ಹೇಳಿ ಕಳಿಸಿ ಹದಿನೈದು ದಿನವಾದ ನಂತರ ನಾಗ ಬಂದಿದ್ದ . ನನ್ನನು ನೋಡಿದ ಕೂಡಲೇ ಕಿವಿಯವರೆಗೆ ಹಲ್ಲು ಕಿಸಿದ .
" ಅಯ್ಯೋ ನನ್ನ್ ಕಥೆ ಏನ್ ಕೇಳ್ತಿರ ಸೋಮಿ " ಎಂದು ತನ್ನ ಉದ್ದ ರಾಗ ತೆಗೆದ . ಅವನ ಕಥೆ ಕೇಳಿ ಕೇಳಿ ನನಗೆ ಸಾಕಾಗಿ ಹೋಗಿತ್ತು . ಪ್ರತಿ ಸಲವೂ ತಪ್ಪಿಸಿಕೊಳ್ಳಲು ಒಂದೊಂದು ಕಥೆ ಹೇಳುತ್ತಿದ್ದ .
ಕೆಲ ದಿನಗಳ ಹಿಂದೆ ನಾಗ ಬನದಲ್ಲಿ ಕಳೆ ಸವರುತ್ತಿದ್ದನಂತೆ , ಇವನ ಕತ್ತಿ ಒಂದು ನಾಗರ ಹಾವಿಗೆ ತಾಗಿ ಅದಕ್ಕೆ ಗಾಯವಾಯಿತಂತೆ . ಇವನು ತಕ್ಷಣ ಕೆಲಸ ಖೈದು ಮಾಡಿ ಮನೆಗೆ ಓಡಿ ಬಂದನಂತೆ . ಆ ಹಾವು ಅದಾಗಲೇ ಇವನ ಮನೆ ಮುಂದೆ ಇತ್ತಂತೆ . ಇವನಿಗೆ ಆ ಹಾವು ಎಲ್ಲೆಂದರಲ್ಲಿ ಬಂದು ಕಾಡಲು ಶುರು ಮಾಡಿತಂತೆ . ಯಾವುದೋ ಶಾಸ್ತ್ರಿ ಹಿಡಿದು ಶಾಂತಿ ಎಲ್ಲಾ ಮಾಡಿಸಿದನಂತೆ , ಆದರೆ ಅವನು ಮಾಡಿದ ಶಾಂತಿಯಲ್ಲಿ ಲೋಪವಿತ್ತಂತೆ . ಆ ಹಾವಿಗೆ ಇನ್ನೂ ಕೋಪ ಜಾಸ್ತಿಯಾಯಿತಂತೆ . ನಂತರ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಸರ್ಪ ಶಾಂತಿ ಮಾಡಿ ಬಂದನಂತೆ .
" ನನ್ ಜೀವ ಬಾಯಿಗೆ ಬಂದಿತ್ತು ಸೋಮಿ , ದುಡ್ಡಿನ ಮಖ ನೋಡಕ್ಕೆ ಆಯ್ತದ , ಅದ್ಕೆ ಎಷ್ಟ್ ಕರ್ಚ್ ಆದ್ರು ಸರಿ ಅಂತ ಸುಬ್ರಮಣ್ಯಕ್ಕೆ ಹೋದೆ ಸೋಮಿ " ಎಂದ . ನಾನೇನು ತಾನೇ ಬೈಯಲಿ ಅವನಿಗೆ , ಸುಮ್ಮನೆ ತಲೆಯಾಡಿಸುವುದೊಂದೇ ನನಗೆ ಉಳಿದ ಆಯ್ಕೆಯಾಗಿತ್ತು .
ಅದೇ ಹೊತ್ತಿಗೆ ಮಂಜ ನಮ್ಮ ಮನೆಗೆ ಬಂದ . ಮಂಜ ಹಾಗೂ ನಾಗ ಸೇರಿದರೆ ಮುಗಿದೇ ಹೋಯ್ತು . ಅವರ ಪುಂಡಾಟಕ್ಕೆ ಕೊನೆಯೇ ಇಲ್ಲ . ದಿನವಿಡೀ ಹೇಳಿದರೂ ಖಾಲಿಯಾಗದ ಪೋಲಿ ಜೋಕುಗಳ ಮಾಲೀಕರು ಇವರು .
" ಏನೋ ಅವತ್ತು ನನ್ ಕ್ಷೌರ ನಾನೇ ಮಾಡಿಕೊಳ್ಳೋ ಹಾಗೆ ಮಾಡಿದ್ಯಲ್ಲೋ " ಎಂದು ಗದರಿದೆ .
" ಅದು ಹಂಗೆ ಆಗೋಯ್ತು ಸೋಮಿ , ಆ ಫಾತಿಮಂಗು ನಂಗು ಸಂಬಂಧ ಕಟ್ಟಿ ಜನ ಮಾತಾಡ್ತಾ ಇದಾರೆ . ಅವ್ರು ಎಲ್ರಿಗೂ ಬುದ್ಧಿ ಕಲಿಸಿ ಬರೋಕೆ ಹೊತ್ತಗೋಯ್ತು ಸೋಮಿ . ಬೇಜಾರ್ ಮಾಡ್ಕ್ಯ ಬೇಡಿ , ಮುಂದಿನ ಸಲ ನೀವು ಅರ್ಧ ದುಡ್ಡ್ ಕೊಡಿ ಸಾಕು " ಎಂದು ಬಿಟ್ಟಿ ಆಫ಼ರ್ ನೀಡಿದ .
" ಅಲ್ಲ ಸೋಮಿ ನನ್ ತರ ಶ್ರೀರಾಮ್ ಚಂದ್ರನ ಮೇಲೆ ಹಿಂಗೆ ಹೇಳ್ತಾರಲ ಸೋಮಿ ಇವ್ರು . ನನ್ ಜಾತಿ ಯಾವ್ದು , ಅವಳ ಜಾತಿ ಯಾವ್ದು , ಇವ್ರಿಗೆ ಏನು ಬುದ್ಧಿ -ಗಿದ್ಧಿ ಐತ ? "
" ಸುಮ್ನೆ ಇರಿ ಸೋಮಿ ಇವ ಏನ್ ಶ್ರೀರಾಮ್ ಚಂದ್ರ ಅಲ್ಲ , ಕೆಸರು ಕಂಡಲ್ಲಿ ತುಳಿತಾನೆ , ನೀರ್ ಕಂಡಲ್ಲಿ ತೊಳಿತಾನೆ . ಇಲ್ಲಿ ಬಂದು ದೊಡ್ಡ ಸಾಚಾ ತರ ಮಾತಾಡ್ತಾನೆ ಅಷ್ಟೆ " ಎಂದು ನಾಗ ಅವನನ್ನು ಕೆಣಕಿದ .
" ಏಯ್ ನಾಗ ಸ್ವಲ್ಪ ನೋಡ್ಕಂಡು ಮಾತಾಡು , ನನ್ನ ಏನು ಕಂಡಕ್ಟರ್ ಗೋಪಾಲ ಅಂದ್ ಕಂಡ್ಯ ? ಹೆಂಗಸ್ರು ಮಕ್ಕಳು ಅಂತ ನೋಡ್ದೆ ಎಲ್ರ ತಿಕ ಮುಟ್ಟಿ ಸ್ವಲ್ಪ ಮುಂದೆ ಹೋಗ್ರಿ ಅಂತ ಹೇಳೋಕೆ "
ಇವರಿಬ್ಬರ ಮಾತು ಹಿಡಿತ ತಪ್ಪುತ್ತಿತ್ತು . ನನ್ನ ಮನೆಯ ಮುಂದೆ ಪಂಚಾಯ್ತಿ ಮಾಡುವುದು ನನಗೆ ಇಷ್ಟವಿರಲಿಲ್ಲ .
" ನಾಗ , ಆ ಮಾವಿನ್ ಮರದಲ್ಲಿ ಎರಡು ಕಾಯಿ ಕೊಯ್ದು ಕೊಡೊ ಮಾರಾಯ " ಎಂದು ಮಾತು ಬದಲಿಸಿದೆ .
" ಆ ಮರದ್ ಕಾಯಿ ಹುಳಿ , ಅದ್ನ ತಿಂದ್ ಏನ್ ಮಾಡ್ತೀರಾ ? "
" ಸುಮ್ನೆ ಹೇಳಿದಷ್ಟು ಮಾಡು " ಎಂದು ಗದರಿದೆ .
ಎರಡು ಮಾರು ಹತ್ತಿದವನೇ , ಅರಚುತ್ತಾ ನೆಲಕ್ಕೆ ಹಾರಿದ . ಹಾರಿದವನೇ ಪಂಚೆ , ಚಡ್ಡಿ ಎಲ್ಲ ತೆಗೆದೊಗೆದು ಓಡ ತೊಡಗಿದ .
ಚಿಕಳಿಯ (ಒಂದು ಜಾತಿಯ ಇರುವೆ ) ಗೂಡಿನ ಮೇಲೆ ಕಾಲಿಟ್ಟರೆ ಅದು ಸುಮ್ಮನೆ ಬಿಡುತ್ತದೆಯೆ ? . ನಾನು ಅವನ ನಾಗ ನೃತ್ಯ ನೋಡಲಾಗದೇ ಕಣ್ಣು ಮುಚ್ಚಿಕೊಂಡೆ .
(ಮುಂದುವರೆಯುವುದು.......................................)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ