ವೈಜ್ಞಾನಿಕ ಲೇಖನಗಳಿಗೆ ಮುಖ್ಯ ತೊಡಕು ಭಾಷೆ . ಎಲ್ಲಾ ಇಂಗ್ಲಿಷ್ ಪದಗಳನ್ನೂ ಕನ್ನಡಕ್ಕೆ ತರ್ಜುಮೆ ಮಾಡಿದರೆ ಓದುಗರಿಗೆ ಅರ್ಥವೇ ಆಗುವುದಿಲ್ಲ ಅದೇ ಕಾರಣದಿಂದ ಹಲವು ಪದಗಳನ್ನು ಹಾಗೆಯೇ ಬಿಟ್ಟಿದ್ದೇನೆ . ನನ್ನ ಮುಖ್ಯ ಉದ್ದೇಶ ಸಂಹವನ ಅಷ್ಟೇ . ನಿಮಗೆ ಈ ಲೇಖನ ಅರ್ಥವಾದರೆ ಅದೇ ನನ್ನ ಬರಹದ ಸಾರ್ಥಕ್ಯ .
E=mc² , ಇದರ ಅನ್ವೇಷಣೆ ಶುರುವಾಗಿದ್ದು ಐನ್ಸ್ಟೀನ್ ಹುಟ್ಟುವ ಎಷ್ಟೋ ಮೊದಲು . ಎನರ್ಜಿ ಎಂಬ ಅನ್ವೇಷಣೆಯಿಂದ . ಹತ್ತೊಂಬತ್ತೆನೆಯ ಶತಮಾನದ ವಿಜ್ಞಾನಿಗಳು ಎನರ್ಜಿ ಅಥವಾ ಶಕ್ತಿಯ ಬಗ್ಗೆ ಹೆಚ್ಚು ಮಾತನಾಡಿಲ್ಲ . ಆಗ ಕೇವಲ ಫೋರ್ಸ್ ಅಥವಾ ಪವರ್ ಎಂದಷ್ಟೇ ಮಾತನಾಡುತ್ತಿದರು . ಪವರ್ ಆಫ್ ವಿಂಡ್ , ವಸ್ತು ಕೆಳಗೆ ಬಿದ್ದ ಫೋರ್ಸ್ ಇಷ್ಟೇ . ಒಬ್ಬ ಹಸಿದ ಬಡ ಹುಡುಗ ಇಡಿಯ ವಿಜ್ಞಾನದ ದಿಕ್ಕನ್ನೇ ಬದಲಾಯಿಸಿದ .
ಮೈಕಲ್ ಫ್ಯಾರಡೆಗೆ ತನ್ನ ಕೆಲಸದ ಮೇಲೆ ಜಿಗುಪ್ಸೆ ಬಂದಿತ್ತು , ಆತ ಶಿಕ್ಷಣದಿಂದ ವಂಚಿತನಾಗಿದ್ದ . ಆತ ಬುಕ್ ಬೈಂಡಿಂಗ್ ಮಾಡುವ ಕೆಲಸ ಮಾಡುತಿದ್ದ , ಅದೇ ವರವಾಯಿತು . ಕೈಗೆ ಸಿಕ್ಕ ಎಲ್ಲಾ ಪುಸ್ತಕಗಳನ್ನೂ ಆತ ಓದುತ್ತಿದ್ದ . ವಿಜ್ಞಾನದ ಭಾಷಣಗಳನ್ನು ಕೇಳುತ್ತಿದ್ದ . ಒಮ್ಮೆ ಸರ್ ಹಂಫ್ರಿ ಡೇವಿ ಅವರ ಉಪನ್ಯಾಸ ಕೇಳಲು ಹೋಗಿದ್ದ . ಹತ್ತೊಂಬತ್ತನೆಯ ಶತಮಾನದ ವಿಜ್ಞಾನಿಗಳು ಸೆಲೆಬ್ರಿಟಿಯ ತರ ಇರುತ್ತಿದರು , ಅವರ ಉಪನ್ಯಾಸದ ಟಿಕೆಟುಗಳು ಬಿಸಿ ಬಿಸಿ ಬೋಂಡ ಮಾರಾಟವಾದಂತೆ ಬಿಕರಿಯಾಗುತಿತ್ತು . ಡೇವಿ ಅವ್ಯಾಹತವಾಗಿ ನೈಟ್ರಸ್ ಆಕ್ಸೈಡ್ ಸೇವಿಸುತ್ತಿದ್ದ , ಮದ್ಯ ಕೊಡುವ ಅದೇ ಕಿಕ್ ನೈಟ್ರಸ್ ಆಕ್ಸೈಡ್ ಕೊಡಬಲ್ಲದು , ಹ್ಯಾಂಗ್ ಓವರ್ ಇಲ್ಲದೆ ! . ಡೇವಿ ಮಾಡಿದ ಅತೀ ದೊಡ್ಡ ಅನ್ವೇಷಣೆ ' ಫ್ಯಾರಡೆ ' .
ಫ್ಯಾರಡೆ ಸ್ವತಃ ತನ್ನ ನೋಟ್ಸ್ ಸಿದ್ಧ ಪಡಿಸಿ ತಾನೇ ಬೈಂಡಿಂಗ್ ಮಾಡಿಕೊಳ್ಳುತ್ತಿದ್ದ . ಅದೇ ನೋಟ್ಸ್ ಆತನಿಗೆ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಕೊಡಿಸಿತ್ತು . ಫ್ಯಾರಡೆ ಅತ್ಯಂತ ಶ್ರಧ್ಧೆಯಿಂದ ಎಲ್ಲವನ್ನೂ ಕಲಿಯುತ್ತಿದ್ದ . ಗುರುವನ್ನೂ ಮೀರಿಸುವ ಶಿಷ್ಯನಾಗಿ ಆತ ಬೆಳೆಯಲಿದ್ದ .
ಬ್ಯಾಟರಿ ಆಗಷ್ಟೇ ಅನ್ವೇಷಣೆಗೊಂಡಿತ್ತು . ಎಲೆಕ್ಟ್ರಿಸಿಟಿ ಕುತೂಹಲದ ಕೇಂದ್ರಬಿಂದುವಾಗಿತ್ತು . ಆದರೆ ಯಾರೊಬ್ಬರಿಗೂ ಎಲೆಕ್ಟ್ರಿಸಿಟಿ ಒಳಗಿನ ನಿಗೂಢ ಶಕ್ತಿ ಯಾವುದೆಂದು ತಿಳಿದಿರಲಿಲ್ಲ . ಎಲೆಕ್ಟ್ರಿಸಿಟಿ ಎಂದರೆ ದ್ರವ ಹರಿದಂತೆ ಎಂದು ನಂಬಲಾಗಿತ್ತು . ಡ್ಯಾನಿಷ್ ಅನ್ವೇಷಕನೊಬ್ಬ ಕರೆಂಟ್ ಹರಿಯುವ ವೈರ್ ಪಕ್ಕದಲ್ಲಿ ಇಟ್ಟ ಕಂಪಾಸು ಅದುರುವುದನ್ನು ಕಂಡುಹಿಡಿದ . ಮೊದಲ ಬಾರಿಗೆ ಎಲೆಕ್ಟ್ರಿಸಿಟಿ , ಮ್ಯಾಗ್ನೆಟ್ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಾಯಿತು . ಎರಡು ಸಂಪೂರ್ಣ ಬೇರೆ ಎಂದು ತಿಳಿದಿದ್ದ ಎಂಟಿಟಿಗಳು ಒಂದರೊಳಗೊಂದು ಸಮ್ಮಿಳಿತ ಎಂದು ತಿಳಿಯುವ ಮೊದಲ ಹೆಜ್ಜೆ ಅದಾಗಿತ್ತು .
ಯಾವ ದಿಕ್ಕಿನಲ್ಲಿ ವಿದ್ಯುತ್ ಹರಿಯುತ್ತಿದೆಯೋ ಅದರ ವಿರುಧ್ಧ ದಿಕ್ಕಿನಲ್ಲಿ ಕಂಪಾಸು ತಿರುಗುತಿತ್ತು . ಬ್ಯಾಟರಿಯ ಟರ್ಮಿನಲ್ ಉಲ್ಟಾ ಮಾಡಲಾಯಿತು ಅಂದರೆ ಮೊದಲು ಹರಿಯುತ್ತಿದ್ದ ವಿದ್ಯುತ್ತಿನ ವಿರುಧ್ದ ದಿಕ್ಕಿನಲ್ಲಿ ವಿದ್ಯುತ್ ಹರಿಯುತಿತ್ತು . ಆಗ ಕಂಪಾಸು ಮೊದಲು ತಿರುಗಿದ್ದ ವಿರುಧ್ದ ದಿಕ್ಕಿಗೆ ತಿರುಗಿತು . ಫ್ಯಾರಡೆ ಹೊಸ ಕಲ್ಪನೆ ಮುಂದಿಟ್ಟ , ಕರೆಂಟ್ ಹರಿಯುವಾಗ ಅದು ತನ್ನ ಸುತ್ತ ಮ್ಯಾಗ್ನೆಟಿಕ್ ಫೀಲ್ಡ್ ಹೊರ ಸೂಸುತ್ತದೆ ಎಂದು . ಸಹ ವಿಜ್ಞಾನಿಗಳು ನಕ್ಕು ಬಿಟ್ಟಿದ್ದರು .
ಫ್ಯಾರಡೆಗೆ ಮದುವೆ ನಿಶ್ಚಯವಾಗಿತ್ತು , ಆತನಿಗೆ ಕಂಪಾಸಿನ ಸಮಸ್ಯೆ ಒಬ್ಸೆಶನ್ ಆಗಿತ್ತು . ಮದುವೆಯ ಉಂಗುರದಿಂದ ಹೊಸ ಐಡಿಯಾ ಹೊಳೆದಿತ್ತು . ನಿಮ್ಮ ಕೈ ಬೆರಳು ವೈರ್ ಎಂದುಕೊಂಡರೆ , ಅದರೊಳಗೆ ಕರೆಂಟ್ ಹಾಯಿಸಿದಾಗ ಉಂಗುರದಂತೆ , ಅಂದರೆ ಬೆರಳ ಸುತ್ತ ಮ್ಯಾಗ್ನೆಟಿಕ್ ಫೀಲ್ಡ್ ಹುಟ್ಟಿಕೊಳ್ಳುತ್ತದೆ . ಆ ಕಣ್ಣಿಗೆ ಕಾಣದ ಶಕ್ತಿ ಅಥವಾ ಈಗ ನಾವು ಕರೆಯುವ ಎಲೆಕ್ಟ್ರಿಕ್ ಫೀಲ್ಡ್ ಲೈನ್ಸ್ ವೃತ್ತಾಕಾರವಾಗಿರುತ್ತದೆ ಎಂದು ಇದರಿಂದ ತಿಳಿಯಿತು . ಅಂದು ಫ್ಯಾರಡೆ ಅಕ್ಷರಶಃ ಕುಣಿದಾಡಿದ್ದ . ನಂತರ ವೈರ್ ಒಂದನ್ನು ಸ್ಟಾಟಿಕ್ ಮ್ಯಾಗ್ನೆಟ್ ಮುಂದೆ ಇಟ್ಟ ಅದು ತಿರುಗತೊಡಗಿತು . ಶತಮಾನದ ಪ್ರಯೋಗ ಅದಾಗಿತ್ತು , ಎಲೆಕ್ಟ್ರಿಕ್ ಮೋಟಾರ್ ಕಂಡು ಹಿಡಿಯುವಲ್ಲಿ ಮೊದಲ ಹೆಜ್ಜೆ ! .
ಮೊದಲ ಬಾರಿಗೆ ಶಕ್ತಿ ಅಥವಾ ಎನರ್ಜಿಯ ಕಲ್ಪನೆ ಮೂಡಿತ್ತು . ಬ್ಯಾಟರಿ ಕೆಮಿಕಲ್ ಎನರ್ಜಿಯನ್ನು , ಎಲೆಕ್ಟ್ರಿಕ್ ಎನರ್ಜಿಯಾಗಿ ಪರಿವರ್ತಿಸುತ್ತದೆ , ಅದರಿಂದ ಬಂದ ಎಲೆಕ್ಟ್ರಿಸಿಟಿಯನ್ನು ಮ್ಯಾಗ್ನೆಟ್ ನೊಂದಿಗೆ ಸೇರಿಸಿ ಮೋಶನ್ ಅಥವಾ ಚಲನೆಯನ್ನು ಉತ್ಪಾದಿಸಬಹುದು ಎಂಬುದು ಇದರಿಂದ ತಿಳಿಯಿತು . ಇದೆಲ್ಲದರ ಹಿಂದೆ ಇದ್ದದ್ದು ಒಂದೇ ಎನರ್ಜಿ ! .
ಡೇವಿ ಫ್ಯಾರಡೆ ಮೇಲೆ ಸುಳ್ಳು ಆರೋಪ ಹೊರಿಸಿದ . ಫ್ಯಾರಡೆ ಯಾರೋ ಬ್ರಿಟಿಷ್ ವಿಜ್ಞಾನಿಯ ಥಿಯರಿ ಕದ್ದಿದ್ದಾನೆ ಎಂದು ಸುದ್ದಿ ಹಬ್ಬಿಸಿದ . ಪಬ್ಲಿಶ್ ಮಾಡಿಸಿದ ಪೇಪರ್ ವಾಪಾಸು ತೆಗೆದುಕೊಳ್ಳುವಂತೆ ಆಜ್ಞಾಪಿಸಿದ . ಆದರೆ ಫ್ಯಾರಡೆ ಒಪ್ಪಲಿಲ್ಲ . ಡೇವಿ ತಾನೇ ಕಲಿತ ನೈಟ್ರಸ್ ಆಕ್ಸೈಡ್ ವಿದ್ಯೆಯ ದೆಸೆಯಿಂದ ಐದು ವರ್ಷದ ನಂತರ ಸತ್ತು ಹೋದ . ಫ್ಯಾರಡೆ ರಾಯಲ್ ಸೊಸೈಟಿಗೆ ಆಯ್ಕೆಯಾದ . ಅದೇ ಐನ್ಸ್ಟೀನ್ ಹೇಳುವ ಎನರ್ಜಿ , ಫ್ಯಾಕ್ಟರ್ E .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ