ಬಸ್ಸಿನಿಂದ ಇಳಿದವನೇ ವಿಶು ಸೀದಾ ಅವನ ಕುವೆಂಪು ನಗರದ ರೂಮಿಗೆ ಹೋದ . ಗಡಿಯಾರ ಐದು ಗಂಟೆ ತೋರಿಸುತಿತ್ತು . ಆಕಾಶದಲ್ಲಿ ಅದಾಗಲೇ ಕೆಂಪು ಸೂರ್ಯ ಉದಯಿಸುತ್ತಿದ್ದ .
ವಕ್ರ ತುಂಡ ಮಹಾ ಕಾಯ , ಕೋಟಿ ಸೂರ್ಯ ಸಮ ಪ್ರಭ ........ ವಿಶು ಗಟ್ಟಿಯಾಗಿ ಶ್ಲೋಕ ಹೇಳಿ ಕೊಳ್ಳುತ್ತಿದ್ದರೆ ಅದು ಮಂಗಳೂರಿನ ಮೆಡಿಕಲ್ ಕಾಲೇಜ್ ಲೇಡೀಸ್ ಹಾಸ್ಟೆಲ್ ನಲ್ಲಿ ಗುನುಗುತಿತ್ತು . ಅನು ಕೂಡ ಶ್ಲೋಕ ಹೇಳಿಕೊಳ್ಳುತ್ತಿದ್ದಳಾ ?
ಅವನ ಕಾಲೇಜು ಶುರುವಾಗಿ ಅದಾಗಲೇ ತಿಂಗಳು ಉರುಳಿತ್ತು . ಅಂದು ಅವನ ಸೆಮಿನಾರ್ ಬೇರೆ ಇತ್ತು . ಶ್ರದ್ದೆ ಇಂದ ಓದ ತೊಡಗಿದ , ಅವನ ಶ್ರದ್ಧೆಯೇ ಅಂತಾದು , ಅವನಿಗೆ ಪರ್ವತದಂತಹ ತಾಳ್ಮೆ .
ಅದೇಕೋ ಅವನಿಗೆ ಫಸ್ಟ್ ಬೆಂಚ್ ಎಂದರೆ ಪ್ರಾಣ , ಅಂದು ಸಹ ಅಲ್ಲೇ ಕೂತಿದ್ದ .
" ಹೇ , ಏನೋ ಸಕತ್ ಸೆಮಿನಾರ್ ಕೊಟ್ಟು ಏನೂ ಗೊತ್ತಿಲದ ಹಾಗೆ ಕೂತಿದಿಯ " ಹಿಂದಿನಿಂದ ಬಂದ ರಿಯಾಳ ಧ್ವನಿಗೆ ವಿಶು
ತಿರುಗಿ ನೋಡಿದ .
ರಿಯಾ ಕೊಡಗಿನ ಹುಡುಗಿ , ತುಂಬಾ ಬೋಲ್ಡ್ ಹುಡುಗಿ ಎಂದು ಕಾಲೇಜಿನಲ್ಲಿ ಪ್ರಖ್ಯಾತೆ . ಯಾವುದಾದರು ಹುಡುಗ ಚುಡಾಯಿಸಿದರೆ ,ನಿಮಗೆ ರಿಯಾ ಅವನ ಕೊರಳ ಪಟ್ಟಿ ಹಿಡಿದು ಎಳೆಯುವ ದೃಶ್ಯ ನೋಡಲು ಸಿಗುತ್ತದೆ . ಆಕೆಯ ಬಾಯಿಂದ ಸಿಗರೇಟಿನ ವಾಸನೆ ಬರುತಿತ್ತು . ತಾನೇನು ಹುಡುಗರಿಗೆ ಕಮ್ಮಿ ಎಂದು ಕಲಿತ ಚಟವದು . ಅಪರೂಪಕ್ಕೆ ಸೇದಲು ಶುರುಮಾಡಿದವಳು , ಕೊನೆಗೆ ವಾರಕ್ಕೊಂದು ,ದಿನಕ್ಕೊಂದು , ಗಂಟೆಗೊಂದು ಆಗಿತ್ತು . Airthmetic progression ನಲ್ಲಿ ಶುರುವಾದ ಸಿಗರೇಟು Geometric progression ಆಗಿ ಬದಲಾಗಿತ್ತು . ಮೊದಲ ವರ್ಷದ ಇಂಜಿನಿಯರಿಂಗ್ ನಲ್ಲಿ ಎಲ್ಲರಿಗೂ workshop ಕಡ್ಡಾಯ . ಆಕೆಗೆ ಸಹಾಯ ಮಾಡಲು ಎಲ್ಲಾ ಹುಡುಗರು ಓಡಿ ಬರುತ್ತಿದ್ದರು , ಆದರೆ ಒಂದು ದಿನವೂ ಆಕೆ ಯಾರ ಸಹಾಯವನ್ನೂ ತೆಗೆದುಕೊಂಡವಳಲ್ಲ .
ಅನು ಬಿಳಿಯ ಸಲ್ವಾರ್ ತೊಟ್ಟು ನಡೆಯುತ್ತಿದರೆ ಇಡೀ ಕಾಲೇಜೇ ಅವಳೆಡೆಗೆ ನೋಡುತ್ತಿತ್ತು . ಆದರೆ ಆಕೆಯದು ತುಂಬಾ reserved ಎನಿಸುವ ವ್ಯಕ್ತಿತ್ವ . ಬಹಳ ಎನಿಸುವಷ್ಟು ಅಂತರ್ಮುಖಿ . ಅದು ಹುಟ್ಟಿನಿಂದ ಬಂದಿದೆಯೋ ಅಥವಾ ಯಾರೋ ಅವಳಲ್ಲಿ induce ಮಾಡಿದರೋ ? ನನಗೂ ಗೊತ್ತಿಲ್ಲ . ಅಥವಾ ಅದನ್ನೇ ನಾವು ಸಂಸ್ಕಾರವಂತ ಹುಡುಗಿ ಎನ್ನುತ್ತೇವೋ ಏನೋ ? . ಮೊದಲ ಅನಾಟಮಿ ಕ್ಲಾಸ್ ನಲ್ಲಿ ಎಲ್ಲರೂ ವಾಂತಿ ಮಾಡಿ ಕೊಂಡವರೇ , ಆದರೆ ಅನು ಮಾತ್ರ ನಾರ್ಮಲ್ ಎನ್ನುವಂತೆ behave ಮಾಡಿದ್ದಳು . ಭಾವನೆಗಳನ್ನು ಅದುಮಿಟ್ಟು ಕೊಳ್ಳುವುದು ಆಕೆಗೆ ಅಭ್ಯಾಸವಾಗಿ ಹೋಗಿರಬಹುದು .
ಸಂಜೆ ಬಂದವಳೇ ವಿಶುಗೆ "ನಾನಿನ್ನು ಬದ್ಕೇ ಇದೀನಿ ಕಣೋ " ಎಂದು ಮೆಸೇಜ್ ಕಳಿಸಿ ಸುಮ್ಮನಾಗಿ ಬಿಟ್ಟಳು . ವಿಶು ತುಂಬಾ disturbed ಆಗಿ ಬಿಟ್ಟಿದ್ದ . ಅನುಗೆ diversion ಆಗಬಾರದು ಎಂಬ ಕಾರಣಕ್ಕಷ್ಟೇ ವಿಶು ಅವಳಿಗೆ ಮೆಸೇಜ್ ಮಾಡಬಾರದು ಎಂದು ನಿರ್ಧರಿಸಿದ್ದ , ಬಹುಶಃ ಅದನ್ನೇ ಆಕೆ ಬಲಹೀನತೆ ಎಂದು ಕೊಂಡಿರಬಹುದು . ವಾಸ್ತವದಲ್ಲಿ ಅವನು ಅನುವನ್ನು ಬಿಟ್ಟಿದ್ದರೆ ತಾನೇ ಮೆಸೇಜ್ ಮಾಡುವ ಅಗತ್ಯತೆ ಇದ್ದುದು ! . ಆದರೂ "ಇವತ್ತು ಏಕೋ ಊಟಾನೇ ಸೇರಲಿಲ್ಲ ಕಣೇ , ನಿಂಗೆ ಚಿತ್ರಾನ್ನ ಇಷ್ಟ ಅಲ್ವ , ನಿನ್ನ ಬಿಟ್ಟು ತಿನ್ನೋಕೆ ಮನಸೆ ಬರ್ಲಿಲ್ಲ . " ಎಂದು ಟೈಪಿಸಿ ಕಳುಹಿಸಿದ. ಅನುಳ ಕೆನ್ನೆಯ ಮೇಲೆ ನೀರಿಳಿಯುತ್ತಿತ್ತು ............
(ಮುಂದುವರೆಯುವುದು.......... )

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ