ಮನದಲ್ಲಿ ಮಿಂಚಿದ ಮಾತೊಂದು ಹೊರಬರದೆ ಮನದೊಳಗೇ ಉಳಿದುಬಿಡುತ್ತದೆ . ಎಲ್ಲರೆದುರಿಗೆ ಕೆರೆದುಕೊಳ್ಳಲೂ ನಮಗೆ ಮುಜುಗರ . ಆದರೆ ಇಂತಹ ಅಡೆ-ತಡೆಗಳನ್ನು , ಮುಜುಗರವನ್ನು ಒಬ್ಬ ಬರಹಗಾರ ಮೀರಬೇಕಾಗುತ್ತದೆ . ನನಗೂ ಸಹ ಕೆಲವು ವಿಷಯಗಳನ್ನು ಬರೆಯಲು ಮುಜುಗರವೆನಿಸಿತುತಿತ್ತು . ಆದರೆ ಕುಶ್ವಂತ್ ಸಿಂಗ್ ಅವರ ಬರಹಗಳನ್ನು ಓದಿ ನಾನು ಬಹಳಷ್ಟು ತಿಳಿದುಕೊಂಡೆ . ತೊಂಬತ್ತರಾರ ವಯಸ್ಸಿನಲ್ಲಿಯೂ ಅವರು ಹಸಿ-ಹಸಿ ಕಾಮದ ಬಗ್ಗೆ ಬರೆಯುತ್ತಿದ್ದರು .
ಒಬ್ಬ ಬರಹಗಾರನಿಗೆ ಇನ್ನೊಂದು ದೊಡ್ಡ ಸವಾಲೆಂದರೆ ತನ್ನದೇ ಆದ ಓದುಗರ ಬಳಗವನ್ನು ಸೃಷ್ಟಿಸಿಕೊಳ್ಳುವುದು . ಬರಹಗಳ ಪ್ರಕಟಣೆ ಅತಿ ಮುಖ್ಯ ಪಾತ್ರ ವಹಿಸುತ್ತದೆ . ಪ್ರಕಟಿಸುವುದಕ್ಕಿಂತ ಸುಲಭವಾದ ಕೆಲಸವೆಂದರೆ ನೀರಿನ ಮೇಲೆ ನಡೆಯುವುದು . ನೀವು ರಾಷ್ಟ್ರಪತಿಯ ಮಗನಾದರೂ ಪತ್ರಿಕೆಯವರು ನಿಮ್ಮನ್ನು ಕಾಯಿಸದೇ ಬಿಡುವುದಿಲ್ಲ . "ನಿಮ್ಮ ಬರಹ ಚೆನ್ನಾಗಿದೆ , ಇದನ್ನು ಪ್ರಕಟಿಸುತ್ತೇವೆ " ಎಂದು ಹೇಳಿದವರು ಮಾಯವಾಗಿ ಬಿಡುತ್ತಾರೆ .ಒಂದು ದಿನ ಆಕಸ್ಮಿಕವಾಗಿ ಬೋಂಡ ಅಂಗಡಿಯವನು ಬೋಂಡ ಕಟ್ಟಿಕೊಟ್ಟ ಪೇಪರ್ ನಲ್ಲಿ ನಮ್ಮ ಲೇಖನ ಕಾಣಿಸುತ್ತದೆ . ಒಬ್ಬ ಪತ್ರಕರ್ತನಿಗೆ ಅದೆಷ್ಟು ಒತ್ತಡಗಳಿರುತ್ತವೋ ? ನನಗೆ ಗೊತ್ತಿಲ್ಲ . ನಾನು ಸುದ್ದಿ ಮನೆಯಲ್ಲಿ ಕೆಲಸ ಮಾಡಿಲ್ಲ.
ಕಾವ್ಯಾತ್ಮಕ ಬರಹಗಳಿಗೂ , ಪತ್ರಿಕೆಗೆ ಬರೆಯುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ . ಸಾಹಿತ್ಯವನ್ನು ಒಂದು ವರ್ಗದ ಜನ ಮಾತ್ರ ಓದುತ್ತಾರೆ ಆದರೆ ಪತ್ರಿಕೆಯನ್ನು ಎಲ್ಲಾ ವರ್ಗದ ಜನ , ವಯಸ್ಸಿನ ಮಿತಿಯಿಲ್ಲದೆ ಓದುತ್ತಾರೆ . ನಾನು ಒಬ್ಬ ಪತ್ರಕರ್ತನಾಗಬೇಕು ಎಂದು ಕನಸು ಕಟ್ಟಿದ್ದೆ , ಈಗಲೂ ಅದು ಜೀವಂತ ಕೂಡ . ಪತ್ರಕರ್ತನಾಗುವುದಕ್ಕೆ ಕೆಲ ಸಿದ್ದತೆಗಳನ್ನೂ ಮಾಡಿಕೊಂಡಿದ್ದೆ , ಮಾಡಿಕೊಳ್ಳುತ್ತಿದ್ದೇನೆ ಕೂಡ .
'ಖಾರಾಬಾತು' ಎನ್ನುವುದು ನನ್ನ ಹೊಸ ಕಲ್ಪನೆ . ನಾನು ಪ್ರಯತ್ನಿಸಿದ ಕೆಲವು ಲೇಖನಗಳು , ಪತ್ರಿಕೆಗಳು ರಿಜೆಕ್ಟ್ ಮಾಡಿದ ನನ್ನ ಕೆಲವು ಬರಹಗಳನ್ನು ಈ ಸರಣಿಯಲ್ಲಿ ನಿಮ್ಮ ಮುಂದಿಡುತ್ತೇನೆ . ತಿರಸ್ಕರಿಸಲು ಬಹಳ ಕಾರಣಗಳಿವೆ . ಸಣ್ಣ ಕಾಲಂ ಒಂದಕ್ಕೆ ದೊಡ್ಡ ಲೇಖನ ಬರೆದಿರಬಹುದು , ದೊಡ್ಡ ಕಾಲಂಗೆ ಸಣ್ಣ ಲೇಖನ ಬರೆದಿರಬಹುದು , ಸಬ್ಜೆಕ್ಟ್ ವಿವಾದತ್ಮಕವಾಗಿರಬಹುದು , ಇನ್ಫ್ಲುಯೆನ್ಸ್ ಕೊರತೆಯಿರಬಹುದು , ಟೂ ಮಚ್ ಇಂಟಲೆಕ್ಚುಯಲ್ ಆಗಿರಬಹುದು ಹೀಗೆ ....
ಈ ಅಂಕಣಕ್ಕೆ ಆದಿ , ಅಂತ್ಯ ಎರಡೂ ಇಲ್ಲ . ದೇಶ , ಭಾಷೆ ಕಾಲ ಮಿತಿಗಳ ಚೌಕಟ್ಟಿಲ್ಲ . ಮೊದಲ ಬರಹ ಪತ್ರಿಕೋದ್ಯಮದಿಂದಲೇ ಶುರು ಮಾಡಿಬಿಡುತ್ತೇನೆ .
ನಾನು ದಿನವೂ ತಪ್ಪದೇ ಮೂರರಿಂದ ನಾಲ್ಕು ಪತ್ರಿಕೆಗಳನ್ನು ಓದುತ್ತೇನೆ . ನನಗೆ ಸುದ್ದಿಯ ಮೇಲಿನ ಆಸಕ್ತಿ ಇದೆ ಎಂದಲ್ಲ , ಪತ್ರಿಕೆಯ ವರದಿಗಳಲ್ಲಿರುವ ದೋಷಗಳು , ಅವುಗಳಲ್ಲಿರುವ ತಮಾಷೆಗಳು , ಅಪ್ರಯತ್ನಪೂರ್ವಕವಾಗಿ ಸಿಡಿಯುವ ಹಾಸ್ಯಗಳನ್ನು ನಾನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ . ಕೆಲವರು ಹಾಸ್ಯ ನಶಿಸಿ ಹೋಗುತ್ತಿದೆಯೆಂದು ಅಳಲು ತೋಡಿಕೊಳ್ಳುತ್ತಾರೆ . ಅವರೆಲ್ಲರಿಗೂ ಪ್ರಾಮಾಣಿಕವಾಗಿ ಪತ್ರಿಕೆ ಓದಿ ಎಂದು ಹೇಳುತ್ತೇನೆ . ಯಾರೂ ಸಹ ಬೇಕೆಂದೇ ತಪ್ಪುಗಳನ್ನು ಮಾಡುವುದಿಲ್ಲ , ಅಚಾನಕ್ ಆಗಿ ತಪ್ಪುಗಳು ಆಗಿ ಬಿಡುತ್ತವೆ , ಇದರಲ್ಲಿ ಪತ್ರಕರ್ತ ಎತ್ತಿದ ಕೈ .
ಕೆಲ ವರ್ಷಗಳ ಹಿಂದೆ ಪ್ರಿಯಾಂಕ ಗಾಂಧಿಯವರು ಗಂಡು ಮಗುವಿಗೆ ಜನನ ನೀಡಿದರು . ಆಗ ಪ್ರಿಯಾಂಕ ಗಾಂಧಿಯವರಿಗೆ ಎಲ್ಲಾ ಕಾಂಗ್ರೆಸ್ ಆಡಳಿತದಲ್ಲಿರುವ ಮುಖ್ಯಮಂತ್ರಿಗಳು ಶುಭಕೋರಿದ್ದರು . ಆಗಿನ ಸಿಎಂ ಎಸ್. ಎಂ ಕೃಷ್ಣ ಸಹ ಶುಭಕೋರಿದ್ದರು . ಈ ವಿಷಯವನ್ನು ಎಲ್ಲಾ ಪತ್ರಿಕೆಗಳೂ ಪ್ರಕಟಗೊಳಿಸಿದ್ದವು .ಇದನ್ನು ವರದಿ ಮಾಡಿದ ಕನ್ನಡದ ಪತ್ರಿಕೆಯೊಂದು - ' ಪ್ರಿಯಾಂಕಾಗೆ ಗಂಡು ಮಗು ಜನನ , ಕೃಷ್ಣ ಪುಳಕ ' ಎಂಬ ಶೀರ್ಷಿಕೆ ನೀಡಿತ್ತು . ಪ್ರಿಯಾಂಕಾಗೆ ಮಗುವಾದರೆ ಇವರಿಗೇಕೆ ಪುಳಕ ? ಎಂದು ನಾನು ನಕ್ಕಿದ್ದೆ . ಮರು ದಿನ 'ಕೃಷ್ಣ ಪುಳಕಗೊಂಡಿಲ್ಲ' ಎಂದು ಸ್ಪಷ್ಟನೆ ನೀಡಿದರೂ ನೀಡಿರಬಹುದು , ನನಗೆ ಗೊತ್ತಿಲ್ಲ .
ಇನ್ನೂ ಬಹಳ ದೊಡ್ಡ ತಪ್ಪೆಂದರೆ ಬದುಕಿರುವರನ್ನು ಸಾಯಿಸುವುದು . ಸುದ್ದಿ ಮನೆಯಲ್ಲಿ ಸಾವಿನ ಬಗ್ಗೆ ಬಂದ ವರ್ತಮಾನವನ್ನು ಎರಡು ಬಾರಿ ಖಚಿತಪಡಿಸಿಕೊಂಡು ನಂತರ ಪ್ರಕಟಿಸುತ್ತಾರೆ . ಇತ್ತೀಚಿಗೆ ಕನ್ನಡದ ಪತ್ರಿಕೆಯೊಂದು ಶಿಲ್ಪಾ ಶೆಟ್ಟಿ ಅವರ ತಂಗಿ ಶಮಿತಾ ಶೆಟ್ಟಿಯವರನ್ನು ಸಾಯಿಸಿ , ನಂತರ ಕ್ಷಮೆ ಕೇಳಿತು .
ಪತ್ರಕರ್ತರು ಬೇರೆ ವೃತ್ತಿಯ ಮೇಲೆ , ವ್ಯಕ್ತಿಗಳ ಮೇಲೆ ಕಟೂಕ್ತಿಯಿಂದ ಕಾಲೆಳೆಯುವುದು , ಲೇವಡಿ ಮಾಡುವುದು , ಕುಚೋದ್ಯ ಮಾಡುವುದು ಸಾಮಾನ್ಯ . ಆದರೆ ಪತ್ರಕರ್ತರ ಮೇಲೆಯೇ ಯಾಕೆ ಕುಚೋದ್ಯ ಮಾಡಬಾರದು ? . ಒಂದು ಕೈ ನೋಡೇ ಬಿಡೋಣ .....
* ಪತ್ರಕರ್ತರು ನಾಯಿಯಿದ್ದಂತೆ , ಏನಾದರೂ ಚಲಿಸಿದರೆ ಸಾಕು ಬೊಗಳುತ್ತಾರೆ - ಶೋಪನ್ ಹೋವರ್
* ಜಗತ್ತಿನಲ್ಲಿ ಏನಾಗುತ್ತಿದೆ ಎಂದು ಪತ್ರಿಕೆಗಳ ಮೂಲಕ ತಿಳಿಯುವುದೆಂದರೆ , ಸೆಕೆಂಡಿನ ಮುಳ್ಳಿನಿಂದ ಸಮಯ ನೋಡಿದಂತೆ - ಬೆನ್ ಹೆಚ್
* ಈ ಬಾರು ಎಷ್ಟು ಕಿಕ್ಕಿರಿದಿತ್ತೆಂದರೆ ಒಬ್ಬ ಪತ್ರಕರ್ತನಿಗೆ ಒಂದು ಬಿಯರ್ ತರಲು ನಲವತ್ತೈದು ನಿಮಿಷ ಬೇಕಾಯಿತು - ಡೇವ್ ಬೆರ್ರಿ
* ಪತ್ರಿಕೋದ್ಯಮ ಒಂದು ಆರ್ಗನೈಜ್ಡ್ ಗಾಸಿಪ್ - ಎಡ್ವರ್ಡ್ ಎಗ್ಗ್ಲೆಸ್ತೊನ್
* ಪತ್ರಿಕೋದ್ಯಮವೆಂದರೆ ಲಾರ್ಡ್ ಜೇಮ್ಸ್ ಬದುಕಿದ್ದನೆಂದು ಗೊತ್ತಿರದ ಜನರಿಗೆ ' ಲಾರ್ಡ್ ಜೇಮ್ಸ್ ವಿಧಿವಶ ' ಎಂದು ಸುದ್ದಿ ನೀಡುವುದು . - ಜಿ. ಕೆ . ಚೆಸ್ಟೆರೋನ್
* ಏನನ್ನೂ ಓದದ ವ್ಯಕ್ತಿ , ಬರೀ ಪತ್ರಿಕೆಯನ್ನು ಓದುವವನಿಗಿಂತ ಮೇಲು - ಥಾಮಸ್ ಜೆಫರ್ಸನ್
* ನಾನು ಸಮಾನತೆಯಲ್ಲಿ ನಂಬಿಕೆ ಹೊಂದಿದ್ದೇನೆ . ವರದಿಗಾರರು ಹಾಗೂ ಫೋಟೋಗ್ರಾಫರ್ ಗಳನ್ನು ಹೊರತು ಪಡಿಸಿ - ಮಹಾತ್ಮ ಗಾಂಧಿ .
* ಪತ್ರಿಕೆಗಳು ನೀಡುವ ಸುದ್ದಿಯ ಮೇಲೆ ಅವಲಂಬಿತವಾಗಬಾರದೆಂದು ನಾನು ಪತ್ರಕರ್ತನಾದೆ - ಕ್ರಿಸ್ಟೋಫರ್ ಹಿತ್ಚೇನ್ಸ್ .
*ಬೇರೆಯವರ ಪತ್ರಿಕೆಯನ್ನು ಓದುವುದೆಂದರೆ ಬೇರೆಯವರ ಪತ್ನಿಯ ಜೊತೆ ಮಲಗಿದಂತೆ . ಯಾವುದು ಎಲ್ಲೆಲ್ಲಿ , ಹೇಗಿವೆಯೆಂಬುದು ಗೊತ್ತಾಗುವುದಿಲ್ಲ - ಮಾಲ್ಕಂ ಬ್ರಾಡ್ ಬರಿ .
* ಕಾದಂಬರಿಕಾರನಾಗುವಷ್ಟು ಬುಧ್ಧಿವಂತನಲ್ಲದಿದ್ದರೆ , ವಕೀಲನಾಗುವಷ್ಟು ಚಾಲಾಕಿಯಲ್ಲದಿದ್ದರೆ , ಆಪರೇಷನ್ ಮಾಡಲು ಕೈ ನಡುಗುತ್ತಿದರೆ , ಕೊನೆಗೆ ಬೇರೆ ದಾರಿ ಕಾಣದೆ ಪತ್ರಕರ್ತನಾಗುತ್ತಾನೆ - ನಾರ್ಮನ್ ಮೇಲರ್