ಕಥೆಗಾರ ನಿಮಿತ್ತ ಮಾತ್ರ . ಬೇಕಿದ್ದರೆ ನೀವೇ ಕಥೆಗಾರನನ್ನು ಕೇಳಿ ನೋಡಿ , ಒಂದು ಉತ್ತಮ ಕಥೆ ತಾನಾಗಿಯೇ ಬರೆಸಿಕೊಳ್ಳುತ್ತದೆ . ಕಥೆಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ . ಕಥೆಯೆಂದರೆ ಜೀವನಕ್ಕೆ ಹಾಕಿದ ಚೌಕಟ್ಟು ಅಷ್ಟೇ . ಕಥೆ ಹೇಗೆ ಹುಟ್ಟುತ್ತದೆ ? . ಅನುಭವದಿಂದ ? ಕಲ್ಪನೆಯಿಂದ ? ಕನಸಿನಿಂದ ? ಸುಪ್ತ ಪ್ರಜ್ಞೆಯಿಂದ ? . ಇವೆಲ್ಲವೂ ಹೌದು ಅಥವಾ ಇವ್ಯಾವುದೂ ಅಲ್ಲ . ಕಥೆ ಹುಟ್ಟಲು ಕಾರಣಗಳು ಬೇಕಿಲ್ಲ .
ಓದಿದವರನ್ನು ಅಷ್ಟರ ಮಟ್ಟಿಗೆ ಸೆಳೆಯುವ , ಚಿಂತನೆಗೆ ಹಚ್ಚುವ ಕಥೆ , ಕಥೆಗಾರನ ಒಳಗಿದ್ದಾಗ ಅವನಿಗೆ ಎಷ್ಟು ಯಾತನೆ ಕೊಟ್ಟಿದ್ದಿರಬಹುದು ? ಎಷ್ಟರ ಮಟ್ಟಿಗೆ ಆತನನ್ನು ಚಿಂತನೆಗೆ ಹಚ್ಚಿರಬಹುದು ? . ಯಾವಾಗಲಾದರೂ ಯೋಚಿಸಿದ್ದಿರಾ ? . ಕಥೆಗಾರನಿಗೆ ಕಥೆಯೆಂಬುದು ವಿಷವಿದ್ದಂತೆ ಅದು ಆತನನ್ನೇ ಕೊಲ್ಲುತ್ತಾ ಹೋಗುತ್ತದೆ .
ಅವನೊಬ್ಬನಿದ್ದ , ಹೆಸರು ಅನವಶ್ಯಕ . ಆತ ಅದ್ಭುತ ಕಥೆಗಾರ ! . ಕಾಗದದ ಮೇಲೆ ಲೇಖನಿಯಿಟ್ಟರೆ ಸಾಕು ಅದ್ಭುತ ಕಥೆಗಳು ಸೃಷ್ಟಿಯಾಗುತ್ತಿತ್ತು . ಲೇಖನಿಯಿದ್ದರೆ ಸಾಕು , ಜಗತ್ತನ್ನೇ ಆಳುವ ಸಾಮರ್ಥ್ಯ ಅವನಿಗಿತ್ತು . ಒಂದಷ್ಟು ಕಥೆ , ಕವನಗಳನ್ನು ಬರೆದಾದ ಮೇಲೆ ತಲೆ ಖಾಲಿಯಾದಂತೆ ಅನಿಸತೊಡಗಿತು . ನಂತರದ ಅವನ ಬರಹಗಳು ಹೇಳಿದ್ದೆ ಹೇಳುವ ಕಿಸುಬಾಯಿ ದಾಸನಂತೆ ಆಗ ತೊಡಗಿತ್ತು . ಈ ರೀತಿ ಅವನಿಗಷ್ಟೇ ಅನಿಸಿದ್ದಲ್ಲ ಓದುಗರಿಗೂ ಅದು ಅನುಭವಕ್ಕೆ ಬರತೊಡಗಿತು . ಎಷ್ಟೇ ಶ್ರದ್ಧೆ , ಅಧ್ಯಯನದಿಂದ ಕಥೆ ಬರೆದರೂ ಅದೊಂದು ರೀತಿಯ ಅಪೂರ್ಣತೆ ಕಥೆಗಳನ್ನು ಕಾಡುತಿತ್ತು . ಆತ ಏನೇ ಮಾಡಿದರೂ ಒಳ್ಳೆಯ ಬರಹ ನೀಡಲು ಸಾಧ್ಯವೇ ಆಗಲಿಲ್ಲ .
ಒಂದು ದಿನ ಇದ್ದಕಿದ್ದಂತೆ ಏನೋ ಹೊಳೆಯಿತು . ನಗಲು ಶುರು ಮಾಡಿದ . ನಕ್ಕ , ಗಹ-ಗಹಿಸಿ ನಕ್ಕ . ಗಂಟೆ ಗಟ್ಟಲೆ , ದಿನಗಟ್ಟಲೇ ನಗತೊಡಗಿದ . ಅಪೂರ್ಣ ಜಗತ್ತು , ಢಾಂಬಿಕ ಜನರು , ಕಾಡು , ನದಿ , ಸಮುದ್ರ , ರಸ್ತೆ ಎಲ್ಲವೂ ಅವನ ಸ್ಮೃತಿ ಪಟಲದ ಮೇಲೆ ಹಾದು ಹೋದವು . ಈ ಜಗತ್ತು ಹಾಗೆ ತಾನೇ ? . ಯು ಹ್ಯಾವ್ ಟು ಕೋಪ್ ಅಪ್ ವಿಥ್ ದಿಸ್ ಇಂಪರ್ಫೆಕ್ಟ್ ವರ್ಲ್ಡ್ . ತನ್ನ ಬರಹಗಳೆಲ್ಲವೂ ಬಾಲಿಶವಾಗಿ ಕಾಣಿಸತೊಡಗಿತು . ಹೊಸತನ್ನೆನ್ನಾದರೂ ಕೊಡಬೇಕು , ನಿರ್ಧರಿಸಿದ . ಖಾಲಿ ಹಾಳೆಯೊಂದನ್ನು ತೆಗೆದುಕೊಂಡು ಬರೆದ ' ಈ ಹಾಳೆಯ ಹಿಂದೆ ಬರೆದಿರುವುದು ನಿಜ ' , ಇನ್ನೊಂದು ಬದಿ ಬರೆದ ' ಈ ಹಾಳೆಯ ಹಿಂದೆ ಬರೆದಿರುವುದು ಸುಳ್ಳು ' . ಆ ಹಾಳೆಯನ್ನು ದಾರಕ್ಕೆ ಸುರುವಿ ಅದನ್ನೇ ದಿಟ್ಟಿಸುತ್ತಾ ಕುಳಿತ ......

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ