ಪೇಟೆ ಬೀದಿಯಲ್ಲಿ ಹಳೆಯ ತಾಮ್ರದ ಪಾತ್ರೆಗೆ ಕಲಾಯಿ ಹಾಕಿಸುತ್ತಾ ರಮೇಶ ಭಟ್ಟರು ಕುಳಿತಿದ್ದರು . ಅವರಿಗೆ ಮೂರ್ನಾಲ್ಕು ಎಕರೆ ತೋಟ ಸರ್ಕಾರದ ಪ್ರಕಾರ ಇದ್ದರೂ ಕಾನು ಮೂಲೆಯಲ್ಲಿ ಒಂದೆರಡು ಎಕರೆ ಕಾಡು ಸವರಿ ಅಲ್ಲಿಯೂ ಸಹ ಅಡಿಕೆ ಮರ ನೆಟ್ಟಿದ್ದರು . ಕೊಳೆ ಔಷಧಿ ಹೊಡೆಯಲು ಬಳಸುವ ತಾಮ್ರದ ಪಾತ್ರೆಗೆ ಪದೇ ಪದೇ ಕಲಾಯಿ ಹಾಕಿಸಬೇಕಿತ್ತು . ಭಟ್ಟರಿಗೆ ಅದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು . ಸಮಯ ಕಳೆಯಲೆಂದು ಕಲಾಯಿ ಸಾಬನ ಬಳಿ ಹರಟೆಗೆ ಕುಳಿತರು .
" ಅದೇನ್ ಕಲಾಯಿ ಹಾಕ್ತಿಯೋ , ದಿನಾ ನಿನ್ ಅಂಗಡಿಗೆ ಬಂದು ಬೆಂಚು ಬಿಸಿ ಮಾಡ್ಲ ? . ನಾ ಒಂದು ಹೊಸ ಸ್ಟೀಲ್ ಡ್ರಮ್ ತಗ ಬಿಡ್ತೀನಿ . ಈ ಸಮಸ್ಯೆ ಇರಲ್ಲ ನೋಡು "
" ಹಂಗ್ ಒಂದ್ ಮಾಡ್ಬೇಡಿ , ಈಗ್ಲೇ ಗಿರಾಕಿ ಇಲ್ದೆ ಯಾಪಾರ ಖೈದು ಮಾಡ ಸ್ಥಿತಿ ಬಂದದೆ . ಕೊಳೆ ಔಷಧಿನ ಪಾತ್ರೆಗೆ ಹಾಕಿದ್ರೆ ಹಿಂಗೆಯಾ " ಎಂದು ಆತ ತನ್ನ ಸರ್ವ ಪ್ರಯತ್ನವನ್ನೂ ಮಾಡಿ ಗಿರಾಕಿಯನ್ನು ಉಳಿಸಿಕೊಳ್ಳುತ್ತಿದ್ದ .
ಅಷ್ಟರಲ್ಲಿಯೇ ರೈಲ್ವೇ ಕೆಲಸ ಮಾಡುತ್ತಿದ್ದ ಬೋಯಿಗಳು ಕಲಾಯಿ ಸಾಬನ ಬಳಿ ಬಂದರು .ಅವರನ್ನು ನೋಡಿದರೆ ಅವರು ಈ ಶತಮಾನದ ಮನುಷ್ಯರಂತೆ ಕಾಣುತ್ತಿರಲಿಲ್ಲ . ವ್ಯಕ್ತಿಯೊಬ್ಬನಿಗೆ ಇರುವ ಸಮಾಜದ ಯಾವ ಒತ್ತಡಗಳೂ ಇಲ್ಲದೆ ಅಂದು ದುಡಿದದ್ದನ್ನು ಅಂದೇ ತಿಂದು , ಕುಡಿದು ಖಾಲಿ ಮಾಡಿಬಿಡುತ್ತಿದರು . ನವ ನಾಗರಿಕತೆಯ ಒಂದೇ ಒಂದು ಕುರುಹೂ ಸಹ ಅವರ ದೇಹದ ಮೇಲೆ ಕಾಣುತ್ತಿರಲಿಲ್ಲ . ಕತ್ತಿಯಲ್ಲಿಯೇ ಕತ್ತರಿಸಿಕೊಳ್ಳುವ ಅವರ ಕೂದಲು , ಉಗುರು ಎಲ್ಲವೂ ಅವರನ್ನು ಶಿಲಾಯುಗಕ್ಕೆ ಕರೆದೊಯ್ದಿತ್ತು .
" ಸ್ವಲ್ಪ ಈ ಹಂಡೆಗೆ ಕಲಾಯಿ ಹಾಕೊಡಿ ಸೋಮಿ " ಎನ್ನುತ್ತಾ ತಿಮ್ಮಾ ಬೋಯಿ ಅವನ ಬಿಡಾರದಿಂದ ತಂದಿದ್ದ ಮಸಿ ಹಿಡಿದ ತಾಮ್ರದ ಹಂಡೆ ಎದುರಿಗಿಟ್ಟ .
" ಹೋಗಯ್ಯ ಬಿಟ್ಟಿಯಾಗಿ ಕಲಾಯಿ ಹಾಕಕ್ಕೆ ನಾ ಏನ್ ನಿನ್ ಮಾವನ ಮಗನಾ ? . ದುಡ್ಡ್ ಕೊಡು " ಎಂದು ಕಲಾಯಿ ಸಾಬ ಅಸಡ್ಡೆ ತೋರಿದ . ಅವನ ಗುಣವೇ ಹಾಗೇ ಇಂಪೋರ್ಟೆಡ್ ಪ್ಯಾಂಟು , ಶರ್ಟು ಹಾಕಿಕೊಂಡು ಹೋದವರಿಗೆ ಜಾಗ ಸ್ವಚ್ಛ ಮಾಡಿ ಅಂಗಡಿಯಲ್ಲಿ ಕೂರಿಸಿಕೊಳ್ಳುತ್ತಿದ್ದ . ಕೊಳಕು ಪಂಚೆ , ಪಟಾ-ಪಟಿ ಚಡ್ಡಿ ಹಾಕಿಕೊಂಡು ಬರುವ ಗಿರಾಕಿಗಳಿಗೆ ಇವತ್ತು , ನಾಳೆ ಎಂದು ಸತಾಯಿಸುತ್ತಿದ್ದ . ಇಂದಿರಾ ಗಾಂಧಿಯವರ ' ಗರೀಭಿ ಹಟಾವೋ ' ಮಾತನ್ನು ಶಿರಸಾ ವಹಿಸಿ ಪಾಲಿಸುತ್ತಿದ್ದ .
" ಕಾಸು ಕೊಡ್ತೀನಿ ಸೋಮಿ , ಯಾವ್ ಬಡ್ಡಿ ಮಗ ತಾನೇ ಈಗ ಕಾಸಿಲ್ದೆ ಕಲಾಯಿ ಹಾಕ್ತಾನೆ ಹೇಳಿ " ಎಂದು ತಿಮ್ಮಾ ಬೋಯಿಯೂ ಸರಿಯಾಗೇ ತಿರುಗೇಟು ನೀಡಿದ .
" ಸರಿ ನಾಳೆ ಬಂದು ತಗಂಡ್ ಹೋಗು , ಮಾಡಿ ಇಟ್ಟಿರ್ತೀನಿ "
" ಅಯ್ಯೋ ನಾವೆಲ್ಲಾ ಇವತ್ತೇ ಹೋಯ್ತಾ ಇದೀವಿ ಸೋಮಿ , ಬೇಗ ಮಾಡಿಕೊಟ್ಬಿಡಿ " ತಿಮ್ಮ ಗೋಗರೆಯ ತೊಡಗಿದ .
" ಯಾಕ್ರೋ ರೈಲ್ವೆ ಕೆಲ್ಸ ಇಷ್ಟ್ ಬೇಗ ಮುಗ್ದ್ ಹೋಯ್ತಾ ? " ಭಟ್ಟರು ಕುತೂಹಲ ತಡೆಯಲಾಗದೆ ಕೇಳಿದರು .
" ಎಲ್ಲಿ ಮುಗೀತು ಸೋಮಿ , ನಮ್ ಯಜಮಾನರನ್ನ ಪೋಲಿಸಿನೋರು ಕರ್ಕಂಡ್ ಹೋಗ್ಬಿಟ್ರು . "
" ಯಾರು ? ಆ ಇಸ್ಮಾಯಿಲ್ ಮತ್ತೆ ಅವ್ನ ಚೇಲಾ ಇದಾರಲ್ಲ ಅವರೇನೋ ? . ಎಂತ ಕೇಸು ? ಗಂಧನೋ ? ಭಂಗಿ ಸೋಪ್ಪೋ ? "
" ಅವಲ್ಲ ಎಂತದೂ ಅಲ್ಲ ಸೋಮಿ , ಈ ರೈಲ್ವೆ ಕೆಲ್ಸಕ್ಕೆ ನಾವು ಗಣಪತಿ ದೇವಸ್ಥಾನದ ಹತ್ರ ಗುಂಡಿ ತೋಡಿದೀವಲ್ಲ ಅಲ್ಲಿ ನಮ್ಗೆ ನಿಧಿ ಸಿಕ್ತು ಅಂತ ಯಾರೋ ಮೂಗರ್ಜಿ ಬರ್ದ್ ಬಿಟ್ಟವ್ರೆ . ಅದ್ಕೆ ಪೋಲಿಸ್ನೋರು ಅವರನ್ನ ಕರ್ಕಂಡ್ ಹೋದ್ರು . ನಮ್ಮುನ್ನು ಕರ್ಕಂಡ್ ಹೋಗಿ ತಿಕದ್ ಮೇಲೆ ಎರಡು ಏಟು ಕೊಟ್ರು . ನಮ್ಗೆ ಯಾವ್ ನಿಧಿನೂ ಸಿಕ್ಕಿಲ್ಲ ಅಂತ ನಂಬ್ಸೋಕೆ ಸಾಕಾಗ್ಹೊತು . ಅಲ್ಲ ನಿಧಿ ಏನು ಎಲ್ಲರಿಗೂ ಸಿಕ್ಕೊಯ್ತದ ? ಹಂಗ್ ಸಿಕ್ಕಿದ್ರು ಅದ್ನ ಬಲಿ ಕೊಡದೆ ಮುಟ್ಟಕ್ಕೆ ಆಯ್ತದ ? . ಈ ಪೋಲಿಸ್ನೋರಿಗೆ ಸಿಗದು ನಮ್ಮನ್ತವ್ರೆಯ . ಅದ್ಕೆ ಈ ಊರಿನ್ ಸಾವಾಸವೇ ಬ್ಯಾಡ ಅಂತ ಕೆಲಸ ಖೈದು ಮಾಡಿ ಹೊರಟ್ವಿ ಸೋಮಿ " ಎಂದು ಒಂದೇ ಉಸಿರಲ್ಲೇ ವರದಿ ನೀಡಿದ .
ಭಟ್ಟರು ಮನಸೊಳಗೇ ನಕ್ಕರು .
*********************************************************************************
" ಅದ್ಯಾವ ಬೋಳಿ ಮಗ ಅರ್ಜಿ ಬರ್ದಿದಾನೋ ? ನನ್ ಕೈಗೆ ಸಿಗ್ಲಿ ಮಾಡ್ತೀನಿ " ಸ್ಟೇಷನ್ ಆಚೆ ನಿಂತು ಪರಾಸ್ಕ ಹಲ್ಲು ಕಡಿಯುತ್ತಿದ್ದ .
" ಏಯ್ ಸಣ್ಣಕೆ ಮಾತಾಡೋ ಪೋಲಿಸ್ನೋರಿಗೆ ಕೇಳಿದ್ರೆ ಮತ್ತೆ ಮುಕಳಿ ಕೆಂಪ್ ಆಗೋ ಹಂಗ್ ಹೊಡಿತಾರೆ " ಗಂಗಾಧರ ಎಚ್ಚರಿಕೆ ನೀಡಿದ .
" ನಮ್ ಜನಗಳಿಗೆ ಅರ್ಜಿ ಬರ್ಯೊ ಅಷ್ಟು ಧೈರ್ಯಾನೂ ಇಲ್ಲ , ಅಷ್ಟು ಅವರೂ ಓದೂ ಇಲ್ಲ . ನಂಗ್ಯಾಕೋ ಈ ಬ್ರಾಹ್ಮರ ಮೇಲೆ ಅನ್ಮಾನ " . ಷರ್ಲಾಕ್ ಹೋಮ್ಸ್ ನ ಅಪರಾವತಾರ ತಾನೇ ಎಂದು ತಿಳಿದಿದ್ದ ದಿನೇಶ ತನ್ನ ಮಾತು ತೇಲಿಸಿದ .
" ಇವ್ರಿಗೆ ಸರ್ಯಾಗ್ ಬುಧ್ದಿ ಕಲ್ಸಬೇಕು . ನಮ್ ಎಲ್ಲಾ ದಂಧೆಗೂ ಇವ್ರು ಮೂಗ್ ತೂರುಸ್ತಾರೆ . ನಮ್ ಪಾಡಿಗ್ ನಾವು ಕೆಲ್ಸ ಮಾಡ್ತಾ ಇದ್ರೆ ಇವ್ರಿಗೆ ಏನು ಅಂತೀನಿ ? . ಸುಮ್ನೆ ಘಂಟೆ ಅಲ್ಲಾಡ್ಸೋದು ಬಿಟ್ಟು ನಮ್ ಸುದ್ದಿಗ್ ಬಂದ್ರೆ ಸುಮ್ನೆ ಬಿಡ್ಬೇಕ ? " ತಂಡದ ನಾಯಕ ಇಸ್ಮಾಯಿಲ್ ನ ಮಾತಿಗೆ ಎಲ್ಲರೂ ತಲೆದೂಗಿದರು .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ