" ಈ ಕಾಂಟ್ರಾಕ್ಟ್ ಹಿಡಿಲೇ ಬೇಕಪ್ಪ " ಅರಳೀಕಟ್ಟೆಯ ಮೇಲೆ ಕುಳಿತಿದ್ದ ಇಸ್ಮಾಯಿಲ್ ಮಾತುದುರಿಸಿದ . ಉಳಿದ ದಿನೇಶ , ಗಂಗಾಧರ ಮತ್ತು ಪರಾಸ್ಕ ಸರ್ವ ಸಮ್ಮತದಿಂದ ತಲೆಯಾಡಿಸಿದರು . ಫರ್ನಾಂಡೀಸ್ ಎನ್ನುವ ಹೆಸರು ಜನರ ಬಾಯಲ್ಲಿ ಪರಾಸ್ಕ ಆಗಿತ್ತು . ಜಂಬಗಾರಿನ ಇತಿಹಾಸದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಎಸ್.ಎಸ್.ಎಲ್.ಸಿ ಯ ಮುಖ ನೋಡಿದದವರು ಅವರೇ ನಾಲ್ಕು ಜನ . ಶಾಲೆಯ ಮುಖ ನೋಡಿದ್ದರಾದರೂ ಎಂದೂ ಅವರ ಸ್ವಂತ ಬಲದಿಂದ ಪಾಸಾದವರಲ್ಲ . ಹತ್ತು ವರ್ಷಗಳಿಗೊಮ್ಮೆ ಹೈ ಸ್ಕೂಲು ಬೋರ್ಡಿನ ಪಾಠಗಳು ಬದಲಾದಾಗ , ಬೋರ್ಡಿನವರಿಗೆ ಇವರನ್ನು ಏನು ಮಾಡಬೇಕೆಂದು ತಿಳಿಯದೆ ಪಾಸು ಮಾಡಿದ್ದರು . ಅದೇ ಆಧಾರದ ಮೇಲೆ ಈ ನಾಲ್ಕು ಜನ ಅಬ್ಬಾಸ್ ಬೇರಿಯ ಕೆಳಗೆ ಸಬ್-ಕಂಟ್ರಾಕ್ಟರ್ ಗಳಾಗಿ ಸೇರಿಕೊಂಡಿದ್ದರು . ನಿಧಾನವಾಗಿ ಭೂಗತ ಜಗತ್ತಿಗೆ ತಮ್ಮನ್ನು ತೆರೆದುಕೊಂಡರು . ಮಲೆನಾಡಿನ ಗಂಧಕ್ಕೆ ಹೊರ ದೇಶಗಳಲ್ಲಿ ಒಳ್ಳೆಯ ಬೆಲೆ ಇರುವುದನ್ನು ಕಂಡುಕೊಂಡ ಇವರು ಗಂಧವನ್ನು ಕದ್ದು ಸಾಗಿಸತೊಡಗಿದರು . ಹತ್ತರ ಜೊತೆ ಹನ್ನೊಂದು ಎನ್ನುವಂತೆ ಭಂಗಿ ಸೊಪ್ಪು ಬೆಳೆಯುವುದು , ಬೀಟೆ , ನೀಲಗಿರಿಯ ಕಳ್ಳ ಸಾಗಣೆ ಶುರು ಮಾಡಿಕೊಂಡರು . ಇಷ್ಟೆಲ್ಲಾ ಮಾಡಿಯೂ ಒಮ್ಮೆ ಸಹ ಅವರು ಪೋಲಿಸ್ ಸ್ಟೇಷನ್ ನ ಮೆಟ್ಟಿಲು ಹತ್ತಲಿಲ್ಲ . ಅವರ ಅದೃಷ್ಟವೋ ಅಥವಾ ಪೋಲೀಸರ ಕುರುಡೋ ಗೊತ್ತಿಲ್ಲ . ಜನರೆಲ್ಲಾ ಇವರಿಗೆ ಶಾಸಕ ತಿರುಮಲೇಗೌಡರ ಕುಮ್ಮಕ್ಕು ಇದೆ ಎಂದೇ ತಿಳಿದುಕೊಂಡಿದ್ದರು . ಇವರೂ ಸಹ ಅದರ ಸದುಪಯೋಗ ಪಡೆದುಕೊಳ್ಳುತ್ತಿದರು .
ಜಂಬಗಾರಿಗೆ ಶತಮಾನಗಳಿಂದ ಬರುತ್ತಿದ್ದ ಎರಡು ಭೋಗಿಯ ರೈಲನ್ನು ತೆಗೆದು ಹಾಕಿ , ಮೀಟರ್ ಗೇಜ್ ಅನ್ನು ಬ್ರಾಡ್ ಗೇಜ್ ಮಾಡಲು ಸರ್ಕಾರ ಆದೇಶ ಹೊರಡಿಸಿತ್ತು . ಆ ಕಾಂಟ್ರಾಕ್ಟ್ ಹಿಡಿದರೆ ಸ್ವಲ್ಪ ಹಣವನ್ನು ಜೇಬಿಗೆ ಇಳಿಸಬಹುದೆಂದು ನಾಲ್ವರೂ ಉಪಾಯ ಹೂಡಿದರು . ಹಳ್ಳಿಗಳಲ್ಲಿ ಸಣ್ಣ ಪುಟ್ಟ ಸೇತುವೆ , ರಸ್ತೆ , ಶಾಲೆಯ ಕೆಲಸ ಮಾಡಿ ಪುಡಿ ಕಾಸು ಸಂಪಾದಿಸುವುದು ಅವರಿಗೆ ಬೇಸರ ಬಂದುಹೋಗಿತ್ತು . ಒಂದೇ ಏಟಿಗೆ ಶ್ರೀಮಂತರಾಗುವ ದಾರಿ ಅವರ ಕಣ್ಣು ಕುಕ್ಕುತಿತ್ತು .
ತಕ್ಷಣವೇ ಬೆಂಗಳೂರಿಗೆ ಹೋಗಿ ಕಾಂಟ್ರಾಕ್ಟ್ ಹಿಡಿದು ತಂದೇ ಬಿಟ್ಟರು . ಸೆಂಟ್ರಲ್ ಗವರ್ನಮೆಂಟ್ ನ ಕೆಲಸವೆಂದರೆ ಏನು ಸಣ್ಣು ಮನೆ ಹೊಳೆಗೆ ಸಂಕ ಹಾಕಿದಂತೆಯೇ ? . ಆ ಮೂರ್ಖರಿಗೆ ರೈಲಿನ ಬಗ್ಗೆ ಏನು ಗೊತ್ತು ? . ಎರಡು ಕಬ್ಬಿಣದ ಹಳಿ ಫಿಟ್ ಮಾಡಿದರೆ ಆಯಿತು ಎಂದು ತಿಳಿದುಕೊಂಡು ಕಾಂಟ್ರಾಕ್ಟ್ ತೆಗೆದುಕೊಂಡಿದ್ದರು . ಕೆಲಸ ಶುರು ಮಾಡದಿದ್ದರೆ ದಂಡ ಕಟ್ಟುವ ಪರಿಸ್ಥಿತಿ ಬರುತಿತ್ತು . ಬೇರೆ ದಾರಿ ಕಾಣದೆ ಎಂಜಿನಿಯರ್ ರನ್ನು ಹುಡುಕಿಕೊಂಡು ಊರೂರು ಅಲೆಯ ತೊಡಗಿದರು .
ಕೆಲಸದ ಪ್ರಗತಿ ತೋರಿಸಲು ಊರಿನ ತುಂಬೆಲ್ಲಾ ಗುಂಡಿ ತೋಡಿ , ಕಂಡ ಕಂಡಲ್ಲಿ ಜಲ್ಲಿ ಕಲ್ಲುಗಳನ್ನು ಇಳಿಸಿದ್ದರು . ಅವರ ಮೂರ್ಖತನದಿಂದ ಇತಿಹಾಸ ಪ್ರಸಿದ್ಧ ಜಂಬಗಾರು , ಗೂರಲು ಬಂದ ಮುದುಕಿಯಂತೆ ಕಾಣುತಿತ್ತು . ಆ ನಾಲ್ವರು ಶತ ಮೂರ್ಖರು ಗಣಪತಿ ದೇವಸ್ಥಾನದ ಸುತ್ತೆಲ್ಲಾ ಗುಂಡಿಗಳನ್ನು ತೋಡಿ , ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿ ಕಾಣಿಕೆ ಡಬ್ಬಿ ಖಾಲಿ ಹೊಡೆಯಲು ಶುರುವಾಯಿತು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ