ ಧ್ವನಿ . ಒಂಚೂರು ಭಾವನೆಗಳನ್ನು ಹರಿಯ ಬಿಡುವವನಲ್ಲ .  ಪಕ್ಕದಲ್ಲಿ ರಿಯಾ ಕುಳಿತಿದ್ದಳು . ರೂಮಿನ ತುಂಬೆಲ್ಲಾ ಪುಸ್ತಕಗಳಿಂದ ತುಂಬಿ ಹೋಗಿತ್ತು . ಅವನು ಅಕ್ಷರಶಃ ಸನ್ಯಾಸಿಯಂತೆ ಬದುಕುತಿದ್ದ .
"ನಾನು ತಿಂಡಿ ತರ್ತೀನಿ ಇರು " ಎಂದು ಅವನು ರಿಯಾಳ ಕಾರಿನ ಕೀ ಎತ್ತಿಕೊಂಡು ಹೊರಟ . ರೂಮಿನಲ್ಲಿ ರಿಯಾ ,ಅನು ಇಬ್ಬರೇ ಉಳಿದರು .
"You know Anu ,ನೀವು ತುಂಬಾ lucky ,ಯಾವಾಗ್ಲೂ ಅವನು ನಿಮ್ಮ ಬಗ್ಗೆ ಯೋಚ್ನೆ ಮಾಡ್ತಾ ಇರ್ತಾನೆ . ನಾನು ಯಾವತ್ತೂ ಗಂಡಸರನ್ನ ಗೌರವದಿಂದ ನೋಡಿದವಳೇ ಅಲ್ಲ , I wanted to become a whore . ನನ್ನ ಮುಂದೆ ಗಂಡಸರು ತಲೆ ತಗ್ಗಿಸಿ ನಿಲ್ಲಬೇಕು , ಸುಳ್ಳಿನ ಬಟ್ಟೆ ಕಳಚಿಟ್ಟು ನನ್ನ ಮುಂದೆ ಅವರು ಬೆತ್ತಲಾಗಬೇಕು  " ಎಂದು ಅವಳು ಮಾತನಾಡುತ್ತಿದ್ದರೆ ಅನು ಅವಳನ್ನು ಅಚ್ಚರಿಯಿಂದ ನೋಡುತ್ತಿದ್ದಳು . ಸ್ಥಿತಿವಂತರ ಮನೆಯ ಹುಡುಗಿ ವೇಶ್ಯೆಯಾಗುವುದು ಎಂದರೆ ತಮಾಷೆಯೇ  ? .
ಕತ್ತಲಾವರಿಸುತಿತ್ತು , ಮನೆಯ ಹೊರಗೆ , ಮನಸಿನ ಒಳಗೆ . ಅನು ಮತ್ತು ವಿಶು ಸುಮ್ಮನೆ ಆಕಾಶವನ್ನು ದಿಟ್ಟಿಸುತ್ತಾ ಟೆರೇಸಿನ ಮೇಲೆ ಕುಳಿತ್ತಿದ್ದರು . ವಿಶು ಹೆಬ್ಬಂಡೆಯಾಗಿದ್ದರೆ , ಅನು ಬಳ್ಳಿಯಾಗಿದ್ದಳು . ತಾನು ಯಾರಿಗೆ ವಂಚಿಸುತ್ತಿದ್ದೇನೆ ? ಆದಿಗಾ ?ವಿಶುವಿಗಾ ? ಅಥವಾ ತನ್ನನೇ ವಂಚಿಸಿಕೊಳ್ಳುತ್ತಿದ್ದಳಾ ?
ತಬ್ಬಿ ಬಿಡು ಗೆಳೆಯ
ಇದೆಲ್ಲಾ ನಿನ್ನದೇ
ಆವರಿಸಿ ಬಿಡು
ಮೈ ಮನವ.

ಎನ್ನ ಮನದ ಕೊಚ್ಚೆಯ ತೊಡೆದು ಬಿಡು
ನಿನ್ನ ಪ್ರೀತಿಯ ಹುಚ್ಚು ಕೋಡಿಯಲ್ಲಿ
ಮುಳುಗಿಸಿಬಿಡು
ಮತ್ತೆ ಏಳದಂತೆ !.

ಎಂದವಳು ಹತ್ತಿರ ಬರುತ್ತಿದರೆ, ವಿಶುವಿನ ಹೃದಯದಲ್ಲಿ ತಲ್ಲಣ ಶುರುವಾಗುತ್ತಿತ್ತು . ಮೊದಲ ಹೆಣ್ಣಿನ ಸ್ಪರ್ಶವದು . ಒಂದು ಕ್ಷಣ ಎಲ್ಲಿ ತಾನು ಮೈ ಮರೆತು ಬಿಡುತ್ತೆನೆಯೋ ಎಂದು ಕೊಸರಿದ . ಆದರೂ ಏನದು ತಲ್ಲಣ ಎಂದು ಅರ್ಥವಾಗಲಿಲ್ಲ .
ಕಾದ ದೇಹಕ್ಕೆ
ಸಿಕ್ಕ ಅವಕಾಶ
ಬಿಸ್ತರದ ಚಿತೆ ಮೇಲೆ
ದೇಹಗಳ ಕಾದಾಟ
ಮನಕ್ಕಂಟಿದ  ವಾಂಛೆಯಾ ಹೊಯ್ದಾಟ
ಏನೀ ಹೋರಾಟ ?
ಅವನು ಮೇಲೋ , ಅವಳು ಮೇಲೋ
ಅಥವಾ ಸಮಬಲವೊ ?
ಅವಳ ಉಸಿರ ಘಮ
ಇವನ ಬೆವೆರ ಪುನುಖು
ಮುಗಿಯದ ಇರುಳು
ಸರಿದ ಮುಂಗುರುಳು
ನಗುತಿದ್ದ ಅವಳ ಮುಖ
ಸಂತಸವೋ ? ದುಃಖವೋ ?
ಶೃತಿ ತಪ್ಪುವ ವೀಣೆ
ಹರಿದು ಹೋದ ತಂತಿ
ಹೊಲಿದು ಕೊಡುವವರ್ಯಾರು ?

ಇಲ್ಲ ವಿಶು ಹೆಬ್ಬಂಡೆ , ಲೇ ಊರಿನ ಹಿಮವಿದ್ದಂತೆ ,ಅವನು ಕರಗಲಾರ .  ನಿರ್ನಿದ್ದೆಯಲ್ಲೂ ತಪ್ಪು ಮಾಡಲಾರ . ಅವನಿಗೇನು ಗೊತ್ತು ಮುಂದೆ ಅದೇ ದೊಡ್ಡ ಪ್ರಮಾದ ಆಗುವುದೆಂದು . ತಲೆ ಕೊಡವಿ ಮೇಲೆದ್ದ .

"ಏನದು ಒಳಗೆ ಹೋಗು ವೇಲು ಹಾಕಿಕೋ " ಕೂಗಿದ್ದ ಕೆಂಪು ಕಣ್ಣಿನ ಅಪ್ಪ .
ಒಳಗೆ ಬಂದ ಅನು , ತನ್ನಪ್ಪ ಗಮನಿಸಿದ್ದು ಏನನ್ನು ಎಂದು  ನೆನೆ -ನೆನೆದು ಅನು ನೀರಾಗಿದ್ದಳು . ಆ ಕ್ಷಣಕ್ಕೆ ಏನಕ್ಕೋ ಕೆಂಪು ಕಣ್ಣಿನ ಅಪ್ಪ ಅವಳಿಗೆ ನೆನಪಾಗಿದ್ದ .
ಹಾಗೆ ಮುಗಿದಿತ್ತು ಆ ರಾತ್ರಿ . ........
ಬೆಳಿಗ್ಗೆ ಆ ರೂಮಿನಲ್ಲಿ ಎರಡು ಧ್ವನಿ ಕೇಳುತಿತ್ತು
"ವಕ್ರ ತುಂಡ ಮಹಾಕಾಯ ಕೋಟಿ ಸೂರ್ಯ ಸಮ ಪ್ರಭಾ ............... "
                                                                                                 (ಮುಂದುವರೆಯುವುದು........... )


 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ