ಒಂಬತ್ತು ವರೆಗೆ ಕಾಲೇಜ್ ಇದ್ದರೂ ಅಂದು ಏಕೋ ಅಜಿತ್ ಎಂಟುವರೆಗೆ ಬಂದಿದ್ದ . ಬಂದವನೇ ಸೀದಾ ಸ್ಟಾಫ್ರೂಮ್ ಒಳಹೊಕ್ಕು ಅವನ ಜಾಗದಲ್ಲಿದ್ದ ಧೂಳು ಕೊಡವಿದ . ಹಾಗೇ ಒಮ್ಮೆ ಟೈಮ್ ಟೇಬಲ್ ತೆಗೆದು ನೋಡಿದ . "ಅರೆ ಇವತ್ತು ನನಗೆ ಬರೀ ಎರಡೇ ಪಿರಿಯಡ್ ಅಷ್ಟೇ ". ಬಹುಶಃ ಸಂತೋಷಗೊಂಡ . ಮೊದಲ ಪಿರಿಯಡ್ ಸಿಕ್ಸ್ತ್ ಎ ಕ್ಲಾಸ್ ಗೆ ಇತ್ತು . ಮೊದಲ ತಿಂಗಳ ಸಂಬಳ ಪಡೆಯುವ ಖುಷಿಯಲ್ಲಿ ಅವನಿಗೆ ಪಾಠವೇ ಮರೆತು ಹೋದಂತಿತ್ತು . ಕ್ಲಾಸಿನಲ್ಲಿ ಏನೇನೋ ಹೇಳಿ ಹತ್ತು ನಿಮಿಷ ಬೇಗನೆ ವಾಪಾಸ್ ಬಂದಿದ್ದ .
ಕ್ಯಾಂಟೀನ್ ನಲ್ಲಿ ಕಾಫೀ ಹೀರುತ್ತಾ "ಇವತ್ತು ಯಾವುದಾದರೂ ಬುಕ್ಕು ತಗೊಳ್ಳಲೇಬೇಕು ,ಅಮ್ಮನಿಗೆ ಸೀರೆ ಇಷ್ಟ ಆಗಬಹುದೇನೋ ". ಹೀಗೆ ಸಂಬಳ ಖಾಲಿ ಮಾಡುವ ಎಲ್ಲ ಸಾಮಾನ್ಯ ಯೋಚನೆಗಳನ್ನು ಮಾಡುತ್ತಿದ್ದ .
ನೆಕ್ಸ್ಟ್ ಕೂಡ ಅವನು ಮಾಡಿದ ಪಿರಿಯಡ್ ಅಷ್ಟ -ಕಷ್ಟೇ . ಅಂತೂ ಇಂತೂ ಮಧ್ಯಾನ್ಹದ ಹೊತ್ತಿಗೆ ಸಂಬಳ ಕೈ ಸೇರಿತ್ತು . ಕೈ ತುಂಬದಿದ್ದರು ಮನಸ್ಸು ತುಂಬಿತ್ತು .
"ಅಣ್ಣಾ " ಇದ್ದಕ್ಕಿದ್ದಂತೆ ಬಂದ ಸದ್ದಿನಿಂದ ಅಜಿತ್ ಬೆಚ್ಚಿ ಬಿದ್ದ . ತಿರುಗಿ ನೋಡಿದ . "ನನ್ನ ಹೆಸರು ಲಕ್ಷ್ಮಿ ,ಇವಳು ನನ್ನ ಮಗಳು ಸರೂ ,ಇವಳಿಗೆ ಹಾರ್ಟ್ ನಲ್ಲಿ ಹೋಲ್ ಇದೆ . ಅಣ್ಣ ಆಪರೇಷನ್ ಗೆ ಸ್ವಲ್ಪ ದುಡ್ಡು ಕೊಟ್ರೆ ಸಹಾಯ ಆಗ್ತಿತ್ತು "ಎಂದು ಏನೇನೋ ಫೈಲ್ ಹರವಿದಳು . ಇದೆಲ್ಲದರಲ್ಲಿ ಆಸಕ್ತಿಯೇ ಇಲ್ಲದ ಆತ "ಏ ಹೋಗಮ್ಮ ಪ್ರಿನ್ಸಿಪಾಲ್ ಹತ್ರ ಪರ್ಮಿಷನ್ ತೊಗೊ ಬಾ "ಅಂತ ಕೂಗಿದ .
"ಅಣ್ಣಾ ದಯವಿಟ್ಟು ಹಾಗನ್ನಬೇಡಿ ". ಬಹುಶಃ ಆ ಮಾತು ಅವನಿಗೆ ತಟ್ಟಿತ್ತು . ಕೈಯಲ್ಲಿದ್ದ ಅಷ್ಟೂ ಸಂಬಳವನ್ನು ಅವಳ ಕೈಯಲ್ಲಿಟ್ಟು ಸೀದಾ ಮನೆ ಹಾದಿ ಹಿಡಿದ .
ಮನೆಯಲ್ಲಿ ತುಪ್ಪದ ವಾಸನೆ ಮೂಗಿಗೆ ಬಡಿಯುತ್ತಿತ್ತು . ಮನೆಯಲ್ಲಿ ಸಿಹಿಯ ವಾತಾವರಣ ." ಅಮ್ಮ ಬಂದು ಸಂಬಳ ಎಲ್ಲೋ ಹರಕೆ ಒಪ್ಪಿಸಬೇಕು" ಎಂದರು. ಸುಮ್ಮನೆ ಟಿವಿ ಹಾಕಿದ ಅದೇ ನ್ಯೂಸ್ ಚಾನೆಲ್ . ಸುದ್ದಿ ಮಾತ್ರ ವಿಚಿತ್ರವಾಗಿತ್ತು . ಈತ ದುಡ್ಡು ಕೊಟ್ಟ ಹೆಂಗಸನ್ನು ಪೊಲೀಸರು ಹಿಡಿದಿದ್ದರು . ಸುಳ್ಳು ಕಾರಣ ಹೇಳಿ ಜನರಿಂದ ದುಡ್ಡು ಪಡೆದುಕೊಳ್ಳುತ್ತಿದ್ದಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ