ನಿಧಾನವಾಗಿ ವಿಶುವಿಗೆ ಮನನವಾಗತೊಡಗಿತ್ತು , ವಾಸ್ತವಕ್ಕೆ ಹೊಂದಿಕೊಳ್ಳಲು ಹೆಣಗಾಡುತ್ತಿದ್ದ .
ಆಕೆ ಸಿಗುವುದಿಲ್ಲ
ನನ್ನ ನಿಸ್ವಾರ್ಥ ಪ್ರೀತಿಗೆ ,
ನನ್ನ ಕಾಳಜಿಗೆ.
ಇನ್ನವಳು ಸಿಗುವುದು
ನನ್ನ ಕಲ್ಪನೆಯಲ್ಲಿ ಮಾತ್ರ
ಹುಸಿ ಮುನಿಸು, ಹಸಿ ಕನಸು
ನೆನಪುಗಳಷ್ಟೇ......
ಕಾಲಗರ್ಭದಲ್ಲಿ ಹುದುಗಿಸಡಬೇಕು
ನಿನ್ನ ನೆನಪುಗಳ .
ಆಗಾಗ ಆಸ್ಫೋಟಿಸುವ ಜ್ವಾಲಾಮುಖಿಯಂತೆ ಮತ್ತೆ ಬರದಿರು

ನನ್ನ ಕವಿತೆಯ ಅಕ್ಷರದ ಗೆರೆಗಳಲ್ಲಿ
ಸದಾ ನೀ ನನ್ನ ಗೆಳತಿ
ಅಲ್ಲಿ ಮಾತ್ರ ನೀ ಜೀವಂತ
ನನ್ನೆಲ್ಲಾ ಕನಸುಗಳ ಒಡತಿ
ಅದರಾಚೆಗೆ ಕರಿ ಕಪ್ಪ ಮೃತ್ಯು
ಮತ್ಯಾರದೋ ಕನಸಿನ ರಾಣಿ
ನನ್ನ ಹೆಜ್ಜೆಗಳಿಲ್ಲ ನಿನ್ನ ಹೃದಯದಲ್ಲಿ
ಇನ್ಯಾರದೋ ಕಪಟ ಪ್ರೀತಿಯ
ಹುಚ್ಚು ಪ್ರವಾಹಕ್ಕೆ ಅಳಿಸಿ ಹೋಗಿದೆ.
ಸದಾ ನೀ ನನ್ನ ಗೆಳತಿ
ಅಲ್ಲಿ ಮಾತ್ರ ನೀ ಜೀವಂತ
ನನ್ನೆಲ್ಲಾ ಕನಸುಗಳ ಒಡತಿ
ಅದರಾಚೆಗೆ ಕರಿ ಕಪ್ಪ ಮೃತ್ಯು
ಮತ್ಯಾರದೋ ಕನಸಿನ ರಾಣಿ
ನನ್ನ ಹೆಜ್ಜೆಗಳಿಲ್ಲ ನಿನ್ನ ಹೃದಯದಲ್ಲಿ
ಇನ್ಯಾರದೋ ಕಪಟ ಪ್ರೀತಿಯ
ಹುಚ್ಚು ಪ್ರವಾಹಕ್ಕೆ ಅಳಿಸಿ ಹೋಗಿದೆ.
ನಿನ್ನ ಬಂಧನ ಬಿಡಿಸಿಕೊಂಡು
ಎಷ್ಟೋ ದೂರ ಬಂದಾಗಿದೆ
ಮತ್ತೆ ನಿನ್ನ ಹೃದಯದೊಳಗೆ
ಹೆಜ್ಜೆ ಇಡಲಾರದಷ್ಟು ದೂರ
ದೂರ ........ಇನ್ನಷ್ಟು ದೂರ ಹೋಗುವೆ ಗೆಳತಿ .......
ವಿಶು ವ್ಯಗ್ರನಾಗತೊಡಗಿದ , ಅವನ ಹೃದಯದಲ್ಲಿ ದ್ವೇಷ ತಲೆಯೆತ್ತುತ್ತಿತ್ತು . ಹಿಂದು-ಮುಂದು ನೋಡದೆ ಮಂಗಳೂರಿಗೆ ಹೊರಟು ನಿಂತ . ಬಾಚಿದ ತಲೆ , ಮಟ್ಟಸ ಶೇವ್ , ಇಂಪೋರ್ಟೆಡ್ ಬಟ್ಟೆಗಳು , ಮೂರ್ನಾಲ್ಕು ಸಾವಿರದ ಸನ್ ಗ್ಲಾಸ್ . ಅನು ಅವನನ್ನು ನೋಡಿ ಭಯಗೊಂಡಳು . ಪ್ರೀತಿಗಿಂತ ದ್ವೇಷ ಎಂಬ ಎರಡೂ ಮುಕ್ಕಾಲು ಪದಕ್ಕೇ ಜಾಸ್ತಿ ಶಕ್ತಿ ಇದೆಯೋ ಏನೋ ? . ಇಷ್ಟು ವರ್ಷಗಳಲ್ಲಿ ಆತ ತನಗಾಗಿ ಏನೆಂದರೆ ಏನನ್ನೂ ಮಾಡಿಕೊಂಡಿರಲಿಲ್ಲ ! . ಒಂದು ವ್ಯಕ್ತಿ ಇಷ್ಟೊಂದು ನಿಸ್ವಾರ್ಥಿ ಆಗಲು ಸಾಧ್ಯವಿದೆಯೇ ? . ಆತ ಒಂದು ಗಿಡ ನೆಡುವಾಗಲೂ , ಮುಂದೆ ಅನು ಇದರ ಹಣ್ಣು ತಿನ್ನುತ್ತಾಳೆ ಎಂದೇ ಭಾವಿಸಿಕೊಂಡು ನೆಡುತ್ತಿದ್ದ .
ಆದರೆ ಅನು ಮಾಡಿದ್ದು ಸರಿಯೇ ? . ಇಲ್ಲಿ ವಿಶು , ಅನುಗೆ ಚಿತ್ರಾನ್ನ ಇಷ್ಟ ಎಂದು ತಿನ್ನದೇ ಉಪವಾಸವಿದ್ದರೆ . ಅಲ್ಲಿ ಅವಳು ಆದಿಯ ಜೊತೆ ತಣ್ಣಗೆ ಕೂತು ರೋಟಿ-ದಾಲ್ ತಿನ್ನುತ್ತಿದಳು . ಅದು ವಿಶುವಿಗೆ ಮಾಡಿದ ಅನ್ಯಾಯವಲ್ಲವೇ ? .
ಅಥವಾ ತಪ್ಪು ವಿಶುವಿನದ ? . ಪ್ರೀತಿಯನ್ನು ಕೂಗಿ ಹೇಳಲು ಸೋತವನು . ಅವನ ಪ್ರಕಾರ ಪ್ರೀತಿ ಹೃದಯಗಳ ಪಿಸುಮಾತು , ಕೂಗಿ ಕರೆಯುವ ಹೆಸರಲ್ಲ . ವಿಶು ಮೂಗ , ಅನು ಕಿವುಡಿ . ಯಾರು ತಾನೇ ಸಹಾಯ ಮಾಡಿಯಾರು ? .
ಅಥವಾ ಇದೆಲ್ಲ ಕೇವಲ ಕಾಲದ , ಸಂಧರ್ಭದ ತಪ್ಪೇ ? .ಬದುಕಿನ ಆಯ್ಕೆಗಳಲ್ಲಿ , ಭಾವನೆಗಳ ಸುಳಿಯಲ್ಲಿ , ಮನಸ್ಸು ಅಂಕೆಗೆ ಸಿಗದೇ ಓಡುವ ಹುಚ್ಗುದುರೆ . ತಪ್ಪು ಯಾರದೇ ಆಗಿರಲಿ ಮಾನಸಿಕವಾಗಿ ಎಲ್ಲರೂ ಸಾಯಲೇ ಬೇಕು , ಅದೇ ವಿಧಿ . ಒಂದು ನಿಸ್ವಾರ್ಥ ಪ್ರೀತಿ ಈ ರೀತಿ ದುರಂತ ಅಂತ್ಯ ಕಾಣಬಹುತ್ತದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ .
ವಿಶುವಿಗೆ ತಾಳ್ಮೆ ಹಾರಿ ಹೋಗುತ್ತಿತ್ತು . ಆದಿಯನ್ನು ಕೊಂದಾದರೂ ಸರಿಯೇ , ಅನುವನ್ನು ಪಡೆದುಕೊಳ್ಳಬೇಕು....... ತೀರ್ಮಾನ ಮಾಡಿಕೊಂಡ .
"ಅನು ನಾನು ಆದಿಯನ್ನು ಮೀಟ್ ಮಾಡ್ಬೇಕು "
"ಬೇಡ ವಿಶು , ನಾನು ಇದರಿಂದ ಹೊರಗೆ ಬರ್ತೀನಿ ಆದಷ್ಟು ಬೇಗ , ನೀನು ಸಮಾಧಾನ ಮಾಡ್ಕೋ ". ಸಂತೈಸುವಳು . ಇಲ್ಲ ವಿಶು ಕರಗುವುದಿಲ್ಲ ,ಕರಗುವುವವನಲ್ಲ .
ಅವಳ ಉತ್ತರಕ್ಕೂ ಕಾಯದೆ ವಿಶು ಅಲ್ಲಿಂದ ಹೊರಬಿದ್ದ ..........
"Adi from Kashmir , can you tell me where his room is ? ." ಸ್ಪಷ್ಟವಾಗಿ ವಿಶು ಕೇಳಿದ್ದ , ಬಾಯ್ಸ್ ಹಾಸ್ಟೆಲ್ ನ ವಾರ್ಡನ್ ಬಳಿ .
"Such a person is not here Sir , thank you " . ಬಂದಿತ್ತು ಉತ್ತರ .
ಹಾಗಾದರೆ ಆದಿ ರೂಮು ಖಾಲಿ ಮಾಡಿದನೇ ? . ಕಾಲೇಜು ಬಿಟ್ಟು ಎಲ್ಲಿ ಹೋದಾನು ? . ಕೋರ್ಸು ಅರ್ಧಕ್ಕೆ ಬಿಟ್ಟು ಹೋದನೇ ? .
"Can you tell me his address please ? . " ಮತ್ತೆ ಮತ್ತೆ ವಿಚಾರಿಸಿದ
"Such person is not admitted at all Sir " .
ಇಡೀ ಕಾಲೇಜಿನಲ್ಲಿ ಎಲ್ಲಿ ಹುಡುಕಿದರೂ ಆದಿಯ ಪರಿಚಯಸ್ತರು ಯಾರೂ ಇಲ್ಲ , ಕೊನೆ ಪಕ್ಷ ಆತನನ್ನು ಕಂಡವರೂ ಇಲ್ಲ.................
**********************************************************************************************************************
ಸುತ್ತ ಬಿಳಿ ಬಣ್ಣ ಬಳಿದಿದ್ದಾರೆ , ಅದೂ ಸಹ ಮನಸ್ಸಿನ ಮೇಲೆ ಎಂತದೋ ಪ್ರಭಾವ ಬೀರುತ್ತದಂತೆ . ಎಲ್ಲವೂ ಬಿಳಿ ಬಿಳಿ , ಅದನ್ನು ನೋಡಿದರೇ ಯಾರಿಗಾದರು ಹುಚ್ಚು ಹಿಡಿದು ಬಿಡಬಹುದು . ಗಂಭೀರ ಧ್ವನಿಯಲ್ಲಿ ವೈದ್ಯರು ಮಾತನಾಡುತ್ತಿದ್ದರು .
"See she is schizophrenic , ಇಲ್ಲದನ್ನು ಅವಳ ಮನಸ್ಸು ಇದೆ ಎಂದು ಭಾವಿಸುತ್ತಿದೆ . ಆದಿ ಇರುವದು ಕೇವಲ ಅವಳ ಮನಸ್ಸಿನಲ್ಲಿ ಅಷ್ಟೇ . ವಾಸಿ ಮಾಡುವ ಸಂಪೂರ್ಣ ಪ್ರಯತ್ನವನ್ನೂ ನಾವು ಮಾಡುತ್ತೇವೆ . ಇದಕ್ಕೆ specific time ಎಂಬುದಿಲ್ಲ , ಕೆಲವೊಮ್ಮೆ ವಾಸಿಯಾಗದೇ ಇರಬಹುದು . "
" But why Anu ?."
" ಇದಕ್ಕೆ ಉತ್ತರವಿಲ್ಲ , ಮನೋವ್ಯಾಧಿಗಳು ಯಾರಿಗೆ ಬೇಕಾದರೂ ಆಗಬಹುದು " .
************************************************************************************************************************
"ಇಲ್ಲ ವಿಶು ನಾನು ಅವ್ನ ನೋಡ್ದೆ , ನನ್ನ ಜೊತೆಗೇ ಇದ್ದ ಇಷ್ಟು ದಿನ ". ವಾದಿಸುವಳು ಅನು
" ಇಲ್ಲಪ , ಇಲ್ಲ ಪುಟ್ಟ ". ಅವಳ ತಲೆ ನೇವರಿಸುವನು ವಿಶು .
ಚಿಕಿತ್ಸೆ ಶುರುವಾಗಿದೆ , ಎಷ್ಟು ದಿನ , ಎಷ್ಟು ವರ್ಷ ಹಿಡಿಯುತ್ತದೋ ಗೊತ್ತಿಲ್ಲ . ಎಷ್ಟಾದರೂ ಸರಿಯೇ ಅವರ ಪ್ರೀತಿಯ ಮುಂದೆ ಎಲ್ಲವೂ ಸೋಲಲೇ ಬೇಕು .
ಈಗಲೂ ಅನುಳಿಗೆ ಆದಿ ಕಾಣಿಸಿಕೊಳ್ಳುತ್ತಾನೆ , ಅವನಿಗೆ ವಯಸ್ಸಾಗುವುದಿಲ್ಲ , ಆತ ಚಿರ ಯೌವನಿ .ಏಕೆಂದರೆ ಅವನು ಇರುವುದು ಕೇವಲ ಅನುವಿನ ಮನಸಲ್ಲಿ ಮಾತ್ರ . ಆದರೆ ಅನು ಅವನನ್ನು ಮಾತನಾಡಿಸುವುದಿಲ್ಲ , ಅವನೆಡೆಗೆ ನಗು ಬೀರುವುದಿಲ್ಲ
ವಿಶು ಹಾಗೂ ಅನು ಪ್ರೀತಿಯಲ್ಲಿ ಮತ್ತೆ ನಗು ಕಾಣಿಸಿಕೊಂಡಿದೆ .................................
(ಏನಿದು ಸ್ಚಿಜ್ನೋಫ್ರೆನಿಯಾ ? , ಈ ಕಥೆ ಹುಟ್ಟಿದ್ದು ಹೇಗೆ ? . ಈ ಕಥೆಯ ಹಿಂದೆ ಇರುವ ಉದ್ದೇಶವೇನು ?
ಇದನ್ನೆಲ್ಲಾ ಉಪಸಂಹಾರದಲ್ಲಿ ತಿಳಿಸುತ್ತೇನೆ . )

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ