ನಿದ್ದೆ ಮಾಡುವವರಿಗೆ ತೊಂದರೆ ಕೊಟ್ಟರೆ ನೀನು ಮುಂದಿನ ಜನ್ಮದಲ್ಲಿ ತಿಗಣೆ ಆಗ್ತೀಯಾ ಅನ್ನೋ ಅರ್ಥದಲ್ಲಿ ನನ್ನ ಅಮ್ಮ ನನಗೆ ಬೈಯುತ್ತಿದ್ದರು. ನಿಜವಾಗಿಯೂ ಅದು ಅರ್ಥವಾಗಿದ್ದು ರಾತ್ರಿ ಪ್ರಯಾಣ ಮಾಡುವಾಗ, ಹಾಸ್ಟೆಲ್ ಸೇರಿದಾಗ. ನನ್ನ ಪ್ರೇಯಸಿಯೂ ನನ್ನ ಅಷ್ಟು ನಿದ್ದೆಗೆಡುವಂತೆ ಮಾಡಿರಲಿಲ್ಲ. ಮಧ್ಯರಾತ್ರಿ ನಿದ್ದೆ ಶತಾಬ್ದಿ ಎಕ್ಸ್‌ಪ್ರೆಸ್ ಕಿಂತ ಜೋರಾಗಿ ಬರುವ ಸಮಯದಲ್ಲಿ ಈ ತಿಗಣೆಗಳು ಮೊಹಮ್ಮದ್ ಘಜ್ನಿಯಂತೆ ದಂಡೆತ್ತಿ ಬರುತ್ತವೆ. ಮಾನವೀಯತೆಯಲ್ಲಿ ಮಲೆನಾಡಿನ ಉಂಬಳಗಳೇ ತಿಗಣೆಗಿಂತ ಮೇಲು. ಕೊನೇ ಪಕ್ಷ ಅವುಗಳು ಕಚ್ಚಿದ್ದು ಗೊತ್ತೇ ಆಗುವುದಿಲ್ಲ .ಪುರಾಣದಲ್ಲಿ ಬರುವ ರಕ್ತ ಬೀಜಾಸುರನಂತೆ ಈ ತಿಗಣೆಗಳು, ಒಂದು ಸಾಯಿಸಿದರೆ ಇನ್ನೊಂದು, ಮತ್ತೊಂದು ಹುಟ್ಟಿಕೊಳ್ಳುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಯಾವ ಕೆಮಿಕಲ್ ಗಳು ಇದರ ಮೇಲೆ ಪರಿಣಾಮ ಬೀರುವುದಿಲ್ಲ. ಮಾನವ ಭೂಮಿಯ ಮೇಲೆ ಕಾಲಿಡುವುದಕ್ಕೂ ಕೋಟಿ ಕೋಟಿ ವರ್ಷಗಳ ಮೊದಲೇ ಇವು ಜನಿಸಿವೆ .ಹಾಗಾದರೆ ಇವು ಮೊದಲಿಗೆ ಏನು ಕುಡಿದು ಅಥವಾ ತಿಂದು ಬದುಕುತ್ತಿತ್ತು? ಮಾನವನ ರಕ್ತ ಕುಡಿಯಲಿಕ್ಕೆ ಮಾನವ ಹುಟ್ಟಿರಲೇ ಇಲ್ಲವಲ್ಲ ? . ನಾನು Darwin's theory ಪಾಠ ಮಾಡುವಾಗ ಕ್ಲಾಸ್ ಬಂಕ್ ಮಾಡಿದ್ದೆ ,ತಪ್ಪು ಮಾಡಿ ಬಿಟ್ಟೆನಾ?
ಆದರೂ ಕೆಲವೊಂದು ಪರಿಹಾರ ಕಂಡುಕೊಂಡಿದ್ದೇನೆ. ತಿಗಣೆ ಸಂಪೂರ್ಣವಾಗಿ ಹೋಗಬೇಕು ಎಂದಾದರೆ :
1.ಪೂರ್ತಿ ಮನೆಗೆ ಬೆಂಕಿ ಹಾಕಬೇಕು
2.ಇಡೀ ಮನೆಯನ್ನು ನೀರಿನಲ್ಲಿ ಮುಳುಗಿಸಿಡಬೇಕು.
3.ನಾವೇ ವಿಷ ಕುಡಿದು ಮಲಗಬೇಕು, ನಮ್ಮ ರಕ್ತ ಕುಡಿದ ಅವು ಸಾಯುತ್ತವೆ.
ಒಟ್ಟಿನಲ್ಲಿ ಕೆರೆದು ಕೆರೆದು ಮುಖ-ಮೂತಿ ಕೆಂಪು ಮಾಡಿಕೊಂಡಿದ್ದೆ ಬಂತು, ತಿಗಣೆ ಮಾತ್ರ ಹೋಗಲಿಲ್ಲ
ಆದರೂ ಕೆಲವೊಂದು ಪರಿಹಾರ ಕಂಡುಕೊಂಡಿದ್ದೇನೆ. ತಿಗಣೆ ಸಂಪೂರ್ಣವಾಗಿ ಹೋಗಬೇಕು ಎಂದಾದರೆ :
1.ಪೂರ್ತಿ ಮನೆಗೆ ಬೆಂಕಿ ಹಾಕಬೇಕು
2.ಇಡೀ ಮನೆಯನ್ನು ನೀರಿನಲ್ಲಿ ಮುಳುಗಿಸಿಡಬೇಕು.
3.ನಾವೇ ವಿಷ ಕುಡಿದು ಮಲಗಬೇಕು, ನಮ್ಮ ರಕ್ತ ಕುಡಿದ ಅವು ಸಾಯುತ್ತವೆ.
ಒಟ್ಟಿನಲ್ಲಿ ಕೆರೆದು ಕೆರೆದು ಮುಖ-ಮೂತಿ ಕೆಂಪು ಮಾಡಿಕೊಂಡಿದ್ದೆ ಬಂತು, ತಿಗಣೆ ಮಾತ್ರ ಹೋಗಲಿಲ್ಲ
Oh My Goddd, You are hilarious!!!!
ಪ್ರತ್ಯುತ್ತರಅಳಿಸಿ