ಎಲ್ಲರ ನೀರಿಕ್ಷೆಯನ್ನು ಹುಸಿ ಮಾಡಿ ಮಾಡಿ ಜಂಬಗಾರಿಗೆ ಮಳೆಗಾಲ ಬಹಳ ಬೇಗನೆ ಕಾಲಿಟ್ಟಿತು . ಕರಿ ಮೋಡಗಳು ತಿರು-ತಿರುಗಿ ಧಾರಾಕಾರವಾಗಿ ಮಳೆ ಸುರಿಸಲಾರಂಭಿಸಿತು . ದಿನದಿಂದ ದಿನಕ್ಕೆ ಗಾಳಿಯ ರಭಸ ಹೆಚ್ಚಾಗ ತೊಡಗಿತು . ಗಾಳಿಗೆ ಸಿಲುಕಿದ ಅಡಿಕೆ ಮರಗಳು ತರ-ತರನೆ ಅಲುಗಿದವು . ಕಿಟಕಿಯಿಂದ ' ಸುಯ್ಯ್ ' ಎಂದು ಸಿಳ್ಳು ಬರುವಷ್ಟರ ಮಟ್ಟಿಗೆ ಗಾಳಿಯ ವೇಗ ಹೆಚ್ಚುತ್ತಾ ಹೋಗುತಿತ್ತು . ರಮೇಶ ಭಟ್ಟರ ಮನೆಗೆ ಕೆಲಸಕ್ಕೆಂದು ಸೈಕಲ್ ತುಳಿಯುತ್ತಾ ಹೋಗುತ್ತಿದ್ದ ಅಣ್ಣಪ್ಪನಿಗೆ ಮಳೆಯ ಹನಿಗಳು ಗುಂಡು ಸೂಜಿಯಂತೆ ಟಪ-ಟಪ ಎಂದು ಹೊಡೆಯುತ್ತಿತ್ತು . ಅಡಿಕೆಗೆ ಔಷದಿ ಹೊಡೆಯುವ ಯೋಚನೆಯನ್ನು ಆತ ಕೈ ಬಿಡುವ ಹಂತಕ್ಕೆ ಬರತೊಡಗಿದ . ಇದ್ದಕ್ಕಿದಂತೆ ಪ್ರಕೃತಿಯ ಮುಂದೆ ಮಾನವ ಏನೂ ಮಾಡಲಾಗದ ಹಸುಗೂಸಿನಂತೆ ಕಾಣಿಸತೊಡಗಿದ .
" ಇವತ್ತು ಔಷದಿ ಹೊಡಿಯದು ಬ್ಯಾಡ " ಎನ್ನುತ್ತಲೇ ಆತ ಸೈಕಲ್ ಸ್ಟಾಂಡ್ ಹಾಕಿದ . ಆದರೆ ಭಟ್ಟರಿಗೆ ಶತಾಯಗತಾಯ ಔಷದಿ ಹೊಡೆಸಲೇ ಬೇಕಿತ್ತು . ಇಲ್ಲದಿದ್ದರೆ ಕೆಲಸಕ್ಕೆ ಕರೆದ ಅಷ್ಟೂ ಆಳುಗಳಿಗೂ ಒಂದು ದಿನದ ಸಂಬಳ ಪುಕ್ಸಟ್ಟೆ ಕೊಡಬೇಕಾಗುತಿತ್ತು .
"ಇಲ್ಲ ಇಲ್ಲ ಇವತ್ತು ಹೊಡಿಲೇಬೇಕು ಮಾರಾಯ , ಆ ಮೂಲೆ ಮರಕ್ಕೆ ಕೊಳೆ ಬಂದೋಗಿದೆ . ಬೇಗ ಔಷದಿ ಬಿದ್ದಿಲ್ಲ ಅಂದ್ರೆ ಇಡೀ ತೋಟಕ್ಕೆ ಹಬ್ಬತ್ತೆ " .
" ಹಂಗಾರೆ ಒಂದ್ ಅರ್ಧ ದಿನ ಹೊಡಿಯನ ಆಮೇಲೆ ಮನೆಗೆ ಹೋದ್ರೆ ಆತು " , ಅಣ್ಣಪ್ಪನ ಸಲಹೆಗೆ ಎಲ್ಲರೂ ತಲೆದೂಗಿದರು .
ಭಟ್ಟರು ತೋಟವಿಳಿದು ಎಲ್ಲೆಲ್ಲಿ ಭೂತವಿದೆ ? ಎಲ್ಲೆಲ್ಲಿ ನಾಗ ಬನವಿದೆ ? ಎಂದು ಆಳುಗಳಿಗೆ ತೋರಿಸತೊಡಗಿದರು . ಪ್ರತಿ ವರ್ಷ ತೋರಿಸಿದರೂ ಆ ಮೂರ್ಖರಿಗೆ ಅದು ಮರೆತು ಹೋಗುತಿತ್ತು . ಅಡಿಕೆಯನ್ನು ಕಳ್ಳ-ಕಾಕರಿಂದ ಉಳಿಸಿಕೊಳ್ಳಲು ಮಲೆನಾಡಿನಲ್ಲಿ ನಾಯಿಗಳಿಗಿಂತ ಹೆಚ್ಚು ಇಂತಹ ಭೂತ , ಪ್ರೇತಗಳನ್ನು ಬಳಸುತ್ತಾರೆ .
ಎಲ್ಲರೂ ಸೇರಿ ತೋಟವಿಳಿದು ಕೆಲಸಕ್ಕೆ ಶುರುವಿಡುವ ಹೊತ್ತಿಗೆ ಹನ್ನೊಂದು ಗಂಟೆಯೇ ಆಗಿಹೋಯಿತು . ಆದರೂ ಸೂರ್ಯ ಅತ್ಯಂತ ಕ್ಷೀಣವಾಗಿ ಗೋಚರಿಸುತ್ತಿದ್ದ . ಭಟ್ಟರು ತಿಂಡಿ ತರಲು ಮನೆಗೆ ಹೋದರು . ಇತ್ತ ಅಣ್ಣಪ್ಪ ನಿಧಾನವಾಗಿ ಮರ ಏರತೊಡಗಿದ . ಕೊನೆ ಹೊತ್ತ ಮರ ಅವನ ಭಾರ ತಾಳಲಾರದೆ ಗಾಳಿಗೆ ಅಲುಗಿತು . ನಿಧಾನವಾಗಿ ಎಲ್ಲಾ ಮರಗಳಿಗೂ ಔಷದಿ ಸಿಂಪಡಿಸತೊಡಗಿದ . ಒಂದರ್ಧ ಗಂಟೆಯ ನಂತರ ಭಟ್ಟರು ತಿಂಡಿ ತಂದರು .
" ಅಲ್ಲ್ರಯ್ಯ ಅಷ್ಟು ಹೇಳಿದೀನಿ ಆದರೂ ಆ ಭೂತ ಬನದ ಹತ್ರ ಎಲೆ-ಅಡಿಕೆ ಉಗುಳಿದಿರಲ್ಲೋ . ದಿನಾ ಪಂಚಗವ್ಯ ಹಾಕಿ ಶುಧ್ಧಿ ಮಾಡೋದೇ ನನ್ನ ಕೆಲ್ಸ ಆಗೋಯ್ತು " .
" ಇಲ್ಲ್ರಯ್ಯ ನಾವು ಆ ಬದಿಗೆ ಹೋಗಿಲ್ಲ " .
ಅದು ರಕ್ತ ಹೀರುವ , ಮಾಂಸ ಮಜ್ಜೆ ತಿನ್ನುವ ಭೂತವಾದರೆ ಯಾರದೋ ಉಗುಳಿಗೆ ಅಸಹ್ಯ ಪಟ್ಟುಕೊಳ್ಳುವ ಅಗತ್ಯವೇ ಇಲ್ಲ . ಒಂದು ವೇಳೆ ಅದು ಸೌಮ್ಯ ಭೂತವಾಗಿದ್ದರೆ ಅದಕ್ಕೆ ಕೋಪವೇ ಬರುವುದಿಲ್ಲ . ಆದರೂ ಸಹ ದೊಡ್ಡ ಅಪರಾಧವೇ ಆಗಿ ಹೋಯಿತೆಂದು ಎಲ್ಲರೂ ತಲೆ ಮೇಲೆ ಕೈ ಹೊತ್ತು ಕುಳಿತರು . ಈ ರಂಪಾಟ ಮುಗಿದು ಮತ್ತೆ ಮರ ಏರುವ ಹೊತ್ತಿಗೆ ಒಂದು ಗಂಟೆಯೇ ಆಗಿ ಹೋಯಿತು . ಗಾಳಿಯ ವೇಗ ದುಪ್ಪಟ್ಟು ಆಗಿತ್ತು .
ಮೂಲೆಯ ಮರವೊಂದಕ್ಕೆ ಔಷದಿ ಹೊಡೆಯುತ್ತಿದ್ದ ಅಣ್ಣಪ್ಪನ ಔಷದಿಯ ಧಾರೆ ಗಾಳಿಗೆ ವಾಲಿ ಬೆಟ್ಟದ ತಪ್ಪಲಿನಲ್ಲಿ ಗೂಡು ಕಟ್ಟಿದ್ದ ಹೆಜ್ಜೇನಿಗೆ ಹೋಗಿ ಬಡಿಯಿತು . ಕ್ಷಣಾರ್ಧದಲ್ಲೇ ನೂರಾರು ಸಾವಿರಾರು ಹುಳಗಳು ಮುಖ ಮೂತಿ ನೋಡದೆ ಕಚ್ಚತೊಡಗಿತು . ಮರದ ಕೆಳಗಿನ ಕೆಲಸಗಾರರು ಓಡಿ ಹೋದರು . ಆದರೆ ಅಣ್ಣಪ್ಪ ಮರದ ಮೇಲೆ ಬಂಧಿ ಆಗಿಹೋದ . ನೋವು ತಾಳಲಾರದೆ ಕೈ ಬಿಟ್ಟ . ಬಿಟ್ಟ ಮರುಕ್ಷಣವೇ ದೊಪ್ಪೆಂದು ನೆಲಕ್ಕೆ ಬಿದ್ದ . ಬಿದ್ದ ನಂತರವೂ ಅವನ ಮುಖವೂ ಕಾಣದಂತೆ ಹುಳಗಳು ಅವನನ್ನು ಮುತ್ತಿಕೊಂಡಿದ್ದವು . ಬಿದ್ದ ಎಷ್ಟೋ ಹೊತ್ತಿನ ನಂತರ ಅವನನ್ನು ಭಟ್ಟರ ಕಾರಿಗೆ ತಂದು ತುಂಬಿದರು .
" ಥೂ ಬಡ್ಡಿ ಮಕ್ಳ ಆ ಭೂತದ ತಂಟೆಗೆ ಹೋಗಬೇಡ್ರೋ ಅಂದ್ರೆ ನನ್ ಮಾತು ಎಲ್ಲಿ ಕೇಳ್ತಿರಾ ? " ಎನ್ನುತ್ತಾ ಭಟ್ಟರು ಕಾರಿನಲ್ಲಿ ಮಾಯವಾದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ