ನೀವು ಕಾಡನ್ನು , ಜೀವ-ಜಂತುಗಳನ್ನು ಇಷ್ಟಪಡದೇ ಹೋದರೆ ಮಲೆನಾಡು ಎರಡೇ ದಿನಕ್ಕೆ ಬೇಸರ ಮೂಡಿಸುತ್ತದೆ . ಆದರೂ ಈ ಕಾಡು ಪ್ರಾಣಿಗಳಿಂದ ನಾವು ಅನುಭವಿಸುವ ಕಾಟ ಅಷ್ಟಿಷ್ಟಲ್ಲ . ಮಂಗನಿಂದ ಹಿಡಿದು ಕಾಡೆಮ್ಮೆಯವರೆಗೆ ದಿನಾ ಒಂದಲ್ಲ ಒಂದು ಕಾಟ ಇದ್ದೇ ಇರುತ್ತದೆ . ಅಡಿಕೆಯನ್ನು ಮಂಗಗಳಿಂದ ಕಾಪಾಡುವುದೇ ದೊಡ್ಡ ಸಾಹಸ .
ಅಡಿಕೆ ಹುಟ್ಟಿದ್ದು ಮೂಲಾ ನಕ್ಷತ್ರದಲ್ಲಂತೆ , ಅದನ್ನು ಬೆಳೆದವನಿಗೂ , ವ್ಯಾಪಾರ ಮಾಡುವವನಿಗೂ ಅದು ದಕ್ಕುವುದಿಲ್ಲವಂತೆ . ಅದೇನೇ ಇರಲಿ , ಈ ಮಂಗನನ್ನು ಓಡಿಸಲು ನಾನು ಎಲ್ಲವನ್ನೂ ಮಾಡಿ ಸೋತಿದ್ದೆ . ಕೊನೆಗೆ ಹಳೆ ಹೆಂಡತಿಯ ಪಾದವೇ ಗತಿ ಎಂದು ಒಂದು ತೋಟಾ ಕೋವಿಯನ್ನು ಕೊಂಡುತಂದೆ . ನಮ್ಮ ಇಡಿಯ ತಾಲೂಕಿಗೆ ತೋಟಾ ಕೋವಿ ರಿಪೇರಿ ಮಾಡುವವನು ಇಕ಼್ಬಾಲ್ ಸಾಬಿ ಒಬ್ಬನೇ . ಈ ಅಧಿಕ ಪ್ರಸಂಗಿ ನಾಗ ಯಾವಾಗಲೂ ಏನಾದರೊಂದು ಮಾಡಿ ಕೋವಿ ಹಾಳು ಮಾಡಿ ಇಡುತ್ತಿದ್ದ . ಪ್ರತಿ ಸಲ ಅದನ್ನು ಸರಿ ಮಾಡಿಸಿದಾಗಲೂ ಅದರ ರೂಪ ಬದಲಾಗುತ್ತಿತ್ತು . ಅದು ಯಾವ ಮಟ್ಟ ತಲುಪಿತ್ತೆಂದರೆ , ಬಾಯೊಳಗೇ ಇಟ್ಟು ಗುಂಡು ಹಾರಿಸಿದರೂ ಯಾವ ಗಾಯವನ್ನು ಮಾಡಲೂ ಅದು ಸೋಲುತಿತ್ತು . ಆ ಕೋವಿಯಿಂದ ಯಾವ ಪ್ರಾಣಿ ಸತ್ತಿದ್ದೂ ಸಹ ನಾನು ನೋಡಿರಲಿಲ್ಲ . ಸಾಯಿಸುವ ಉದ್ದೇಶವೂ ನನಗೆ ಇರಲಿಲ್ಲ .
ಅವು ನಮ್ಮ ಜಾಗಕ್ಕೆ ಬಂದಿಲ್ಲ , ನಾವೇ ಅವುಗಳ ಜಾಗ ಆಕ್ರಮಿಸಿಕೊಂಡಿದ್ದೇವೆ . ಕಾಡಿನಲ್ಲಿ ಹಣ್ಣು-ಹಂಪಲು ತಿಂದು ಹಾಯಾಗಿ ಇರುತ್ತಿದ್ದ ಮಂಗಗಳ ಊಟಕ್ಕೆ ಕುತ್ತು ತಂದವರೇ ನಾವು . ಮಶಿ ಮಂಗಗಳು ( ಅಥವಾ ಕರಿ ಮೂತಿಯ ಮಂಗ ) ಕೆಂಪು ಮೂತಿಯ ಮಂಗಗಳನ್ನು ಬೇಟೆ ಆಡಿ ತಿನ್ನುತ್ತಿದವು . ಆದರೆ ಈ ಮಶಿ ಮಂಗಗಳನ್ನು ಮನುಷ್ಯರು ಬೇಟೆ ಆಡತೊಡಗಿದರು . ಜೀವ ಜಾಲದ ಸಮತೋಲನ ತಪ್ಪತೊಡಗಿತು . ಮಶಿ ಮಂಗಗಳ ಸಂತತಿ ನಶಿಸಿ ಹೋಯಿತು . ಕೆಂಪು ಮೂತಿ ಮಂಗಗಳ ಉಪದ್ರ ಹೆಚ್ಚಾಯಿತು . ಮೂಲ ಸಮಸ್ಯೆ ಹುಟ್ಟಿದ್ದೇ ನಮ್ಮಿಂದ , ಬೇಟೆಯಾಡುವುದು ತಪ್ಪು ಎಂದು ಪ್ರತಿಪಾದಿಸುವವನು ನಾನು .
ಆದರೆ ಈ ನಾಗ ಬಿಡಬೇಕಲ್ಲ . ಎಕಾಲಜಿಯ ಧರ್ಮ ಸೂಕ್ಷ್ಮಗಳನ್ನು ಅವನಿಗೆ ಅರ್ಥ ಮಾಡಿಸುವುದು ನನ್ನಿಂದ ಸಾಧ್ಯವಿಲ್ಲ . ' ಕೊಂದ ಪಾಪ ತಿಂದರೆ ಹೋಗುತ್ತದೆ ' ಎನ್ನುವುದು ಅವನ ವಾದ . ಕೈಯಲ್ಲಿ ಕೋವಿ ಹಿಡಿದು ನಾನು , ನಾಗ ಹಾಗೂ ಮಂಜ ಕಾಡು ಅಲೆಯುವುದು ನಮ್ಮ ನೆಚ್ಚಿನ ಹವ್ಯಾಸ .
" ತೋಟಕ್ಕೆ ಮಂಗ ಬಂದಿದೆ ಕಣೋ ನಾಗ " ಎಂದು ನಾನು ಹೇಳಿ ಬಾಯಿ ಮುಚ್ಚುವುದರೊಳಗೆ ನಾಗ ಕೋವಿ ಹಿಡಿದು ಸಿದ್ಧನಾಗಿದ್ದ . ಮೂರೂ ಜನ ತೋಟ ಇಳಿದೆವು . ನಮ್ಮ ಜೊತೆಗೆ ನಾಗ ಸಾಕಿದ್ದ ಕಂತ್ರಿ ನಾಯಿಯೂ ಸಹ ಬಂದಿತ್ತು . ನಾಗ ಅದಕ್ಕೆ ಒಂದು ದಿನವೂ ಊಟ ಹಾಕಿದ್ದು ನೋಡಿರಲಿಲ್ಲ , ಅದರೂ ಸಹ ಅದು ಅವನ ಹಿಂದೆಯೇ ಬಾಲ ಅಲ್ಲಾಡಿಸುತ್ತಾ ಬರುತಿತ್ತು .
ನಾಗ ಮುಂದೆ ಕೋವಿ ಹಿಡಿದು ನಡೆಯುತ್ತಿದರೆ , ನಾನು ಅವನ ಹಿಂದೆ ಮತ್ತು ಮಂಜ ನನ್ನ ಹಿಂದೆ ಬರುತ್ತಿದ್ದ . ಕೋವಿಯ ಟ್ರಿಗರ್ ಗೆ ಬಳ್ಳಿಯೊಂದು ಸಿಕ್ಕಿತು ನಾಗ ಕೋವಿಯನ್ನು ಮುಂದೆ ಎಳೆದುಕೊಂಡ . ನಳಿಕೆ ನಮ್ಮ ಕಡೆಗೆ ಗುರಿಮಾಡುತಿತ್ತು . ಢಂ ಎಂಬ ಆಸ್ಪೋಟನೆಯೊಂದಿಗೆ ಗುಂಡು ಹಾರಿತು . ಮಂಜನ ಮುಖದ ಪಕ್ಕವೇ ಗುಂಡು 'ಸುಯ್ಯ್ ' ಎಂದು ಸದ್ದು ಮಾಡುತ್ತಾ ಹೋಯಿತು . ಎಂದೂ ಸರಿ ಕೆಲಸ ಮಾಡದ ಇಕ಼್ಬಾಲ್ ಸಾಬಿಯ ಕೋವಿ ಅಂದು ಕೆಲಸ ಮಾಡಿತ್ತು .
ಮಂಜ ನಂತರ ಎರಡು ದಿನ ಜ್ವರ ಬಂದು ಮಲಗಿದ್ದನಂತೆ .
( ಮುಂದುವರೆಯುವುದು ......................)