ದೊಗಲೆ ಪ್ಯಾಂಟು , ದೊಗಲೆ ಶರ್ಟ್ , ಹೆಗಲಿಗೊಂದು ಕ್ಯಾಮೆರಾ ಹಾಕಿಕೊಂಡು ಸ್ಕೂಟರ್ ಹತ್ತಿ ಹೊರಟರೆಂದರೆ ಇಡೀ ಕರ್ನಾಟಕವೇ ಕಿಂದರಿ ಜೋಗಿಯ ಹಿಂದೆ ಹೋಗುವ ಇಲಿಗಳಂತೆ ಹೊರಡುತ್ತಿತ್ತು . ತೇಜಸ್ವಿಯ ಬಗ್ಗೆ ಬರೆಯುವ ಜರೂರತ್ತೆ ಇಲ್ಲ ಬಿಡಿ . ಯಾರಿಗೆ ಅವರು ಗೊತ್ತಿಲ್ಲ ? . ಆದರೆ ಅವರ ವ್ಯಕ್ತಿತ್ವವನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಲೇಖನಗಳನ್ನು ಓದಿದೆ , ಅದಕ್ಕೇ ಈ ಲೇಖನ ಬರೆಯಬೇಕೆಂದು ಮನಸ್ಸಾಯಿತು .
" ಏನಪ್ಪಾ ಅವರು ಮೀನು ಹಿಡೀತಿದ್ರು , ಫೋಟೋನೂ ತೆಗಿತಿದ್ರು " ಎಂದು ಎಷ್ಟೋ ಜನ ಅವರನ್ನು ಸರಳ , ಸೀಮಿತಗೊಳಿಸಿ ಬಿಡುತ್ತಾರೆ . ಅವರ ವ್ಯಕ್ತಿತ್ವವೇ ಅಂತದ್ದು , ಅದು ಅರ್ಥ ಮಾಡಿಕೊಳ್ಳಲು ಕಷ್ಟ . ಅವರ ಮೌನವೇ ಒಂದು ಮಾತು ಎಂಬುದನ್ನು ನಾವು ಅರಿತುಕೊಳ್ಳದಾದೆವು . ಕನ್ನಡಕ್ಕೆ ಕುವೆಂಪು ಕೊಟ್ಟ ಶ್ರೇಷ್ಠ ಕೃತಿ ಎಂದರೆ ಅದು ' ಪೂರ್ಣಚಂದ್ರ ತೇಜಸ್ವಿ ' . ಅಪ್ಪನ ನೆರಳಿನಿಂದ ಸಂಪೂರ್ಣ ಆಚೆ ಬಂದು ತಮ್ಮದೇ ಛಾಪು ಮೂಡಿಸುವುದು ಸುಲಭವಲ್ಲ .
ಒಂದೆಡೆ ಕುವೆಂಪು ವಿಶ್ವಮಾನವರಾಗಿ ಎಂದು ಕರೆ ಕೊಟ್ಟರೆ , ತೇಜಸ್ವಿ ಕಾಡಿನಲ್ಲಿ ಒಂಟಿಯಾಗಿ ಅಲೆದಾಡಿದರು . ಕುವೆಂಪು ಎತ್ತರಕ್ಕೆ ಏರಿದಂತೆಲ್ಲಾ , ತೇಜಸ್ವಿ ಆಳಕ್ಕೆ ಆಳಕ್ಕೆ ಇಳಿಯುತ್ತಾ ಹೋದರು . ಕುವೆಂಪು ತಾವು ಬಾಲ್ಯದಲ್ಲಿ ಅಥವಾ ರಜಾ ದಿನಗಳಲ್ಲಿ ಕಂಡ ಮಲೆನಾಡನ್ನು ಧ್ಯಾನಿಸಿ ಬರೆದರು , ಆದರೆ ತೇಜಸ್ವಿ ಸ್ವತಃ ಅದೇ ವಾತಾವರಣದಲ್ಲಿದ್ದುಕೊಂಡು ಬರೆದರು . ಆದ್ದರಿಂದಲೇ ಅವರಿಗೆ ಮಂದಣ್ಣನಂತಹ ವ್ಯಕ್ತಿ ಅರ್ಥವಾಗಿದ್ದು .
ವಿಜ್ಞಾನ ಬದುಕಿಗೆ ಅನಿವಾರ್ಯ , ಸಾಹಿತ್ಯ ಬದುಕಿಗೆ ಅನಿವಾರ್ಯ . ಅವೆರಡರ ಹದವಾದ ಮಿಶ್ರಣವೇ ತೇಜಸ್ವಿ ಅವರ ಬರಹಗಳು . ಧರ್ಮಕ್ಕೆ ಸಮನಾಗಿ ಏನಾದರು ಇದ್ದರೆ ಅದು ವಿಜ್ಞಾನ ಮಾತ್ರ . ಆದರೆ ಎಲ್ಲರಿಂದ ದೂರವಾಗಿ ದೂರದ ಮೂಡಿಗೆರೆಯಲ್ಲಿ ತೋಟ ಮಾಡುವ ಅವರ ನಿರ್ಧಾರ ಪ್ರಶ್ನೆಯಾಗೇ ಉಳಿಯಿತು . ಸಮಾಜದಿಂದ ವಿಮುಖಗೊಳ್ಳುವ ನಿರ್ಧಾರವಾಗಿರಲಿಲ್ಲ ಅದು . ಅವರೇ ಕೆಲವು ಕಡೆ ಹೇಳಿಕೊಂಡಿದ್ದಾರೆ " ನಾನು ಪೇಟೆ ಬೇಜಾರಾಗಿ ಹಳ್ಳಿಗೆ ಬಂದವನಲ್ಲ , ಕೃಷಿ ಮೇಲೆ ಆಸಕ್ತಿ ಇದ್ದು ಬಂದವನಲ್ಲ . ಸುಮ್ನೆ ಕಾಡಿನಲ್ಲಿ ಅಲೆದಾಡಿಕೊಂಡು ಇರಲು ಬಂದವನು " ಎಂದು .
ಅವರ ನಡವಳಿಕೆಗಳೂ ಅದೇ ರೀತಿ ಇತ್ತು . ಮನೆಗೆ ಬಂದ ಮೇಸ್ತ್ರಿಯ ಜೊತೆ ಗಂಟೆಗಟ್ಟಲೆ ಮಾತಾಡುತ್ತಾ ಕುಳಿತುಬಿಡುತ್ತಿದ್ದರಂತೆ . ಮೂಡಿಗೆರೆಯಿಂದಲೇ ಹಲವು ಚಳವಳಿಗಳಲ್ಲಿ ಅವರು ಭಾಗವಹಿಸಿದರು . ನಿಮಗೆ ಆಶ್ಚರ್ಯವೆನಿಸಬಹುದು ಕಾಫಿ ಬೋರ್ಡ್ ನ ನಿಯಮಗಳು ಆಂಗ್ಲರ ವಸಾಹತುಶಾಹಿಯ ನೀತಿಯನ್ತೆಯೇ ಇತ್ತು . ಅವರು ಹೇಳಿದ್ದೇ ರೇಟಿಗೆ ಮಾರಬೇಕಿತ್ತು . ಆಗ ತೇಜಸ್ವಿ " ನಾನು ನನ್ನ ಬೆಳೆಯನ್ನು ಸಂತೆ ಪೇಟೆಯಲ್ಲಿ ಇಟ್ಟು ಮಾರುತ್ತೇನೆ " ಎಂದು ಗುಡುಗಿದ್ದರಂತೆ .
ಪ್ರಶಸ್ತಿಗಳ ವಿಷಯದಲ್ಲಿ ಎಂದಿಗೂ ತೇಜಸ್ವಿಯವರದ್ದು ತಟಸ್ಥ ಭಾವನೆ . ಪಂಪ ಪ್ರಶಸ್ತಿ ಬಂದಾಗ " ನನಗ್ಯಾಕೆ ಕೊಡ್ತೀರ , ಬೇರೆ ಅವ್ರಿಗೆ ಕೊಡಿ " ಎಂದಿದ್ದರಂತೆ . ಅದನ್ನು ತೆಗೆದುಕೊಳ್ಳಲೂ ಅವರು ಹೋಗಲಿಲ್ಲ . ಕೊನೆಗೆ ಪ್ರಶಸ್ತಿಯನ್ನು ಮನೆಗೆ ತಂದು ಇಡಬೇಕಾಯಿತು .
ಟೀಕಾಕಾರರೇನು ಕಡಿಮೆಯೇ ? ಅವರು ತೆಜಸ್ವಿಯನ್ನೂ ಬಿಟ್ಟಿಲ್ಲ . " ಅದೇನ್ ಕ್ರಿಯೇಟಿವ್ ರೈಟಿಂಗ್ ಅಲ್ರಿ " ಎಂದು ಬಿಡೋರು . " ಎಲ್ಲವೂ ಹಾಸ್ಯದಲ್ಲೇ ಕಳೆದು ಹೋಗುತ್ತದೆ " ಎನ್ನುತ್ತಿದರು . ಆದರೆ ತೇಜಸ್ವಿ ತಮ್ಮ ಶೈಲಿ ಬದಲಿಸಿಕೊಳ್ಳಲಿಲ್ಲ . " ನಾವು ಬರಿ ರನ್ನ , ಪಂಪ ಅಷ್ಟನ್ನೇ ಓದಿಕೊಂಡಿದ್ರೆ ಗೂಬೆಗಳಾಗ್ತೀವಿ " ಎಂದು ಬೈಯುತ್ತಿದ್ದರಂತೆ .
ಅವರನ್ನು ಅನುಸರಿಸಿಕೊಂಡು ಹೋಗುವ ಶಿಷ್ಯವರ್ಗ ಅವರಿಗೆ ಸಿಗದೇ ಹೋಯ್ತು . ಯಾರಾದರೂ ಅವರ ಬಳಿ ನಿಮಗೆ ಆ ಪ್ರಶಸ್ತಿ ಸಿಗಬೇಕಿತ್ತು , ಇದು ಸಿಗಬೇಕಿತ್ತು ಎಂದರೆ , ಕಾರಂತರ ಒಂದು ಪತ್ರ ತೆಗೆದು ತೋರಿಸುತ್ತಿದ್ದರಂತೆ . ಕಾರಂತರು ಹಾಗೂ ತೇಜಸ್ವಿ ಇಬ್ಬರೂ ಅಲೆಮಾರಿಗಳು , ಸತತವಾಗಿ ಹೊಸದನ್ನು ಹುಡುಕುತ್ತಾ ಹೋಗುವವರು . ಮರಳಿ ಮಣ್ಣಿಗೆ ಕೃತಿ ಕೇವಲ ಮೂವತ್ತು ದಿನಗಳಲ್ಲಿ ಬರೆದದ್ದು , ಸರಸಮ್ಮನ ಸಮಾಧಿ ಕಥೆಯನ್ನು ಕೇವಲ ಐದೇ ದಿನದಲ್ಲಿ ಮುಗಿಸಿದ್ದರು . ಕಾರಂತರು ಆಗಿನ ಕಾಲಕ್ಕೇ ಎನ್ಸೈಕ್ಲೋಪೀಡಿಯಾ ಮಾಡಿದವರು . ಕೈಯಲ್ಲೇ ಹಕ್ಕಿಗಳ ಚಿತ್ರಗಳನ್ನು ಬಿಡಿಸಿ ಮುದ್ರಣ ಮಾಡಿದವರು . ಅದನ್ನು ತೇಜಸ್ವಿಯವರು ಮುಂದುವರೆಸಿದರು . ಕಾರಂತರು "YOU ARE REALLY A GREAT WRITER THAN I AM " ಎಂದು ಹೇಳಿದ್ದರು . ಅವರಿಬ್ಬರೂ ಮೊದಲೇ ಪರಿಚಯ ಬೆಳೆಸಿಕೊಳ್ಳಬೇಕಿತ್ತು . ಕಾರಂತರು ಸಾಯುವ ಒಂದು ತಿಂಗಳ ಮೊದಲಷ್ಟೇ ನಿರುತ್ತರ ಗೆ ಭೇಟಿ ನೀಡಿದ್ದರು .
ಸಾಮಾನ್ಯವಾಗಿ ಪರಿಸರವಾದಿಗಳು ಅಭಿವೃದ್ದಿಯನ್ನು ವಿರೋಧಿಸುತ್ತಾರೆ , ಆದರೆ ತೇಜಸ್ವಿ ಅದಕ್ಕೆ ಅಪವಾದ . ಕುವೆಂಪು ತಂತ್ರಾಂಶ ಎಂಬ ಕನ್ನಡ ಸಾಫ್ಟ್ವೇರ್ ರಚನೆಗೆ ಕೈ ಜೋಡಿಸಿದರು . ಕರ್ನಾಟಕದ ಯಾವ ಸಾಹಿತಿಗೂ ಕಂಪ್ಯೂಟರ್ ಗೊತ್ತಿಲದ ಕಾಲದಲ್ಲಿಯೇ ಅವರು ಕಂಪ್ಯೂಟರ್ ಬಳಸುತ್ತಿದ್ದರು .
ಆದರೆ ಕುವೆಂಪು ಕೈ ಬರಹದ ರಾಮಾಯಣ ದರ್ಶನಂ ಮುದ್ರಿಸಿದ್ದು ಅವರ ಹಾಗೂ ಲಂಕೇಶ್ ಅವರ ಮಧ್ಯೆ ಮನಸ್ತಾಪಕ್ಕೆ ಕಾರಣವಾಯಿತು .
ತೇಜಸ್ವಿಯವರ ವ್ಯಕ್ತಿತ್ವ ಮೊಗೆದಷ್ಟೂ ನಮ್ಮೆದುರು ಅನಾವರಣಗೊಳ್ಳುತ್ತಲೇ ಹೋಗುತ್ತದೆ .' ಕರ್ವಾಲೋ ' ಸೀಮೆ ಎಣ್ಣೆಯ ಬುಡ್ಡಿ ದೀಪದಲ್ಲಿ ತಯಾರಾದ ಕಾದಂಬರಿ , ಅದು ಜಪಾನೀಸ್ ಭಾಷೆಗೂ ಅನುವಾದಗೊಂಡಿದೆ . ತಬರನ ಕಥೆ , ಕುಬಿ ಮತ್ತು ಇಯಾಲ , ಚಿದಂಬರ ರಹಸ್ಯ , ಅಬಚೂರಿನ ಪೋಸ್ಟಾಪೀಸು , ಕಿರಗೂರಿನ ಗಯ್ಯಾಳಿಗಳು ತೆರೆಯ ಮೇಲೆ ಮೂಡಿ ಬಂದಿವೆ . ಒಮ್ಮೆ ಗಿರೀಶ್ ಕಾಸರವಳ್ಳಿಯವರ ಅಸೋಸಿಯೇಟ್ ತೇಜಸ್ವಿಯವರ ಬಳಿ ಸಂಭಾಷಣೆ ಬರೆದು ಕೊಡಲು ಕೇಳಿದರಂತೆ " ಹೋಗಯ್ಯ ನಂಗೆ ಮೀನ್ ಹಿಡೀಬೇಕು " ಎಂದು ತೇಜಸ್ವಿ ಹೊರಟು ಹೋದರಂತೆ .
ಇನ್ನೂ ಹೇಳದ ಹಲವು ವಿಷಯಗಳಿವೆ . ತೇಜಸ್ವಿಯವರು ಮುದ್ರಣಾಲಯ ಮಾಡಿದ್ದರು , ಹೈಡೇನ್ ಬರ್ಗ್ ನಿಂದ ಯಂತ್ರಗಳನ್ನು ತರಿಸಿದ್ದರು . ಕನ್ನಡದಲ್ಲಿ ಮೊದಲ ಬಾರಿಗೆ ಲೇಸರ್ ಮುದ್ರಣ ಮಾಡಿದ ಲೇಖಕರು ತೇಜಸ್ವಿ . ಅವರ ಕನಸಿನ ಕೂಸೇ ' ಪುಸ್ತಕ ಪ್ರಕಾಶನ ' .
ಕೆಂಜಿಗೆ ಪ್ರದೀಪ ಅವರಿಗೆ " ಪ್ಯಾಪಿಲಾನ್ ಕಥೆನ ತರ್ಜುಮೆ ಮಾಡಯ್ಯ " ಎಂದಿದ್ದರಂತೆ . ಆದರೆ ಪ್ರದೀಪ ಅವರ ಹೆಸರು ಒಂದೆ ಇದ್ದರೆ ಪುಸ್ತಕ ಮಾರಾಟ ಕದಿಮೆಯಾಗೇತು ಎಂದು ಪ್ರದೀಪ ನಿಮ್ಮ ಹೆಸರನ್ನೂ ಹಾಕ್ತೀನಿ ಸರ್ ಎಂದರಂತೆ . " ನಾನು ತರ್ಜುಮೆ ಮಾಡದೆ ಹೆಂಗೆ ಹಾಕ್ತಿಯ , ಇರು ನಾನು ಸ್ವಲ್ಪ ತರ್ಜುಮೆ ಮಾಡ್ತೀನಿ " ಎಂದು ಸ್ವಲ್ಪ ಭಾಗ ಅವರು ತರ್ಜುಮೆ ಮಾಡಿದರು .
ಇಂದು ನಮ್ಮ ಜೊತೆ ಅಣ್ಣ ಇರಬೇಕಿತ್ತು . ನನ್ನ ಸಾಹಿತ್ಯದ ಗುರುಗಳು ತೇಜಸ್ವಿಯವರು . ನಾನು ಅವರನ್ನು ನೋಡಲು ಸಾಧ್ಯವಾಗಲೇ ಇಲ್ಲ . ಈಗ ನಿರುತ್ತರಕ್ಕೆ ಒಮ್ಮೆ ಭೇಟಿ ನೀಡಬೇಕು . ಕೈಯಲ್ಲಿ ಕಾರಿನ ಕೀ ಇದೆ , ಆದರೆ ತೇಜಸ್ವಿಯಿಲ್ಲ . ತೇಜಸ್ವಿ ಇಲ್ಲದ ಮೌನ ಸಹಿಸಲಸಾಧ್ಯ . ಕೊನೆಯ ಪಕ್ಷ ಅವರು ಓಡಾಡಿದ ಜಾಗವನ್ನಾದರೂ ನೋಡಿ ಬರಬೇಕು . ಮತ್ತೆ ತೇಜಸ್ವಿಯಂತ ಬರಹಗಾರರು ಸಿಗುವುದು ಸಾಧ್ಯವಿಲ್ಲ . ನೂರು ದೇವರನ್ನು ನೋಡುವ ಮೊದಲು ಒಮ್ಮೆ ಕುಪ್ಪಳಿಯನ್ನು ನೋಡಿ ಬರಬೇಕು . ನನ್ನ ಪ್ರತಿ ಬರಹದಲ್ಲೂ ತೇಜಸ್ವಿಯವರನ್ನು ಜೀವಂತವಾಗಿಡುವ ಪ್ರಯತ್ನ ಮಾಡುತ್ತೇನೆ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ